ಕುಂದಗೋಳ:
ರೈತರಾದ ಈರಣ್ಣ ದೊಡ್ಡೂರ, ನಿಂಗನಗೌಡ ಮರಿಗೌಡ್ರ, ಮಹ್ಮದಹನೀಫ ಉಪ್ಪಾರ ಮತ್ತು ಹಜರೇಸಾಬ ಸೂರಣಗಿ ಎಂಬುವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಗೋವಿನ ಜೋಳಕ್ಕೆ ಬೆಂಕಿ ತಗುಲಿ ಸಂಪೂರ್ಣ ನಾಶವಾಗಿದೆ.
ಹಾನಿಯಾದ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಷಣ್ಮುಖಪ್ಪ ಶಿವಳ್ಳಿ, ರೈತರಿಗೆ ವೈಯಕ್ತಿಕವಾಗಿ ಧನಸಹಾಯ ಮಾಡಿದರು. ಬಳಿಕ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್‌ಗೆ ಕರೆ ಮಾಡಿ ಹಾನಿಯಾದ ಬೆಳೆಯ ಕುರಿತು ಮಾಹಿತಿ ನೀಡಿ ತಕ್ಷಣ ಪರಿಹಾರ ನೀಡುವಂತೆ ಮನವಿ ಮಾಡಿದರು.ಈ ವೇಳೆ ರಾಮನಗೌಡ ಪಾಟೀಲ, ರಾಮಣ್ಣ ಪೂಜಾರ, ಇರ್ಷಾದಅಹ್ಮದ ಹುಲಗೂರ, ಸೋಮಣ್ಣ ಹೊಸಮನಿ, ಕೆ.ಎಂ. ಹಾರೋಬಿಡಿ, ವಿದ್ಯಾಧರ ಅಕ್ಕೂರ, ಶಂಭಣ್ಣ ಬಿಶೇರೊಟ್ಟಿ, ಮಹದೇವಗೌಡ ಕಶೆಟ್ಟಿ, ತಿರಕನಗೌಡ ಬಮ್ಮನಗೌಡ್ರ, ಅಶೋಕ ಹೆಬಸೂರ, ಮಾಬೂಲಿ ನದಾಫ, ಚಿಕ್ಕನಗೌಡ ಬಮ್ಮನಗೌಡ್ರ ಸೇರಿದಂತೆ ಹಲವರಿದ್ದರು.