ಚನ್ನಪಟ್ಟಣ: ತಾಲೂಕಿನ ಅಬ್ಬರುಗುಡ್ಡೆ ಅರಣ್ಯ ಪ್ರದೇಶದಲ್ಲಿ ಭಾನುವಾರ ಸಂಜೆ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು ೨೫ರಿಂದ ೩೦ ಎಕರೆ ಅರಣ್ಯ ಪ್ರದೇಶಕ್ಕೆ ವ್ಯಾಪಿಸಿದೆ. ಅಬ್ಬೂರುಗುಡ್ಡೆ ಅರಣ್ಯ ಪ್ರದೇಶದ ಸೆಕ್ಷನ್-೪ರಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಮೂರೂ ಕಡೆಯೂ ಆವರಿಸಿಕೊಂಡಿದೆ.
ಅಗ್ನಿ ಅವಘಡದಲ್ಲಿ ಸುಮಾರು ೨೫ರಿಂದ ೩೦ ಎಕರೆಯಲ್ಲಿ ಬೆಳೆದಿದ್ದ ಹುಲ್ಲು ಸುಟ್ಟುಹೋಗಿದ್ದು, ಯಾವುದೇ ಪ್ರಾಣಿ ಹಾಗೂ ಮರಗಿಡಗಳಿಗೆ ಹಾನಿಯಾಗಿಲ್ಲ ಎಂದು ವಲಯ ಅರಣ್ಯಾಧಿಕಾರಿ ಮಲ್ಲೇಶ್ ಮಾಹಿತಿ ನೀಡಿದ್ದಾರೆ.
ಕಿಡಿಗೇಡಿಗಳ ಕೃತ್ಯ: ಅಬ್ಬೂರುಗುಡ್ಡೆ ಹಾಗೂ ಕಣ್ಣ ಅರಣ್ಯ ಪ್ರದೇಶ ಹೊಂದಿಕೊಂಡಂತಿದ್ದು, ಕಿಡಿಗೇಡಿಗಳು ಬೆಂಕಿ ಹಾಕಿರುವ ಸಾಧ್ಯತೆಯಿದೆ. ಅಮಾವಾಸ್ಯೆ ದಿನದಂದು ಅರಣ್ಯದಲ್ಲಿ ಯಾರಾದರೂ ಪೂಜೆ ಮಾಡಿರುವುದು ಸಹ ಇದಕ್ಕೆ ಕಾರಣ ಇರಬಹುದು ಎಂಬ ಅನುಮಾನ ಮೂಡಿದೆ.ಪೊಟೋ೧೯ಸಿಪಿಟಿ೪: ಚನ್ನಪಟ್ಟಣ ತಾಲೂಕಿನ ಅಬ್ಬೂರುಗುಡ್ಡೆ ಅರಣ್ಯ ಪ್ರದೇಶದಲ್ಲಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿರುವ ಅಗ್ನಿ ಶಾಮಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ.