ಸುಮಾರು ಮೂರು ಕೋಟಿ ವೆಚ್ಚದಲ್ಲಿ ೧೧ ತಿಂಗಳಲ್ಲಿ ಕಾಮಗಾರಿ ಪೂರ್ಣಗುರುಶಾಂತ ಜಡೆಹಿರೇಮಠಕನ್ನಡಪ್ರಭ ವಾರ್ತೆ ದಾಂಡೇಲಿ
ಕಳೆದ ೨೦೨೫ರ ಫೆ.೧ರಂದು ಸ್ಥಳೀಯ ಶಾಸಕ ಆರ್.ವಿ. ದೇಶಪಾಂಡೆ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೆರಿಸಿದ್ದರು. ಸುಮಾರು ೧೧ ತಿಂಗಳಲ್ಲಿ ಈ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ದಾಂಡೇಲಿ ನಗರ ಉತ್ತರ ಕನ್ನಡ ಜಿಲ್ಲೆಯ ಪ್ರಪ್ರಥಮ ನಗರಸಭೆಯಾಗಿದೆ. ಜನದಟ್ಟಣೆಯು ಸಾಕಷ್ಟಿದೆ. ಆದರೆ ಇಲ್ಲಿ ಇವತ್ತಿನ ವರೆಗೂ ಒಂದು ಅಗ್ನಿಶಾಮಕ ಠಾಣೆ ಇರಲಿಲ್ಲ. ಅಗ್ನಿ ಅವಘಡಗಳು ಸಂಭವಿಸಿದಾಗ ದೂರದ ಹಳಿಯಾಳ, ಜೋಯಿಡಾ ತಾಲೂಕುಗಳಿಂದ ಅಗ್ನಿಶಾಮಕ ದಳದ ತಂಡ ಬಂದು ಅಗ್ನಿ ಅವಘಡ ಹತೋಟಿಗೆ ತರುವ ಸ್ಥಿತಿ ಇದೆ. ನಗರದಲ್ಲಿ ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳವು ಕೂಡ ಸಾಕಷ್ಟು ಸಮಯಗಳಲ್ಲಿ ಅಗ್ನಿ ಅವಘಡಗಳನ್ನು ನಿಯಂತ್ರಿಸಲು ಸಹಾಯ ಮಾಡಿದೆ.
ಆದರೆ ಸರ್ಕಾರದ ಅಗ್ನಿಶಾಮಕ ಠಾಣೆ ಇಲ್ಲಿಯವರೆಗೆ ಇರಲಿಲ್ಲ. ಈ ಕುರಿತು ಸ್ಥಳೀಯರು ಮನವಿ ಮಾಡಿಕೊಂಡಿದ್ದರು. ನಗರಸಭೆಯ ಸಭೆಗಳಲ್ಲಿ ಈ ಕುರಿತು ಹಲವಾರು ಬಾರಿ ಚರ್ಚೆಗೆ ಬಂದು ಅಗ್ನಿಶಾಮಕ ಠಾಣೆ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಬೆಂಕಿ ದುರಂತಗಳು ಸಂಭವಿಸಿದಾಗ ಅಗ್ನಿಶಾಮಕ ದಳ ಸಿಬ್ಬಂದಿ ಬರುವವರೆಗೆ ಬೆಂಕಿಯಿಂದ ಸಾಕಷ್ಟು ಹಾನಿ ಆಗಿರುತ್ತಿತ್ತು. ಕೊನೆಗೂ ಸರ್ಕಾರ ೨೦೨೪-೨೫ನೇ ಸಾಲಿನ ಅವಧಿಯಲ್ಲಿ ಅಗ್ನಿಶಾಮಕ ಠಾಣೆಯ ಕಟ್ಟಡ ಕಾಮಗಾರಿಗೆ ಅನುಮತಿಸಿದೆ. ಸದ್ಯ ಬೇಸಿಗೆಯ ಬಿಸಿಲು ಹೆಚ್ಚಾಗಿದ್ದು, ಯಾವ ಹೊತ್ತಿನಲ್ಲಾದರೂ ಬೆಂಕಿ ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ದಾಂಡೇಲಿ ನಗರ ಕಾಡಿನಂಚಿನಲ್ಲಿದೆ. ಕಾಡಿನಲ್ಲಿ ಒಣಗಿದ ಎಲೆ, ಹುಲ್ಲು ಹೆಚ್ಚಾಗಿರುವುದರಿಂದ, ಇನ್ನು ಮನುಷ್ಯರು ಮಾಡುವ ತಪ್ಪಿನಿಂದ ಬೀಡಿ, ಸಿಗಾರ ಸೇದಿ ತುಂಡುಗಳನ್ನು ಎಸೆಯುವುದರಿಂದ, ಅರಣ್ಯದಲ್ಲಿ ಬೆಂಕಿ ಹಚ್ಚುವುದು. ಬೇಟೆ, ಕೃಷಿ ಉದ್ದೇಶಕ್ಕಾಗಿ ಬೆಂಕಿ ಹಚ್ಚುವುದರಿಂದ ಆಗುವ ಬೆಂಕಿ ಅನಾಹುತವನ್ನು ತಡೆಯಲು ಅಗ್ನಿಶಾಮಕ ದಳ ಠಾಣೆ ಉದ್ಘಾಟನೆಗೊಳ್ಳುವುದು ಅವಶ್ಯವಾಗಿದೆ. ಬೆಂಕಿಯನ್ನು ನಂದಿಸುವ ಕೆಲಸ ಮಾಡುವ ಅಗ್ನಿಶಾಮಕ ಠಾಣೆ ಕೇಂದ್ರದ ಉದ್ಘಾಟನೆ ಬೇಗ ಆಗಬೇಕೆಂದು ಸಾರ್ವಜನಿಕರ ಬೇಡಿಕೆಯಾಗಿದೆ.ಬೇಕಾಗುವ ಸಿಬ್ಬಂದಿ ನೇಮಕವಾಗಿಲ್ಲ:
ಶೀಘ್ರದಲ್ಲಿ ಅಗ್ನಿಶಾಮಕ ಠಾಣೆಗೆ ಸಿಬ್ಬಂದಿ ನೇಮಕ ಆಗಲಿದೆ. ಮೂಲಭೂತ ಸೌಕರ್ಯ ಒದಗಿಸುವ ಕೆಲಸ ನಡೆಯುತ್ತಿದೆ. ಆದಷ್ಟು ಬೇಗನೆ ಅಗ್ನಿಶಾಮಕ ಠಾಣೆಯನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸುನೀಲ ಕುಮಾರ ತಿಳಿಸಿದ್ದಾರೆ.