ಆಗ್ರ್ಯಾನಿಕ್ ಫ್ಯಾಕ್ಟರಿ ಮಾಲೀಕರು ಕಾರ್ಮಿಕರ ವಸತಿಗಾಗಿ ಶೆಡ್ ನಿರ್ಮಿಸಿ ಕೊಟ್ಟಿದ್ದರು. ಆಗ್ರ್ಯಾನಿಕ್ ಫ್ಯಾಕ್ಟರಿ ನಾಲ್ವರಿಗೆ ಒಂದು ಶೆಡ್ ರೂಮ್‌ಗಳಲ್ಲಿ ಅಡುಗೆ ಮಾಡಿಕೊಳ್ಳಲು ಗ್ಯಾಸ್ ಸಿಲಿಂಡರ್ ಅಳವಡಿಸಿದ್ದರು.
ದಾಬಸ್‍ಪೇಟೆ: ಗ್ಯಾಸ್ ಲೀಕೆಜ್‌ನಿಂದಾಗಿ ಅಗ್ನಿ ದುರಂತ ಸಂಭವಿಸಿ ಅವಘಡದಲ್ಲಿ ಇಬ್ಬರು ಕಾರ್ಮಿಕರಿಗೆ ಬೆಂಕಿ ತಗುಲಿ, ಬೆಂಕಿಯ ಕೆನ್ನಾಲಿಗೆಯಿಂದ ಇಡೀ ದೇಹ ಸುಟ್ಟ ಗಾಯಗಳಿಂದ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನೆಲಮಂಗಲ ತಾಲೂಕಿನ ಕೆಂಪಲಿಂಗನಹಳ್ಳಿ ಗ್ರಾಮದಲ್ಲಿರುವ ಆಗ್ರ್ಯಾನಿಕ್ ಫ್ಯಾಕ್ಟರಿಗೆ ಸಂಬಂಧಿಸಿದ ಶೆಡ್‌ನಲ್ಲಿ ಈ ಘಟನೆ ನಡೆದಿದ್ದು, ಬಿಹಾರ್ ಮೂಲದ ಬಿಕಾರಿ ನಾಯಕ್ (24) ಮತ್ತು ದೀಪಕ್ ನಾಯಕ್ (26) ಗಾಯಗೊಂಡ ಕಾರ್ಮಿಕರು.ಆಗ್ರ್ಯಾನಿಕ್ ಫ್ಯಾಕ್ಟರಿ ಮಾಲೀಕರು ಕಾರ್ಮಿಕರ ವಸತಿಗಾಗಿ ಶೆಡ್ ನಿರ್ಮಿಸಿ ಕೊಟ್ಟಿದ್ದರು. ಆಗ್ರ್ಯಾನಿಕ್ ಫ್ಯಾಕ್ಟರಿ ನಾಲ್ವರಿಗೆ ಒಂದು ಶೆಡ್ ರೂಮ್‌ಗಳಲ್ಲಿ ಅಡುಗೆ ಮಾಡಿಕೊಳ್ಳಲು ಗ್ಯಾಸ್ ಸಿಲಿಂಡರ್ ಅಳವಡಿಸಿದ್ದರು. ಎಂದಿನಂತೆ ಬೆಳಿಗ್ಗೆ ತಿಂಡಿ ರೆಡಿ ಮಾಡಲು ತೆರಳಿದ್ದ ದೀಪಕ್ ಸಿಲಿಂಡರ್ ಲೀಕ್ ಆಗುತ್ತಿರುವುದು ಗಮನಕ್ಕೆ ಬಾರದೆ ಲೈಟರ್ ಹಚ್ಚಿದ್ದಾನೆ, ಏಕಾಏಕಿ ಗ್ಯಾಸ್ ಲೀಕೇಜ್‌ನಿಂದ ಬೆಂಕಿ ಸ್ಪೋಟಿಸಿ ಇಬ್ಬರಿಗೂ ಬೆಂಕಿ ತಗುಲಿ ಇಬ್ಬರಿಗೂ ದೇಹದ ಮೇಲೆ ಸಂಪೂರ್ಣವಾಗಿ ಸುಟ್ಟಗಾಯಗಳಾಗಿವೆ. ಗಾಯಗೊಂಡ ಇಬ್ಬರನ್ನು ಪಕ್ಕದ ಶೆಡ್ ಕಾರ್ಮಿಕರು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ರಕ್ಷಿಸಿ ಚಿಕಿತ್ಸೆ ನೀಡಿದ್ದಾರೆ. ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೋಟೋ 4 * 5 : ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.