ಕನ್ನಡಪ್ರಭ ವಾರ್ತೆ ಮಳವಳ್ಳಿ
ಎರಡು ಮರಿಗಳನ್ನು ಕಿರುಗಾವಲಿನ ಕುಮಾರ್ ಮತ್ತು ವಡ್ಡರಹಳ್ಳಿ ಕುಳ್ಳೇಗೌಡ ಇಬ್ಬರು ಖರೀದಿಸಿದ್ದಾರೆ. ಬಿಸಿಎ ವ್ಯಾಸಂಗ ಮಾಡುತ್ತಿರುವ ಉಲ್ಲಾಸ್ ಗೌಡರ ಕುಟುಂಬ ಕಳೆದ ಹಲವು ವರ್ಷಗಳಿಂದ ಬಂಡೂರು ಕುರಿ ಸಾಕಾಣಿಕೆಯಲ್ಲಿ ತೊಡಗಿದೆ. ನಾಲ್ಕೈದು ತಿಂಗಳ ಹಿಂದೆ ಶಿವಮೊಗ್ಗ ಮೂಲದ ರೈತರಿಗೆ ಕುರಿಯೊಂದನ್ನು 1.48 ಲಕ್ಷ ರು.ಗೆ ಮಾರಾಟ ಮಾಡಿದ್ದರು.
ತಮ್ಮ ತಾತ ಹಾಗೂ ತಂದೆ ಮನೋಹರ್ (ಮನು) ಅವರಿಂದ ಕಲಿತ ಕುರಿ ಸಾಕಾಣಿಕೆಯನ್ನು ಶಿಕ್ಷಣದ ಜತೆಗೆ ವ್ಯಾಪಾರವಾಗಿ ರೂಢಿಸಿಕೊಂಡಿದ್ದಾರೆ. ಬಂಡೂರು ಕುರಿಗೆ ತನ್ನದೇ ವಿಶೇಷತೆ ಇದೆ. ಈ ತಳಿಯ ಟಗರುಗಳನ್ನು ವಿಶೇಷ ಕಾಳಜಿಯಿಂದ ಸಾಕುತ್ತೇವೆ ಎನ್ನುತ್ತಾರೆ ಉಲ್ಲಾಸ್ ಗೌಡ.ಬಂಡೂರು ತಳಿ ಟಗರು ಉಳಿದ ಸಾಮಾನ್ಯ ಕುರಿಗಳಿಂದ ವಿಭಿನ್ನವಾಗಿ ಕಾಣಿಸುತ್ತದೆ. ನೋಡಲು ಅತ್ಯಂತ ಆಕರ್ಷಣೀಯವಾಗಿ ಸಾಮಾನ್ಯ ಕುರಿಗಿಂತ ಗಿಡ್ಡನೆಯ ಕಾಲು, ಉದ್ದವಾದ ದೇಹವನ್ನು ಹೊಂದಿದೆ. ಬಂಡೂರು ಕುರಿ ಮಾಂಸ ಸಾಮಾನ್ಯ ಕುರಿ ಹಾಗೂ ಮೇಕೆಗಳಿಗಿಂತ ಅತ್ಯುತ್ತಮ ರುಚಿ ನೀಡಲಿದೆ. ಮಾಂಸ ಮಾರಾಟ ತೀರ ಅಪರೂವಾಗಿದೆ.