ಹಲಗೂರು: ಪ್ರತ್ಯೇಕ ಎರಡು ಕಡೆಗಳಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಐದಾರು ಎಕರೆ ಭೂ ಪ್ರದೇಶದಲ್ಲಿ ಗಿಡಮರಗಳು ಸುಟ್ಟು ಕರಕಲಾದ ಘಟನೆ ಹಲಗೂರಿನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಕಸದ ರಾಶಿಗೆ ಬೆಂಕಿ ಹಚ್ಚಿದ ಪರಿಣಾಮ ಬೆಂಕಿ ನಿಯಂತ್ರಣ ತಪ್ಪಿ ವ್ಯಾಪಕವಾಗಿ ಹರಡಿದೆ. ನಂತರ ವಾಸು ಬಾರ್ ಹಿಂಭಾಗದ ಭೀಮಾ ನದಿ ಬಫರ್ ಜೋನ್ ಹಾಗೂ ಚೌಕಿ ಮಠದವರೆಗೆ ಹರಡಿಕೊಂಡಿದ್ದ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾದರು.
ಬೆಂಕಿ ಉರಿಯುತ್ತಿದ್ದ ವೇಳೆ ಅಲ್ಲಿಂದ ಬರುತ್ತಿದ್ದ ಹೊಗೆ ಅಲ್ಲಿನ ವಾಸ ಇರುವ ಮನೆಗಳಿಗೂ ವ್ಯಾಪಿಸಿತು. ಅಗ್ನಿ ಅವಘಡಗಳು ಸಂಭವಿಸಿದರೇ ಮಳವಳ್ಳಿ ಪಟ್ಟಣದಿಂದ ಅಗ್ನಿ ಶಾಮಕ ವಾಹನಗಳು ಅವಘಡ ಸ್ಥಳಕ್ಕೆ ಬರುವಷ್ಟರಲ್ಲಿ ಅಪಾರ ಪ್ರಮಾಣದ ಮೌಲ್ಯಯುತ ವಸ್ತುಗಳು ಬೆಂಕಿಗೆ ಅಹುತಿಯಾಗುತ್ತಿವೆ.ಬಸವನಬೆಟ್ಟ, ಮುತ್ತತ್ತಿ ಅರಣ್ಯ ಪ್ರದೇಶ ಗಳಿದ್ದು ಹಲಗೂರಿನಲ್ಲಿ ಅಗ್ನಿ ಶಾಮಕ ಠಾಣೆ ತೆರೆಯಲು ಸರ್ಕಾರ ಕ್ರಮವಹಿಸಬೇಕು ಎಂದು ಗ್ರಾಮದ ವಿನೋದ್ ಮನವಿ ಮಾಡಿದ್ದಾರೆ. ಬೇಸಿಗೆ ಆರಂಭವಾಗುತ್ತಿದ್ದು, ಬೆಂಕಿ ಕಾಡಿಗೆ ತಗುಲಿದರೆ ವೇಗವಾಗಿ ಹರಡುವ ಸಾಧ್ಯತೆ ಇದೆ. ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಅಗ್ನಿಶಾಮಕ ಠಾಣಾಧಿಕಾರಿ ಹೇಮಂತ್ ಕುಮಾರ್ ತಿಳಿಸಿದರು.
ಕಿಕ್ಕೇರಿ:
ಈ ಪ್ರದೇಶದ ವ್ಯಾಪ್ತಿಯ ಸುತ್ತಮುತ್ತಲು ಚಿರತೆ ಉಪಟಳಕ್ಕೆ ಸಾಕುಪ್ರಾಣಿ, ನಾಯಿ, ಜಾನುವಾರುಗಳು ಬಿಲಿಯಾಗಿದ್ದವು. ಇದರಿಂದ ರೈತರು ಒಂಟಿಯಾಗಿ ತಮ್ಮ ತಮ್ಮ ಜಮೀನುಗಳಿಗೆ ಓಡಾಡಲು ಆತಂಕ ಎದುರಿಸುತ್ತಿದ್ದರು.
ಬೋನಿನಲ್ಲಿದ್ದ ಚಿರತೆ ವೀಕ್ಷಿಸಲು ಗ್ರಾಮಸ್ಥರು ತಂಡೋಪ ತಂಡವಾಗಿ ಆಗಮಿಸಿದ್ದರು. ಜನರನ್ನು ನಿಯಂತ್ರಣ ಮಾಡಿ ಬೋನನ್ನು ತಾಲೂಕು ವಲಯಅರಣ್ಯ ಇಲಾಖೆಗೆ ತೆಗೆದುಕೊಂಡು ಹೋಗಲಾಯಿತು. ಮೇಲಾಧಿಕಾರಿಗಳ ಮಾಹಿತಿ ಮೇರೆಗೆ ಚಿರತೆಯನ್ನು ಸುರಕ್ಷಿತ ಬಂಡಿಪುರ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.