ಹೊಸಕೋಟೆ: ಶ್ರೀನಗರದ ಪಹಲ್ಗಾಮದಲ್ಲಿ ನಡೆದ ಭಯೋತ್ಪಾದನೆ ಘಟನೆಯಲ್ಲಿ ೨೭ ಪ್ರವಾಸಿಗರು ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾಗಿರುವುದು ಹೀನಾಯ ಕೃತ್ಯ, ಇದಕ್ಕೆ ಕೇಂದ್ರ ಬಿಜೆಪಿ ಸರ್ಕಾರದ ಭದ್ರತಾ ವೈಫಲ್ಯವೇ ಕಾರಣ, ಬಿಜೆಪಿ ಸರ್ಕಾರವೇ ಹೊಣೆ ಹೊರಬೇಕೆಂದು ಕೆಪಿಸಿಸಿ ಪರಿಶಿಷ್ಠ ಜಾತಿ ವಿಭಾಗದ ರಾಜ್ಯ ಸಂಚಾಲಕ ಜಿನ್ನಾಗರ ಜಗನ್ನಾಥ್ ತಿಳಿಸಿದರು.
ಮೋದಿಯವರೆ, ಒಂದು ತಲೆಗೆ ಹತ್ತು ತಲೆ ಅಂತ ೨೦೧೪ರ ಚುನಾವಣಾ ಪೂರ್ವ ಭಾಷಣದಲ್ಲಿ ನೀವೇ ಹೇಳಿದ್ದು, ಆದರೆ ಎಷ್ಟು ತಲೆ ತೆಗೆದಿರಿ..? ಈಗ ಕರ್ನಾಟಕದ ಪ್ರವಾಸಿಗ ಮಂಜುನಾಥ್‌ರಾವ್ ಅದೇ ನಿಮ್ಮ ಆರ್ಟಿಕಲ್ ೩೭೦ ಯಾ ಜಮ್ಮು ಕಾಶ್ಮೀರದಲ್ಲಿ ಹೆಣವಾಗಿ ಮಲಗಿದ್ದಾನೆ. ಇಂತಹ ಭಯೋತ್ಪಾದನಾ ಕೃತ್ಯಗಳಿಗೆ ಮೋದಿ ಸರ್ಕಾರವೇ ಕಾರಣ.
ಮೋದಿ ಅವರೇ ಈಗಲಾದರೂ ಎಚ್ಚೆತ್ತುಕೊಳ್ಳಿ, ನಮ್ಮ ದೇಶವನ್ನು ಸುರಕ್ಷತೆಯಾಗಿ ಇರುವುದಕ್ಕೆ ಸರ್ಕಾರವನ್ನು ನಡೆಸಿ, ದೇಶದ ಭದ್ರತೆಯನ್ನು ಮತ್ತಷ್ಟು ಗಟ್ಟಿಗೊಳಿಸಿ, ನಮ್ಮ ದೇಶದ ಭೂಪ್ರದೇಶ ಕಾಪಾಡಿಕೊಳ್ಳಿ ಎಂದು ಒತ್ತಾಯ ಮಾಡುತ್ತೇವೆ ಎಂದರು.