ಫೈರೋಜ್ ಖಾನ್ ಪಠಾಣ ಹತ್ಯೆ: 8 ಆರೋಪಿಗಳ ಬಂಧನ

KannadaprabhaNewsNetwork |  
Published : Apr 13, 2026, 01:45 AM IST
ಬಂಧನ | Kannada Prabha

ಸಾರಾಂಶ

ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಖಾನ್ ಪಠಾಣ ಹತ್ಯೆಯ ಪ್ರಕರಣದಡಿ 8 ಆರೋಪಿಗಳನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಧಾರವಾಡ: ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಖಾನ್ ಪಠಾಣ ಹತ್ಯೆಯ ಪ್ರಕರಣದಡಿ 8 ಆರೋಪಿಗಳನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಸಮೀಪದಲ್ಲಿ ಪ್ರಮುಖ ಆರೋಪಿಗಳಾದ ಮೊಹ್ಮದ್ ಶಾ, ಖೈಫ್‌, ಗೌಸ್, ಸಮೀರ್, ಸದ್ದಾಂ ಜತೆ ಹತ್ಯೆ ಸಂಚು ರೂಪಿಸಿದ ಮೂವರನ್ನು ಬಂಧಿಸಲಾಗಿದೆ.

ಮೂಲಗಳ ಪ್ರಕಾರ ಒಂಭತ್ತು ಜನರ ಗ್ಯಾಂಗ್ ಫೈರೋಜ್ ಹತ್ಯೆ ಮಾಡಿದ್ದು, ಸಂಚು ರೂಪಿಸಿದ್ದ ಅರ್ಬಾಜ್ ಪಠಾಣ್ ಮತ್ತು ಗುಲಾಬ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಹತ್ಯೆಯಲ್ಲಿ ಭಾಗಿಯಾಗಿದ್ದ ಮೊಹ್ಮದ್ ಶಾ, ಖೈಫ್‌, ಗೌಸ್, ಸಮೀರ್, ಸದ್ದಾಂ ಉಪ್ಪಿನಬೆಟಗೇರಿ ಸಂಬಂಧಿಕರ ಮನೆಯಲ್ಲಿ ಇರುವ ಖಚಿತ ಮಾಹಿತಿ ಮೇರೆಗೆ ತೆರಳಿ ಪೊಲೀಸರು ಬಂಧಿಸಿದ್ದಾರೆ.

ಧಾರವಾಡ-ಬೆಳಗಾವಿ ಗಡಿಯಲ್ಲಿ ಫೈರೋಜ್ ಮೊಬೈಲ್ ಬಿಸಾಕಿದ ಹಂತಕರ ಮೊಬೈಲ್ ಲೋಕಷೇನ್ ಆಧರಿಸಿ ಬಂಧಿಸಿದ್ದು, ಸಂಚು ರೂಪಿಸಿದ ಇನ್ನೊಬ್ಬ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ.

ಘಟನೆ ಹಿನ್ನೆಲೆ

ಶುಕ್ರವಾರ ರಾತ್ರಿ ಫೈರೋಜ್ ಖಾನ್ ಪಠಾಣ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಬಂದಂತೆ ದಾಳಿ ನಡೆಸಿದ್ದರು. ತೀವ್ರ ರಕ್ತಸ್ರಾವದಿಂದಾಗಿ ಫೈರೋಜ್ ಸ್ಥಳದಲ್ಲೇ ಮೃತಪಟ್ಟಿದ್ದರು.

ಮದುವೆಗೆ ೧೫ ದಿನಗಳ ಬಾಕಿ ಇದ್ದಾಲೇ ನಡೆದ ಈ ಘಟನೆ ಮಹಾನಗರವನ್ನು ಬೆಚ್ಚಿ ಬೀಳಿಸಿದೆ. ಹಾಶ್ಮಿ ನಗರದಲ್ಲಿ ಬಿಗುವಿನ ವಾತಾವರಣವಿದ್ದು, ಮುಂಜಾಗ್ರತೆಗಾಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದೆ.

ಹತ್ಯೆಗೆ ಕಾರಣ

ಪ್ರಾಥಮಿಕ ತನಿಖೆಯ ಪ್ರಕಾರ, ಈ ಕೊಲೆಗೆ ಹಳೆಯ ವೈಯಕ್ತಿಕ ದ್ವೇಷ ಹಾಗೂ ರಾಜಕೀಯ ವೈಷಮ್ಯವೇ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಫೈರೋಜ್ ಬೆಳವಣಿಗೆ ವಿರೋಧಿಗಳ ಕಣ್ಣು ಕೆಂಪಾಗಿಸಿತ್ತು.

ಶೀಘ್ರ ಕಾರ್ಯಾಚರಣೆ

ಪ್ರಕರಣ ಗಂಭೀರವಾಗಿ ಪರಿಗಣಿಸಿ, ಶೀಘ್ರ ಕಾರ್ಯಾಚರಣೆಯಿಂದ ಆರೋಪಿಗಳನ್ನು ಬಂಧಿಸಿ, ವಿಚಾರಣೆಗೊಳಪಡಿಸಿದೆ. ಹತ್ಯೆ ಹಿಂದಿನ ಸಂಪೂರ್ಣ ಸತ್ಯಾಸತ್ಯತೆ ಶೀಘ್ರವೇ ಹೊರಬರಲಿದೆ ಎಂದು .

ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.ಫೈರೋಜ್ ಪಠಾಣ್ ನಿವಾಸಕ್ಕೆ ವೈಶಾಲಿ ಕುಲಕರ್ಣಿ ಭೇಟಿ, ಸಾಂತ್ವನ

ಧಾರವಾಡ:

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ದಿವಂಗತ ಪೈರೋಜ್ ಪಠಾಣ್ ಅವರ ನಿವಾಸಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯೆ ಹಾಗೂ ಶಾಸಕ ವಿನಯ ಕುಲಕರ್ಣಿ ಅವರ ಪುತ್ರಿ ವೈಶಾಲಿ ವಿನಯ ಕುಲಕರ್ಣಿ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಪೈರೋಜ್ ಪಠಾಣ್ ಅವರ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ ವೈಶಾಲಿ ವಿನಯ ಕುಲಕರ್ಣಿ ಅವರು, ಮೃತರ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ, ಅವರ ದುಃಖದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ. ಪಕ್ಷ ಮತ್ತು ನಮ್ಮ ಕುಟುಂಬದ ವತಿಯಿಂದ ನೀಡಬೇಕಾದ ಎಲ್ಲ ರೀತಿಯ ಸಹಕಾರ ಮತ್ತು ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಪೈರೋಜ್ ಪಠಾಣ್ ಅವರ ಕುಟುಂಬದ ಸದಸ್ಯರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರದಕ್ಷಿಣೆ ಕಿರುಕುಳ ಆರೋಪ, ಮಹಿಳೆ ಆತ್ಮಹತ್ಯೆ
ಮಹಿಳಾ ಮೀಸಲಾತಿ ಮಸೂದೆ ಕುರಿತು ಇಂದಿನಿಂದ ಜಾಗೃತಿ