ಒಂದೇ ಕುಟುಂಬದ ಐವರಿಂದ ಮೊದಲ ಮತದಾನ

KannadaprabhaNewsNetwork |  
Published : May 09, 2024, 12:45 AM IST
ಶಹಾಪುರ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ 184 ರಲ್ಲಿ ಕೊಲ್ಲೂರು ಒಂದೇ ಕುಟುಂಬದ 5 ಜನ ಯುವ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಿ ಸಂಭ್ರಮಿಸಿದರು. | Kannada Prabha

ಸಾರಾಂಶ

ಶಹಾಪುರ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ 184 ರಲ್ಲಿ ಕೊಲ್ಲೂರು ಒಂದೇ ಕುಟುಂಬದ 5 ಜನ ಯುವ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ನಗರದ ಕೊಲ್ಲೂರಿನ ಒಂದೇ ಕುಟುಂಬದ ಐವರು ಯುವ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಿ ಸಂಭ್ರಮಪಟ್ಟರು.ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ 184 ರಲ್ಲಿ ಕೊಲ್ಲೂರು ಒಂದೇ ಕುಟುಂಬದ ಐವರು ಮತ ಚಲಾಯಿಸಿ, ಬೆರಳಿಗೆ ಶಾಯಿ ಹಚ್ಚಿದ ಫೋಟೋ ತೆಗೆಸಿಕೊಂಡು ತಮ್ಮ ಖುಷಿ ಹಂಚಿಕೊಂಡರು.

ಮತ ಚಲಾಯಿಸಿ ಮಾತನಾಡಿದ ಚೈತ್ರ ಬಿ. ಕೊಲ್ಲೂರು ಸಾಮಾಜಿಕ ಬದ್ಧತೆ, ಸದೃಢ ಸರ್ಕಾರಕ್ಕಾಗಿ ನಾನು ಮತದಾನ ಮಾಡಿದ್ದೇನೆ. ಇದೇ ಗುರಿಯೊಂದಿಗೆ ಮುಂದೆಯೂ ನನ್ನ ಹಕ್ಕು ಚಲಾಯಿಸುತ್ತೇನೆ. ಮೊದಲ ಮತದಾನದ ಅನುಭವ ಸದಾ ನನ್ನ ಜೀವನದಲ್ಲಿ ನೆನಪಾಗಿ ಉಳಿಯುತ್ತದೆ ಎಂದರು.

ಯಾವುದೇ ಆಸೆ-ಆಮಿಷಗಳಿಗೆ ನಮ್ಮ ಮತ ಮಾರಿಕೊಳ್ಳದೆ, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿದ್ದು, ಅದರ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುವ ವ್ಯಕ್ತಿಗಳಿಗೆ ಮತ ಕೊಡುವುದು ಸೂಕ್ತವಾಗಿದೆ ಎನ್ನುತ್ತಾರೆ ಯುವ ಮತದಾರರಾದ ಚನ್ನಬಸವ, ಸಂಗಮೇಶ್, ಸತೀಶ್, ಸಂತೋಷ್ ಕೊಲ್ಲೂರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನೀತರಾಜಕುಮಾರ ಪುತ್ಥಳಿ ಅನಾವರಣ
ಬೆಂಗಳೂರು ನಗರದಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣ