ಅಕ್ವೇರಿಯಂಗಳಲ್ಲಿ ಮೀನಿನ ಲೋಕ ಸೃಷ್ಟಿಸಿದ ಮೀನುಗಾರಿಕೆ ಇಲಾಖೆ

KannadaprabhaNewsNetwork |  
Published : Sep 30, 2025, 12:00 AM IST
10 | Kannada Prabha

ಸಾರಾಂಶ

ಮಹಿಳಾ ದಸರಾ, ರೈತ ದಸರಾ ಸಮಾರೋಪಗೊಂಡಿರುವ ಹಿನ್ನೆಲೆಯಲ್ಲಿ ಈಗ ಮೈದಾನ ಖಾಲಿ ಆಗಿದೆ. ಆದರೆ, ಒಂದಷ್ಟು ಜನ ಸೋಮವಾರ ಸಹ ಜೆ.ಕೆ. ಮೈದಾನಕ್ಕೆ ಪ್ರವೇಶಿಸಿ ಮೀನುಗಳನ್ನು ವೀಕ್ಷಿಸುತ್ತಿದ್ದರು. ಈ ಪ್ರದರ್ಶನವು ಮಂಗಳವಾರ ಮಧ್ಯಾಹ್ನದವರೆಗೆ ಇರಲಿದೆ.

ಬಿ. ಶೇಖರ್‌ ಗೋಪಿನಾಥಂಕನ್ನಡಪ್ರಭ ವಾರ್ತೆ ಮೈಸೂರುನಾಡಹಬ್ಬ ದಸರಾ ಮಹೋತ್ಸವ ಪ್ರಯುಕ್ತ ರೈತ ದಸರಾ ವಸ್ತುಪ್ರದರ್ಶನವಾಗಿ ಭಾಗವಾಗಿ ಮೀನುಗಾರಿಕೆ ಇಲಾಖೆಯು ಆಯೋಜಿಸಿರುವ ವಸ್ತುಪ್ರದರ್ಶನ ಹಾಗೂ ಅಕ್ವೇರಿಯಂ ಗ್ಯಾಲರಿಯು ಬಣ್ಣ ಬಣ್ಣದ ಮೀನುಗಳು ನೋಡುಗರನ್ನು ಆಕರ್ಷಿಸುತ್ತಿವೆ.ನಗರದ ಜೆ.ಕೆ. ಮೈದಾನಕ್ಕೆ ಪ್ರವೇಶಿಸುತ್ತಿದಂತೆ ಮತ್ಸ್ಯ ಲೋಕವು ಎದುರಾಗುತ್ತದೆ. ಕಳೆದ 1 ವಾರದಿಂದ ಮಹಿಳಾ ದಸರಾ ಮತ್ತು ರೈತ ದಸರಾ ಹಿನ್ನೆಲೆಯಲ್ಲಿ ಜೆ.ಕೆ. ಮೈದಾನದಲ್ಲಿ ಜನಜಾತ್ರೆ ಇತ್ತು. ಮಹಿಳಾ ದಸರಾ, ರೈತ ದಸರಾ ಸಮಾರೋಪಗೊಂಡಿರುವ ಹಿನ್ನೆಲೆಯಲ್ಲಿ ಈಗ ಮೈದಾನ ಖಾಲಿ ಆಗಿದೆ. ಆದರೆ, ಒಂದಷ್ಟು ಜನ ಸೋಮವಾರ ಸಹ ಜೆ.ಕೆ. ಮೈದಾನಕ್ಕೆ ಪ್ರವೇಶಿಸಿ ಮೀನುಗಳನ್ನು ವೀಕ್ಷಿಸುತ್ತಿದ್ದರು. ಈ ಪ್ರದರ್ಶನವು ಮಂಗಳವಾರ ಮಧ್ಯಾಹ್ನದವರೆಗೆ ಇರಲಿದೆ.ಈ ಪ್ರದರ್ಶನದಲ್ಲಿ ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಸಮಗ್ರವಾದ ಮಾಹಿತಿ ಲಭ್ಯವಿದೆ. ಜಿಲ್ಲಾ ಪಂಚಾಯಿತಿ ಯೋಜನೆಗಳು, ರಾಜ್ಯ ವಲಯ ಮತ್ತು ಕೇಂದ್ರ ವಲಯ ಯೋಜನೆಗಳ ಬಗ್ಗೆ ಮಾಹಿತಿ ಈ ಪ್ರದರ್ಶನದಲ್ಲಿ ರೈತರಿಗೆ ಸಿಗುತ್ತದೆ.ವಿವಿಧ ತಳಿಯ ಅಲಂಕಾರಿಕ ಮೀನುಗಳು, ಗಿಳಿ ಮೀನು, ಗೋಲ್ಡ್‌ ಫಿಶ್, ಡೆವಿಲ್ ಫಿಶ್, ಪ್ಲವರ್‌ ಹಾರ್ನ್, ಆಸ್ಕರ್ ಮೀನು, ಗ್ಯಾಂಬೊಸಿಯಾ, ಗಪ್ಪಿಗಳು, ಅಲೋದನಾ, ಗಪ್ಪಿ, ಟೆಟ್ರಾ, ಅಲಿಗೇಟರ್ ಘಾರ್, ಓರಾಂಡ ಗೋಲ್ಡ್, ಪುಕ್ಕಿನ್ ಗೋಲ್ಡ್, ಡೆವಿಲ್ ಮೀನು, ಸಕ್ಕರ್ ಕ್ಯಾಟ್ ಫಿಶ್, ಟೈಗರ್ ಶಾರ್ಕ್, ಟೈಗರ್ ಬಾರ್ಬ್, ಟಾಕಿಂಗ್ ಕ್ಯಾಟ್, ಗ್ಯಾಂಬೂಸಿಯಾ ಅಫಿನಿಸ್, ಏಂಜಲ್ ಫಿಶ್, ವಿಡೋ ಟೆಟ್ರಾ ಸೇರಿದಂತೆ 40 ರಿಂದ 50 ತಳಿಗಳನ್ನು ಪ್ರದರ್ಶಿಸಲಿದೆ.ಅಲ್ಲದೆ, ಮರಲ್, ತಿಲಾಪಿಯಾ, ಪಾಕು (ರೂಪ), ಕಾಟ್ಲಾ, ರೋಹು, ಮಹಶೀರ್, ಸಾಮಾನ್ಯ ಗೆಂಡೆ, ಹುಲ್ಲು ಗೆಂಡೆ ಸೇರಿದಂತೆ ವಿವಿಧ ತಳಿಯ ಮೀನುಗಳು ಪ್ರದರ್ಶನದಲ್ಲಿವೆ.ಅಲಂಕಾರಿ ಮೀನು ಕೃಷಿ, ಸಮಗ್ರ ಮೀನು ಕೃಷಿ, ಪಂಜರ ಕೃಷಿ, ಮರಲ್ ಮೀನು ಸಾಕಾಣಿಕೆ ಬಗ್ಗೆ ರೈತರಿಗೆ ಉಪಯುಕ್ತ ಮಾಹಿತಿ ಈ ಮಳಿಗೆಯಲ್ಲಿದೆ.ನದಿ ಭಾಗದಲ್ಲಿ ಡೈನಮೇಟ್ ಬಳಸಿ ಶಿಕಾರಿ ಮಾಡುತ್ತಿರುವ ಬಗ್ಗೆ, ನಿಷೇಧ ಬಗ್ಗೆ ತಿಳಿಸಿದ್ದು ಸಹ್ಯವಲ್ಲದ ಮೀನುಗಾರಿಕೆ ನಡೆಸುವವರಿಗೆ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ ಎಂಬ ಎಚ್ಚರಿಕೆ ಸಂದೇಶ ನೀಡಿಲಾಗಿದೆ. ಗಿಫ್ಟ್ ಪಿಲಾಪಿಯಾ ಕೃಷಿ, ಮಹಶೀರ್ ಡೆಕ್ಕನ್ ಮೀನು, ಪ್ರಧಾನಮಂತ್ರಿ ಮತ್ಸ್ಯ ಸಂಪದಾ ಯೋಜನೆಗಳು, ಬಯೋಪ್ಲಾ ಕೃಷಿ ಬಗ್ಗೆ ತಿಳಿಸಿರುವುದು ವಿಶೇಷವಾಗಿದೆ.----ಬಾಕ್ಸ್... ಬಾರ್ಬೋಡ್ಸ್ ರಾಜ್ಯ ಮೀನುಬಾರ್ಬೋಡ್ಸ್ ಕರ್ನಾಟಿಕಸ್ ಮೀನು ಅನ್ನು ಕರ್ನಾಟಕ ರಾಜ್ಯ ಮೀನಾಗಿದೆ. ಇದನ್ನು ಸಾಮಾನ್ಯವಾಗಿ ಕರ್ನಾಟಿಕ್ ಕಾರ್ಪ್ ಎಂದು ಕರೆಯುತ್ತಾರೆ. ಇದು ದಕ್ಷಿಣ ಭಾರತದ ನದಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಿಹಿ ನೀರಿನ ಮೀನಿನ ತಳಿಯಾಗಿದೆ. ಕರ್ನಾಟಕ ನೈಸರ್ಗಿಕ ಪರಿಸರಿಕ ಮಹತ್ವದ ಒಂದು ಜಾತಿಯಾಗಿದೆ.----ಬಾಕ್ಸ್... ಮಹಶೀರ್ ಮೀನು ಉಳಿಸಿ ಬೆಳೆಸಿಫೋಟೋ- 29ಎಂವೈಎಸ್11----ನಶಿಸಿ ಹೋಗುತ್ತಿರುವ ಜಗತ್ಪ್ರಸಿದ್ಧ ಕ್ರೀಡಾ ಮೀನು ಮಹಶೀರ್ (ಬಿಳಿ ಮೀನು) ಉಳಿಸಿ ಬೆಳಸಲು ಕರೆ ನೀಡಲಾಗಿದೆ.ಮೀನುಗಳ ರಾಜ ಮಹಶೀರ್ ಕರ್ನಾಟಕದ ರಾಜ್ಯದ ಹಲವೆಡೆ ಇದನ್ನು ಪಾರಂಪರಿಕ ಹಾಗೂ ದೈವಿಕ ಮೀನು ಎಂದು ಪರಿಗಣಿಸಲ್ಪಟ್ಟಿದೆ. ಆಕರ್ಷಕ ಬಣ್ಣ, ದೊಡ್ಡ ಶಿರ ಹಾಗೂ ಅಗಲವಾದ ಹುರುಪೆಗಳು, ಮಹಶೀರ್ ಮೀನುಗಳು ಸಾಮಾನ್ಯವಾಗಿ ಹೆಚ್ಚು ಹರಿವಿರುವ ಶುದ್ಧ ನದಿಗಳಲ್ಲಿ ಪವರ್ತ ಪ್ರದೇಶಗಳಲ್ಲಿ ಅಥವಾ ನದಿ ಮೂಲ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಇದು ತೀವ್ರವಾಗಿ ಅಳಿವಿನಂಚಿನಲ್ಲಿರುವ ಸ್ಥಳಿಯ ಮೀನಾಗಿರುತ್ತದೆ.ಅಣೆಕಟ್ಟುಗಳ ನಿರ್ಮಾಣದಿಂದ ನದಿಗಳಲ್ಲಿ ಹಿಂದೆ ಕಾಣುತ್ತಿದ್ದ ಪ್ರವಾಹ, ನೀರಿನ ಹರಿವಿನ ಕ್ಷೀಣತೆ, ಮೊಟ್ಟೆ ತುಂಬಿರುವ ಮೀನು ಮತ್ತು ಮರಿಗಳ ನಾಶ, ಮೊಟ್ಟೆ ಇಡುವ ಮತ್ತು ವಾಸಿಸಲು ಯೋಗ್ಯವಾದ ತಾಣಗಳ ನಾಶ, ಕಾಡು ನಾಶದಿಂದ ಮತ್ತು ನಿರ್ಮಾಣ ಕಾರ್ಯಗಳಿಂದ ನದಿ ಪಾತ್ರದಲ್ಲಿ ಹೂಳು ತುಂಬುವಿಕೆ, ಮೀನು ಶಿಕಾರಿಗೆ ಸ್ಫೋಟಕ ವಸ್ತುಗಳ ರಾಸಾಯನಿಕ ಬಳಸುವಿಕೆಯಿಂದ ಸಂತತಿ ಕ್ಷೀಣಿಸುತ್ತಿದೆ ಎಂದು ಮೀನುಗಾರಿಕೆ ಇಲಾಖೆಯ ಮೈಸೂರು ತಾಲೂಕಿನ ಸಹಾಯಕ ನಿರ್ದೇಶಕಿ ಸಿ.ಎನ್. ಭವಾನಿ ತಿಳಿಸಿದರು.-----ಕೋಟ್...ಫೋಟೋ- 29ಎಂವೈಎಸ್12----ಕಳೆದ 4 ದಿನಗಳಿಂದ ಮೀನುಗಾರಿಕೆ ಇಲಾಖೆಯಿಂದ ವಸ್ತುಪ್ರದರ್ಶನ ಮತ್ತು ಅಕ್ವೇರಿಯಂ ಗ್ಯಾಲರಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರತಿನಿತ್ಯ ಸಾವಿರಾರು ಜನ ಮೀನುಗಳನ್ನು ನೋಡಿ ಖುಷಿ ಪಡುತ್ತಿದ್ದಾರೆ. ಅಲ್ಲದೆ, ಇಲಾಖೆಯ ವಿವಿಧ ಯೋಜನೆಗಳು, ರೈತರಿಗೆ ಸಿಗುವ ಸೌಲಭ್ಯಗಳು ಕುರಿತು ಮಾಹಿತಿ ನೀಡಲಾಗುತ್ತಿದೆ.- ಸಿ.ಎನ್. ಭವಾನಿ, ಸಹಾಯಕ ನಿರ್ದೇಶಕಿ, ಮೀನುಗಾರಿಕೆ ಇಲಾಖೆ, ಮೈಸೂರು ತಾಲೂಕು

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ