ನಾಳೆ ಫಿಟ್ ಹಾಸನ್ ಮ್ಯಾರಥಾನ್

KannadaprabhaNewsNetwork |  
Published : Jul 04, 2026, 01:45 AM IST
3ಎಚ್ಎಸ್ಎನ್5 :  | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ, ಜೀವನಶೈಲಿ ಸಂಬಂಧಿತ ಕಾಯಿಲೆಗಳು ಹಾಗೂ ದೈಹಿಕ ಚಟುವಟಿಕೆಯ ಕೊರತೆಯ ಬಗ್ಗೆ ಹಾಗೂ ಇತರೆ ದುಶ್ಚಟಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕುವೆಂಪು ಯುವಕರ ಸಂಘ ಹಾಸನ ವತಿಯಿಂದ ಜುಲೈ ೫ರಂದು ’ಫಿಟ್ ಹಾಸನ್ ಮ್ಯಾರಥಾನ್ ನಮ್ಮ ನಡೆ ಆರೋಗ್ಯದ ಕಡೆ’ ಎಂಬ ವಿಶೇಷ ಆರೋಗ್ಯ ಜಾಗೃತಿ ಮ್ಯಾರಥಾನ್ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ, ಜೀವನಶೈಲಿ ಸಂಬಂಧಿತ ಕಾಯಿಲೆಗಳು ಹಾಗೂ ದೈಹಿಕ ಚಟುವಟಿಕೆಯ ಕೊರತೆಯ ಬಗ್ಗೆ ಹಾಗೂ ಇತರೆ ದುಶ್ಚಟಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕುವೆಂಪು ಯುವಕರ ಸಂಘ ಹಾಸನ ವತಿಯಿಂದ ಜುಲೈ ೫ರಂದು ’ಫಿಟ್ ಹಾಸನ್ ಮ್ಯಾರಥಾನ್ ನಮ್ಮ ನಡೆ ಆರೋಗ್ಯದ ಕಡೆ’ ಎಂಬ ವಿಶೇಷ ಆರೋಗ್ಯ ಜಾಗೃತಿ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಐ.ಜಿ. ಗಿರೀಶ್ ಕುಮಾರ್‌, ರಂಗೇಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ನಗರದ ಎಂ. ಜಿ. ರಸ್ತೆಯಲ್ಲಿ ಜುಲೈ ೫ರಂದು ಭಾನುವಾರ ಬೆಳಿಗ್ಗೆ ೬.೩೦ಕ್ಕೆ ಮ್ಯಾರಥಾನ್‌ಗೆ ಚಾಲನೆ ದೊರೆಯಲಿದ್ದು, ಪುರುಷರಿಗೆ ೫ ಕಿ. ಮೀ. ಹಾಗೂ ಮಹಿಳೆಯರಿಗೆ ೩ ಕಿ. ಮೀ. ವಿಭಾಗಗಳಲ್ಲಿ ಓಟ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಭಾಗವಹಿಸುವವರಿಗೆ ನೋಂದಣಿ ಶುಲ್ಕವನ್ನು ೯೯ ನಿಗದಿಪಡಿಸಲಾಗಿದ್ದು, ಭಾಗವಹಿಸುವವರಿಗೆ ಟೀ. ಶರ್ಟ್‌, ಜ್ಯೂಸ್, ತಿಂಡಿ ನೀಡಲಾಗುವುದು ಎಂದರು.

ಕೇವಲ ಸ್ಪರ್ಧೆಯ ಉದ್ದೇಶದಿಂದಲ್ಲ, ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಾಮಾಜಿಕ ಅಭಿಯಾನವಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಪ್ರತಿದಿನ ಕನಿಷ್ಠ ಸ್ವಲ್ಪ ಸಮಯವಾದರೂ ವ್ಯಾಯಾಮ, ವಾಕಿಂಗ್ ಅಥವಾ ಓಟದಂತಹ ದೈಹಿಕ ಚಟುವಟಿಕೆಗಳನ್ನು ರೂಢಿಸಿಕೊಳ್ಳುವ ಮೂಲಕ ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂಬ ಸಂದೇಶವನ್ನು ಜನರಿಗೆ ತಲುಪಿಸುವುದು ಕಾರ್ಯಕ್ರಮದ ಪ್ರಮುಖ ಗುರಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಯುವಕರಲ್ಲಿಯೇ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅನಿಯಮಿತ ಆಹಾರ ಪದ್ಧತಿ, ಒತ್ತಡದ ಜೀವನ, ವ್ಯಾಯಾಮದ ಕೊರತೆ ಹಾಗೂ ಮಾಲಿನ್ಯದಂತಹ ಕಾರಣಗಳಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ತಿಳಿಸುವ ಪ್ರಯತ್ನವಾಗಿ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಹೇಳಿದರು.

ಆರೋಗ್ಯದ ಜೊತೆಗೆ ಪರಿಸರ ಸಂರಕ್ಷಣೆಯ ಸಂದೇಶವನ್ನೂ ಕಾರ್ಯಕ್ರಮದ ಮೂಲಕ ಸಾರಲಾಗುತ್ತಿದೆ. ಹಸಿರು ಪರಿಸರ, ಸ್ವಚ್ಛ ನಗರ ಹಾಗೂ ಮಾಲಿನ್ಯ ನಿಯಂತ್ರಣದ ಅಗತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಆರೋಗ್ಯ ಕಾಪಾಡೋಣ ಪರಿಸರ ಉಳಿಸೋಣ ಎಂಬ ಘೋಷವಾಕ್ಯದೊಂದಿಗೆ ಮ್ಯಾರಥಾನ್ ನಡೆಯಲಿದೆ. ಫಿಟ್ ಹಾಸನ್, ಆರೋಗ್ಯಕರ ಹಾಸನ್, ತಂಬಾಕು ಮುಕ್ತ ಹಾಸನ್, ಸ್ವಚ್ಛ ಹಾಸನ್ ಹಾಗೂ ಹಸಿರು ಹಾಸನ್ ಎಂಬ ಪರಿಕಲ್ಪನೆಗಳನ್ನು ಜನಾಂದೋಲನವಾಗಿಸುವ ಗುರಿಯನ್ನು ಸಂಘ ಹೊಂದಿದೆ ಎಂದರು. ಈಗಾಗಲೇ ೫೦೦ ಜನ ಸ್ಪರ್ದಾಳುಗಳು ನೋಂದಾಯಿಸಿಕೊಂಡಿದ್ದು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ಸರ್ಕಾರಿ ಹಾಗೂ ಖಾಸಗಿ ನೌಕರರು, ಕ್ರೀಡಾಪಟುಗಳು, ಆರೋಗ್ಯಾಸಕ್ತರು ಸೇರಿದಂತೆ ಜಿಲ್ಲೆಯ ಎಲ್ಲ ವರ್ಗದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಆಸಕ್ತರು ಮುಂಗಡವಾಗಿ ನೋಂದಾಯಿಸಿಕೊಂಡು ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ೮೦೭೩೩ ೮೫೨೧೩, ೯೫೯೧೭ ೦೩೩೩೬ ಹಾಗೂ ೯೯೦೦೮ ೮೫೧೮೬ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಕುವೆಂಪು ಯುವಕರ ಸಂಘ ತಿಳಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಕುವೆಂಪು ಯುವಕರ ಸಂಘದ ಗೌರವಾಧ್ಯಕ್ಷ ಡಾ. ಸಿ. ಎನ್. ಜಗದೀಶ್, ಜಿ.ಸಿ. ಧರ್ಮರಾಜ್, ರಾಜೇಶ್, ಕಂಚಮಾರನಹಳ್ಳಿ ಕಾಂತರಾಜು, ದಯಾನಿಧಿ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಲಾಖೆಗಳ ಸಮನ್ವಯತೆಗೆ ಡ್ಯಾಶ್‌ಬೋರ್ಡ್‌ ರಚಿಸಿ
ಸ್ಪಿನ್ ಮಾಂತ್ರಿಕರಂತೆ ಮಾತುತಿರುಗಿಸುತ್ತಿರಾ: ಕೃಷ್ಣ ತರಾಟೆ