ಐದು ಗ್ಯಾರಂಟಿ ಯೋಜನೆಗಳು ಕಟ್ಟ ಕಡೆಯ ಜನಾಂಗಕ್ಕೂ ತಲುಪಿಸಬೇಕು: ದರ್ಶನ್ ಪುಟ್ಟಣ್ಣಯ್ಯ

KannadaprabhaNewsNetwork | Published : Dec 25, 2024 12:51 AM

ಸಾರಾಂಶ

ರಾಜ್ಯ ಸರ್ಕಾರ ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಐದು ಗ್ಯಾರೆಂಟಿ ಯೋಜನೆ ಜಾರಿಗೊಳಿಸಿದ್ದಾರೆ. ಅಧಿಕಾರಿಗಳು, ಅನುಷ್ಠಾನ ಸಮಿತಿ ಸದಸ್ಯರು ಸಭೆ ನಡೆಸಿ ಲೋಪದೋಷಗಳಿದ್ದರೆ ಸರಿಪಡಿಸಿ ಪ್ರತಿ ಕುಟುಂಬಕ್ಕೂ ಸೌಲಭ್ಯ ತಲುಪುವಂತೆ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಅಧಿಕಾರಿಗಳು ಹಾಗೂ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು ಜತೆಗೂಡಿ ಕಟ್ಟ ಕಡೆಯ ಜನಾಂಗದವರಿಗೂ ತಲುಪಿಸುವ ಕೆಲಸ ಮಾಡಬೇಕು ಎಂದು ಶಾಸಕ ದರ್ಶನ್‌ಪುಟ್ಟಣ್ಣಯ್ಯ ಹೇಳಿದರು.

ಪಟ್ಟಣದ ತಾಪಂ ಕಟ್ಟಡದಲ್ಲಿ ನೂತನವಾಗಿ ಆರಂಭಗೊಂಡ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಕಚೇರಿ ಉದ್ಘಾಟಿಸಿ ಮಾತನಾಡಿ, ಗ್ಯಾರಂಟಿ ಯೋಜನೆ ಸೌಲಭ್ಯ ಪ್ರತಿಯೊಬ್ಬರಿಗೂ ತಲುದಾಗ ಮಾತ್ರ ಯೋಜನೆ ಯಶಸ್ಸುಕಾಣಲು ಸಾಧ್ಯವಾಗುತ್ತದೆ ಎಂದರು.

ಗ್ಯಾರಂಟಿ ಯೋಜನೆಯಿಂದ ಜನರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಜತೆಗೆ ಹಳ್ಳಿಗಳಲ್ಲಿ ಹಣಕಾಸಿನ ವಹಿವಾಟು ತುಂಬಾ ಚನ್ನಾಗಿ ನಡೆಯುತ್ತಿದೆ. ಅಧಿಕಾರಿಗಳು ಹಾಗೂ ಅನುಷ್ಠಾನ ಸಮಿತಿ ಸದಸ್ಯರು ಜತೆಗೂಡಿ ಕೆಲಸ ಮಾಡಬೇಕು ಎಂದರು.

ಕೆಪಿಸಿಸಿ ಸದಸ್ಯ ಬಿ.ರೇವಣ್ಣ ಮಾತನಾಡಿ, ರಾಜ್ಯ ಸರ್ಕಾರ ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಐದು ಗ್ಯಾರೆಂಟಿ ಯೋಜನೆ ಜಾರಿಗೊಳಿಸಿದ್ದಾರೆ. ಅಧಿಕಾರಿಗಳು, ಅನುಷ್ಠಾನ ಸಮಿತಿ ಸದಸ್ಯರು ಸಭೆ ನಡೆಸಿ ಲೋಪದೋಷಗಳಿದ್ದರೆ ಸರಿಪಡಿಸಿ ಪ್ರತಿ ಕುಟುಂಬಕ್ಕೂ ಸೌಲಭ್ಯ ತಲುಪುವಂತೆ ಕೆಲಸ ಮಾಡಬೇಕು ಎಂದರು.

ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆಯಲ್ಲಿ ಕೆಲವು ಲೋಪದೋಷಗಳು ಕಂಡು ಬರುತ್ತಿವೆ. ಜಕ್ಕನಹಳ್ಳಿಯಿಂದ ಬರುವಂತ ಸಾರಿಗೆ ಬಸ್‌ಗಳು ಶಾಲಾ-ಕಾಲೇಜುಗಳ ಮಕ್ಕಳು ಕಂಡ ತಕ್ಷಣ ಬಸ್ ನಿಲುಗಡೆ ಮಾಡುತ್ತಿಲ್ಲ. ಗೃಹ ಲಕ್ಷ್ಮೀಯೋಜನೆಯಲ್ಲಿ ಕೆಲವು ಮಹಿಳೆಯರಿಗೆ ಸವಲತ್ತು ತಲುಪುತ್ತಿಲ್ಲ ಎಂಬ ಆರೋಪಗಳಿವೆ ಇವುಗಳನ್ನು ಸರಿಪಡಿಸಿ ಎಂದರು.

ಗ್ಯಾರಂಟಿ ಯೋಜನೆ ಅಧ್ಯಕ್ಷ ಎಚ್.ಕೃಷ್ಣೇಗೌಡ ಮಾತನಾಡಿ, ಸರ್ಕಾರ ಗ್ಯಾರೆಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಮಿತಿ ರಚಿಸಿದೆ. ಎಲ್ಲರೂ ಜತೆಗೂಡಿ ಸರ್ಕಾರ ಕಾರ್‍ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಸಮಿತಿಯೊಂದಿಗೆ ಜತೆಗೂಡಿ ಕೆಲಸ ಮಾಡಬೇಕು ಎಂದರು.

ಸಭೆಯಲ್ಲಿ ಅನುಷ್ಠಾನ ಸಮಿತಿ ಕಾರ್‍ಯದರ್ಶಿ, ಇಒ ಲೋಕೇಶ್‌ಮೂರ್ತಿ, ಸಮಿತಿ ಸದಸ್ಯರಾದ ಸಿದ್ದಲಿಂಗಯ್ಯ, ಎಸ್.ಕುಮಾರ್, ಪ್ರಕಾಶ್, ಜಿ.ಲಾವಣ್ಯ, ಬಿ.ಚನ್ನೇಗೌಡ, ನಿಂಗರಾಜು, ಎಲ್.ಎಸ್.ಜಗದೀಶ್, ಶ್ರೀಕಂಠ, ಅಯಾಜ್ ಪಾಷ, ಅನಿಲ್‌ಕುಮಾರ್ (ಡಿ.ಕೃಷ್ಣ), ಸಿ.ಎಂ.ಶ್ರೀಕಾಂತ್, ಎ.ಆರ್.ಮೋಹನ್‌ಕುಮಾರ್, ರತಿ, ಟಿ.ಎನ್.ಧರ್ಮ ಸೇರಿದಂತೆ ಹಲವರು ಇದ್ದರು.

Share this article