ಬಡಜನರನ್ನು ತಲುಪಿದ ಪಂಚ ಗ್ಯಾರಂಟಿ

KannadaprabhaNewsNetwork |  
Published : Dec 11, 2025, 02:00 AM IST
ಕ್ಯಾಪ್ಷನ8ಕೆಡಿವಿಜಿ43, 44 ದಾವಣಗೆರೆಯಲ್ಲಿ ಪಂಚ ಗ್ಯಾರಂಟಿಗಳ ಅಧ್ಯಕ್ಷರಾದ ಶ್ಯಾಮನೂರು ಟಿ. ಬಸವರಾಜು  ಅಧ್ಯಕ್ಷತೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. | Kannada Prabha

ಸಾರಾಂಶ

ಜಿಲ್ಲೆಯಲ್ಲಿರುವ ಬಡ ಜನರಿಗೆ ಪಂಚ ಗ್ಯಾರಂಟಿಗಳು ತಲುಪುತ್ತಿದ್ದು ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕಾರ್ಯ ಅಭಿನಂದನಾರ್ಹ ಎಂದು ಜಿಲ್ಲಾ ಪಂಚ ಗ್ಯಾರಂಟಿಗಳ ಅಧ್ಯಕ್ಷ ಶ್ಯಾಮನೂರು ಟಿ. ಬಸವರಾಜು ತಿಳಿಸಿದರು.

ದಾವಣಗೆರೆ: ಜಿಲ್ಲೆಯಲ್ಲಿರುವ ಬಡ ಜನರಿಗೆ ಪಂಚ ಗ್ಯಾರಂಟಿಗಳು ತಲುಪುತ್ತಿದ್ದು ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕಾರ್ಯ ಅಭಿನಂದನಾರ್ಹ ಎಂದು ಜಿಲ್ಲಾ ಪಂಚ ಗ್ಯಾರಂಟಿಗಳ ಅಧ್ಯಕ್ಷ ಶ್ಯಾಮನೂರು ಟಿ. ಬಸವರಾಜು ತಿಳಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಎರ್ಪಡಿಸಿದ್ದ ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಪಂಚ ಗ್ಯಾರಂಟಿಗಳ ಅನುಷ್ಠಾನ ವೇಳೆ ಕೆಲವು ಲೋಪದೋಷ, ತೊಡಕುಗಳು ಉಂಟಾಗಬಹುದು ಎಂದರು.

ಗೃಹಲಕ್ಷ್ಮಿ:

ಗೃಹಲಕ್ಷ್ಮಿ ಯೋಜನೆಯಡಿ 3,86,715 ಫಲಾನುಭವಿಗಳಿದ್ದು ಏಪ್ರಿಲ್ ನಿಂದ ಜುಲೈ 2025 ರ ವರೆಗೆ 290.32 ಕೋಟಿ ರು. ಮೊತ್ತ ಜಮಾ ಮಾಡಲಾಗಿದೆ. ಕಳೆದ ಸೆಪ್ಟೆಂಬರ್ ಮಾಹೆಯಿಂದ ಇಲ್ಲಿಯವರಿಗೆ 4651 ಕುಟುಂಬದ ಯಾಜಮಾನಿಯರು ಮರಣ ಹೊಂದಿರುತ್ತಾರೆ. ಈ ಪೈಕಿ 3750 ಮರಣ ಹೊಂದಿದವರ ಮಾಹಿತಿಯನ್ನು ಪಡೆದು 2,96,8000 ರು. (ಎರಡು ಕೋಟಿ ತೊಂಬತ್ತಾರು ಲಕ್ಷದ ಎಂಟು ಸಾವಿರ ರು. ಮಾತ್ರ) ಸರ್ಕಾರಕ್ಕೆ ಜಮೆ ಮಾಡಲಾಗಿದೆ. ಇನ್ನು ಉಳಿದ 765 ಮಹಿಳೆಯರ ವಿವರ ಬಾಕಿ ಉಳಿದಿದೆ.

ಶಕ್ತಿ :

ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 11,81,16,468 ಮಹಿಳೆಯರು ಉಚಿತ ಪ್ರಯಾಣಿಸಿದ್ದು ಇದಕ್ಕಾಗಿ 346.43 ಕೋಟಿ ರೂ. ಹಣವನ್ನು ಸಾರಿಗೆ ನಿಗಮಕ್ಕೆ ಸರ್ಕಾರ ಪಾವತಿ ಮಾಡಿದೆ.

ಯುವನಿಧಿ:

ಯುವನಿಧಿ ಯೋಜನೆಗೆ ಜುಲೈ ಅಂತ್ಯಕ್ಕೆ ಸಂಬಂಧಿಸಿದAತೆ 9248 ಫಲಾನುಭವಿಗಳಿಗೆ 24.69 ಕೋಟಿ ರೂ. ಹಣವನ್ನು ಡಿಬಿಟಿ ಮೂಲಕ ರ‍್ಗಾವಣೆ ಮಾಡಲಾಗಿದೆ. ಯುವನಿಧಿಯಡಿ ಒಟ್ಟು 167 ಬಗೆಯ ಕೌಶಲ್ಯದಾರಿತ ಉದ್ಯೋಗ ತರಬೇತಿಗಳನ್ನು ನೀಡಲಾಗುತ್ತಿದೆ ಎಂದರು.

ಗೃಹಜ್ಯೋತಿ :

ಗೃಹಜ್ಯೋತಿ ಯೋಜನೆಯಡಿ 515640 ಗ್ರಾಹಕರು ನೋಂದಣಿಯಾಗಿದ್ದು ಉಚಿತ ವಿದ್ಯುತ್ ಬಳಕೆ ಮಾಡಿದ್ದಾರೆ. ಇದಕ್ಕಾಗಿ ರ‍್ಕಾರ 24.41ಕೋಟಿ ರು. ಸಹಾಯಧನ ಪಾವತಿ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾದವ ವಿಠಲರಾವ್ ಮಾತನಾಡಿ, ಪ್ರತಿದಿನ ಅಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮದಡಿ 60ಕ್ಕೂ ಹೆಚ್ಚು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಅಭಿವೃದ್ಧಿ, ಸ್ವಚ್ಚತೆ ಹಾಗೂ ನರೇಗಾ ಕಾಮಗಾರಿ ಕುರಿತು ಭೇಟಿ ನೀಡಿ ಪರಿಶಿಲನೆ ನಡೆಸಲಾಗುತ್ತಿದೆ ಎಂದರು.

ಡಿ.22ಕ್ಕೆ ಬೃಹತ್ ಉದ್ಯೋಗ ಮೇಳ:

ಜಿಲ್ಲೆಯಲ್ಲಿ ಇದೇ ಡಿ.22 ರಂದು ಯುಬಿಡಿಟಿ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಇದರಿಂದ ನಿರುದ್ಯೋಗ ಯುವಕ, ಯುವತಿಯರಿಗೆ ಯುವನಿಧಿ ಫಲಾನುಭವಿಗಳಿಗೆ ತುಂಬಾ ಉಪಯುಕ್ತವಾಗಲಿದೆ. ಈ ಉದ್ಯೋಗ ಮೇಳದಲ್ಲಿ ಕೆಲಸ ಸಿಗದವರಿಗೆ ಯುವನಿಧಿಯಡಿ ನೋಂದಣಿ ಮಾಡಿಸಿಕೊಳ್ಳಲು ಕ್ರಮವಹಿಸಲಾಗಿದೆ ಎಂದರು.

ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷರಾದ ರಾಜೇಶ್ವರಿ, ಕೆ.ಎನ್.ಮಂಜುನಾಥ್ , ಅನಿಶ್ ಪಾಶ ಸದಸ್ಯರಾದ ಡೋಲಿ ಚಂದ್ರು, ಎಸ್.ಎಸ್. ಗಿರೀಶ್, ಶ್ರೀನಿವಾಸ್ ಚನ್ನಗಿರಿ, ನಾಗರಾಜ ಚನ್ನಗಿರಿ ಶಿವಶಂಕರ್ ಕೈದಾಳ್ , ಲಿಯಾಖತ್ ಅಲಿ, ಷಂಶೀರ್, ಶಶಿಕಲಾ, ಕೆ.ಜಿ.ಉಮೇಶ್, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಲಿತರ ಜೊತೆಗೆ ಚರ್ಚಿಸಿ ದೂರು ಪಡೆದು ಕಾನೂನು ಚೌಕಟ್ಟಿನಲ್ಲಿ ಕ್ರಮ: ಅನಿಲ್ ಕುಮಾರ್
ರೈಲುಗಳಲ್ಲಿ ಹೆಚ್ಚಾಗುತ್ತಲೇ ಇದೆ ಗಾಂಜಾ ಸಾಗಣೆ