- ಘತ್ತರಗಿ ಭಾಗ್ಯವಂತಿ ದೇಗುಲದಲ್ಲಿ ಜಾವಳಕ್ಕೆಂದು ಹೊರಟಿದ್ದವರು ಮಸಣ ಸೇರಿದರು
ಕನ್ನಡಪ್ರಭ ವಾರ್ತೆ ಶಹಾಪುರ
ಯಾದಗಿರಿ ಸಮೀಪದ ವರ್ಕನಳ್ಳಿ ಗ್ರಾಮದಿಂದ ಕಲಬುರಗಿ ಜಿಲ್ಲೆ ಅಫಜಲ್ಪೂರ ತಾಲೂಕಿನ ಘತ್ತರಗಾ ಗ್ರಾಮದ ಭಾಗ್ಯವಂತಿ ದೇವಿ ಸನ್ನಿಧಾನದಲ್ಲಿ ಜಾವಳ ಕಾರ್ಯಕ್ರಮಕ್ಕೆಂದು ಪ್ರಯಾಣಿಕರನ್ನು ಕರದೊಯ್ಯುತ್ತಿದ್ದ ಬೊಲೆರೋ ಪಿಕ್ ಅಪ್ ವಾಹನ ಹಾಗೂ ರಾಜ್ಯ ಸಾರಿಗೆ ಬಸ್ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ, ನಾಲ್ವರು ಸ್ಥಳದಲ್ಲೇ ಮೃತಪಟ್ಟು, 15ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಗುರುವಾರ ತಡರಾತ್ರಿ ಶಹಾಪುರದ ಮದ್ದರಕಿ ಬಳಿ ಸಂಭವಿಸಿದೆ.ಯಾದಗಿರಿ ಜಿಲ್ಲೆಯ ತಾಲೂಕಿನ ವರ್ಕನಳ್ಳಿ ಗ್ರಾಮದ ತಂಗಮ್ಮ (52), ಸೋಮವ್ವ (55), ಚಾಲಕ ಶರಣಪ್ಪ (30), ಸುನಿತಾ (22) ಮೃತಪಟ್ಟ ದುರ್ದೈವಿಗಳು. ತಂಗಮ್ಮ, ಸೋಮವ್ವ ಹಾಗೂ ಶರಣಪ್ಪ ಸ್ಥಳದಲ್ಲೇ ಮೃತಪಟ್ಟರೆ, ಸುನೀತಾ ಶಹಾಪುರ ಸರ್ಕಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬೊಲೆರೋ ಪಿಕ್ ಅಪ್ ಗೂಡ್ಸ್ ವಾಹನ ನುಜ್ಜುಗುಜ್ಜಾಗಿದೆ. ವಾಹನದಲ್ಲಿ ನಲವತ್ತಕ್ಕೂ ಹೆಚ್ಚು ಜನ ಇದ್ದರು ಎಂದು ಹೇಳಲಾಗುತ್ತಿದೆ.
ಗುರುವಾರ ರಾತ್ರಿ ತವರುಮನೆಯವರು ವರ್ಕನಳ್ಳಿಯಿಂದ ಜಾವಳ ಕಾರ್ಯಕ್ಕೆ ಸಂಬಂಧಿಕರು ಮತ್ತು ಅಕ್ಕಪಕ್ಕದವರನ್ನು ಕರೆದುಕೊಂಡು ಬೊಲೆರೋ ಪಿಕ್ ಅಪ್ ಗೂಡ್ಸ್ ಗಾಡಿಯಲ್ಲಿ ಘತ್ತರಗಿಗೆ ಹೊರಟಿದ್ದರು. ಮದ್ದರಕಿ ಗ್ರಾಮದ ಬಳಿ ರಾತ್ರಿ 10.30ಕ್ಕೆ ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೊಲೆರೋ ಪಿಕ್ ಅಪ್ ನಡುವೆ ಮುಖಾಮಖಿ ಡಿಕ್ಕಿಯಾಗಿ, ಸ್ಥಳದಲ್ಲಿ ಮೂವರು ಜನ ಸಾವನ್ನಪ್ಪಿದ್ದಾರೆ.
ವಾಹನದಡಿ ಸಿಲುಕಿದ ಶವವನ್ನು ತೆಗೆಯಲು ಪೊಲೀಸರು ಜೆಸಿಬಿ ಸಹಾಯದಿಂದ ಹೊರ ತೆಗೆದು ಶವಗಳ ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಲ್ಲಿ ಮಡಿದವರ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.
ಪೊಲೀಸರು ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಯಿತು. ಭೀಮರಾಯನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಸ್ಪತ್ರೆಗೆ ಶಾಸಕ ತುನ್ನೂರು ಭೇಟಿ
--
11ವೈಡಿಆರ್6
-11ವೈಡಿಆರ್7 : ಶಹಾಪುರ ತಾಲೂಕಿನ ಮದ್ದರಕಿ ಬಳಿ ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಮೇಲೆ ಬಸ್ ಮತ್ತು ಬುಲೆರೋ ಪಿಕ್ ಅಪ್ ಗೂಡ್ಸ್ ನಡುವೆ ಮುಖಾಮುಖಿ ಡಿಕ್ಕಿ ಅಪಘಾತದಲ್ಲಿ ವಾಹನಗಳನ್ನು ಭೀಮರಾಯನಗುಡಿ ಠಾಣೆಯಲ್ಲಿ ನಿಲ್ಲಿಸಲಾಗಿದೆ.
-11ವೈಡಿಆರ್8 : ರಸ್ತೆ ಅಪಘಾತದಲ್ಲಿ ಮಡಿದ ಕುಟುಂಬಗಳಿಗೆ ಸಾಂತ್ವನ ಹೇಳಲು ಆಸ್ಪತ್ರೆಗೆ ಭೇಟಿ ನೀಡಿದ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು.