ರೈತರ ಪೌತಿ, ಪೋಡಿ ಖಾತೆಗಳನ್ನು ಸರಿಪಡಿಸಿ: ಶಾಸಕ ರಮೇಶ್‌ ಬಂಡಿಸಿದ್ದೇಗೌಡ

KannadaprabhaNewsNetwork |  
Published : Aug 07, 2025, 12:46 AM IST
6ಕೆಎಂಎನ್ ಡಿ26,27 | Kannada Prabha

ಸಾರಾಂಶ

ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮ ರೂಪಿಸಬೇಕು. ರೈತರ ಬಳಿ ತೆರಳಿ ಅರ್ಜಿ ಜೊತೆಗೆ ಅಗತ್ಯ ದಾಖಲೆಗಳೊಂದಿಗೆ ಪರಿಶೀಲಿಸಿ 45 ದಿನದೊಳಗೆ ಜಮೀನಿಗೆ ಸಂಬಂಧಿಸಿದ ಪೌತಿ, ಪಹಣಿ ತಿದ್ದುಪಡಿ, ಪೋಡಿಗಳ ಮಾಡಿ ಮುಕ್ತಗೊಳಿಸಬೇಕು. ರೈತರನ್ನು ಕಚೇರಿಗೆ ಅಲೆದಾಡಿಸಬಾರದು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕು ವ್ಯಾಪ್ತಿಯ ಗ್ರಾಮಗಳ ಎಲ್ಲಾ ಮನೆ ಮನೆಗಳಿಗೆ ಅಧಿಕಾರಿಗಳು ತೆರಳಿ ಕಂದಾಯ ಅದಾಲತ್ ನಡೆಸುವ ಮೂಲಕ ರೈತ ಫಲಾನುಭವಿಗಳಿಗೆ ಪೌತಿ, ಪೋಡಿ ಖಾತೆಗಳ ಸರಿಪಡಿಸಲು ಮುಂದಾಗಬೇಕು ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಹೇಳಿದರು.

ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮ ರೂಪಿಸಬೇಕು. ರೈತರ ಬಳಿ ತೆರಳಿ ಅರ್ಜಿ ಜೊತೆಗೆ ಅಗತ್ಯ ದಾಖಲೆಗಳೊಂದಿಗೆ ಪರಿಶೀಲಿಸಿ 45 ದಿನದೊಳಗೆ ಜಮೀನಿಗೆ ಸಂಬಂಧಿಸಿದ ಪೌತಿ, ಪಹಣಿ ತಿದ್ದುಪಡಿ, ಪೋಡಿಗಳ ಮಾಡಿ ಮುಕ್ತಗೊಳಿಸಬೇಕು. ರೈತರನ್ನು ಕಚೇರಿಗೆ ಅಲೆದಾಡಿಸಬಾರದು ಖಡಕ್ ಸೂಚನೆ ನೀಡಿದರು.

ರೇಷ್ಮೆ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಗಳಲ್ಲಿ ನೀಡುವ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಬೇಕು. ರಾಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಳ್ಳುವ ಮುನ್ನ ಪಶು ಸಂಗೋಪನ ಇಲಾಖೆಯಿಂದ ಪ್ರತಿ ಗ್ರಾಮಗಳಲ್ಲಿ ಮನೆಮನೆ ಪ್ರಚಾರಾಂದೋಲನೆ ನಡೆಸಿ ಲಸಿಕೆ ಹಾಕಲು ಕ್ರಮ ವಹಿಸಬೇಕು ಎಂದರು.

ಪಂಚಾಯ್ತಿ ವ್ಯಾಪ್ತಿ ಹಕ್ಕು ಪತ್ರಗಳಿರುವ ಫಲಾನುಭವಿಗಳಿಗೆ ಇ-ಸ್ವತ್ತು ಆಂದೋಲನದ ಮೂಲಕ ಫಲಾನುಭವಿಗಳಿಗೆ ನಿಯಮ 53/57ರ ಅಡಿಯಲ್ಲಿ ಹಕ್ಕು ಪತ್ರಗಳಿಗೆ ಖಾತೆ ಮಾಡಬೇಕು. ಇತರೆ ಸಾಮಾಜಿಕ ಭದ್ರತಾ ಪಿಂಚಣಿ ಸೇರಿದಂತೆ ಇತರೆ ಸರ್ಕಾರಿ ಸವಲತ್ತುಗಳ ಸಿಗುವ ಫಲಾನುಭವಿಗಳ ನೋಂದಾಯಿಸಿ ಮಡಿಲು ಕಾರ್ಯಕ್ರಮದಲ್ಲಿ ವಿತರಿಸಲು ಸಿದ್ಧತೆಯಾಗಿರಬೇಕು ಎಂದರು.

ತಾಪಂನಿಂದ ಆಗಬೇಕಿರುವ ಕಾಮಗಾರಿಗಳನ್ನು ವಿಳಂಬ ಮಾಡಬಾರದು. ಹೊಸದಾಗಿ ಅಗತ್ಯ ಬಿದ್ದರೆ ಡಿಪಿಆರ್ ಸಿದ್ಧತೆಗೊಳಿಸಿ ಹಣ ಮಂಜೂರಿಗೆ ಮಾಹಿತಿ ನೀಡಿದರೆ ಜಿಲ್ಲಾ ಪಂಚಾಯ್ತಿಗೆ ಕಳುಹಿಸಿಕೊಡಲಾಗುತ್ತದೆ ಎಂದರು.

ಕೃಷಿ ಇಲಾಖೆಯಿಂದ ರೈತರಿಗೆ ಬಿತ್ತನೆ ಬೀಜ ಹಾಗೂ ಯೂರಿಯಾ, 20-20 , ಇಪ್ಕೋ ಗೊಬ್ಬರಗಳ ಸ್ಟಾಕ್ ಮಾಡಿಕೊಂಡು ರೈತರಿಗೆ ವಿತರಿಸಬೇಕು. ಅಕ್ರಮ ಗೊಬ್ಬರ ದಾಸ್ತಾನು ಕಂಡು ಬಂದರೆ ಪೊಲೀಸರ ನೆರವಿನೊಂದಿಗೆ ಹಿಡಿದು ಶಿಕ್ಷೆಗೊಳಪಡಿಸುವಂತೆ ಕೃಷಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಪೊಲೀಸರು ತಮ್ಮ ಚೆಕ್ ಪೋಸ್ಟ್ ಗಳಲ್ಲಿ ಯೂರಿಯಾ ದಾಸ್ತಾನುಗಳನ್ನು ಬೇರೇಡೆಗೆ ಸಾಗಾಟಗಳ ಬಗ್ಗೆ ಗಮನ ಹರಿಸಬೇಕು ಎಂದರು.

ನಂತರ ಶಾಲಾ ಕಾಲೇಜುಗಳ ಅಭಿವೃದ್ಧಿ ಕುರಿತಾಗಿ ಎಂಎಲ್‌ಸಿ ವಿವೇಕಾನಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಲವು ಸೂಚನೆಗಳ ನೀಡಿದರು. ಶಾಲಾ ಕಾಲೇಜು ಬಳಿ ಸಣ್ಣ ಸಣ್ಣ ಕೈತೋಟಗಳ ನಿರ್ಮಿಸಿ ಉತ್ತಮ ಹಣ್ಣುಗಳ ಗಿಡಗಳನ್ನು ನೆಡಬೇಕು. ಬಿಸಿಯೂಟ ಅಡುಗೆಗೆ ಮುಖ್ಯ ಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದರು.

ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆ 6 ರು. ಗಳನ್ನು ಸರ್ಕಾರ ನೀಡುತ್ತದೆ. ಮೊಟ್ಟೆ ಅಂಗಡಿಯಿಂದ ಒಡೆದುಹೋದರೆ ಅವರೇ ಹೊಣೆಯಾಗಿ ಕೈಯಿಂದ ಹಣ ನೀಡುವಂತಾಗುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ ಶೌಚಾಲಯವನ್ನು ಸ್ವಚ್ಛಗೊಳಿಸಲು ನರೇಗಾವನ್ನು ಬಳಸಿಕೊಂಡು ಒಬ್ಬರನ್ನು ನೇಮಿಸಿ ಮಕ್ಕಳ ಕೈಯಿಂದ ತೊಳೆಸಬೇಡಿ ಎಂದು ತಾಕೀತು ಮಾಡಿದರು. ಅಂಗನವಾಡಿಗಳಲ್ಲಿ ಮಕ್ಕಳಿಗೆ ಉತ್ತಮ ಆಹಾರ ನೀಡಿ, ಗರ್ಭಿಣಿಯರು, ಬಾಣಂತಿಯರಿಗೆ ಸರ್ಕಾರದ ಸೌವಲತ್ತುಗಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸರಿಯಾಗಿ ವಿತರಿಸಿ ವಸತಿ ನಿಲಯ ವಿದ್ಯಾರ್ಥಿಗಳಿಗೆ ಇನ್ನಷ್ಟು ಸೌಲಭ್ಯ ಒದಗಿಸಬೇಕು ಎಂದರು.

ಸಭೆಯಲ್ಲಿ ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್.ದಿನೇಶ್, ಜಿಪಂ ಡಿಎಸ್ 2 ಗ್ರೇಡ್‌ನ ತಾಪಂ ಆಡಳಿತಾಧಿಕಾರಿ ಪಿ.ಲಕ್ಷ್ಮಿ, ತಹಸೀಲ್ದಾರ್ ಚೇತನಾ ಯಾದವ್, ಇಒ ವೇಣು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

PREV

Recommended Stories

ಗೃಹಲಕ್ಷ್ಮೀಯರ ಬಾಕಿ ಹಣ ಬಿಡುಗಡೆಗೆ ಲಕ್ಷ್ಮೀ ತಥಾಸ್ತು : ಸುಳ್ಳಲ್ಲೇ 7 ಗಂಟೆ ರೈಲು ಓಡಿಸಿದ್ರು
ರೈಲಲ್ಲಿ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ