ಕನ್ನಡಪ್ರಭ ವಾರ್ತೆ ಮದ್ದೂರು
ರಾಜ್ಯ ಶೋಷಿತ ಸಮುದಾಯದ ವೇದಿಕೆ ರಾಜ್ಯಾಧ್ಯಕ್ಷ ಸುರೇಶ್ ಕಂಠಿ ನೇತೃತ್ವದಲ್ಲಿ ಅಭಿಮಾನಿಗಳು ದೇಗುಲದಲ್ಲಿ ವಿಶೇಷ ಪೂಜೆ, ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮತ್ತು ಅನ್ನ ದಾಸೋಹ ಮಾಡಿದರು.
ಮೊದಲು ಪಟ್ಟಣದ ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ಸಚಿವ ಡಾ.ಪರಮೇಶ್ವರ್ ಹೆಸರಿನಲ್ಲಿ ಅರ್ಚನೆ ಮಹಾ ಮಂಗಳಾರತಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಿ ದೀರ್ಘಾಯುಷ್ಯನೊಂದಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಉನ್ನತ ಸ್ಥಾನಕ್ಕೆ ಏರಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.ಇದಕ್ಕೂ ಮುನ್ನಾ ಮಂಡ್ಯದ ಮಿಮ್ಸ್ ಹೆರಿಗೆ ವಾರ್ಡ್‌ನ ಆವರಣದ ಮಮತೆಯ ಮಡಿಲು ನಿತ್ಯ ಅನ್ನದಾಸೋಹ ಕೇಂದ್ರದಲ್ಲಿ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಹಾಗೂ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಿದರು.
ಈ ವೇಳೆ ಅಭಿಮಾನಿ ಬಳಗದ ಕುಮಾರಸ್ವಾಮಿ, ಪ್ರಾಣೇಶ್, ಸುಂಡಹಳ್ಳಿ ಸಿದ್ದರಾಜು, ಕಾಡುಕೋತನಹಳ್ಳಿ ಮರಿಸ್ವಾಮಿ, ಶಿವಣ್ಣ, ಕರಠಗೆರೆ ಯೋಗೇಶ್, ರವಿಕುಮಾರ್, ತಿಮ್ಮಯ್ಯ, ಮಮತೆಯ ಮಡಿಲು ಮಂಗಲ ಎಂ.ಯೋಗೇಶ್ ಸೇರಿದಂತೆ ಮತ್ತಿತರರು ಇದ್ದರು.