ಹೊಸ ತಂತ್ರಜ್ಞಾನದತ್ತ ಚಿತ್ತ ಹರಿಸಿ

KannadaprabhaNewsNetwork |  
Published : Apr 19, 2025, 12:31 AM IST
ಪೋಟೋಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಬಜರಂಗಬಲಿ ಮಾತನಾಡಿದರು.   | Kannada Prabha

ಸಾರಾಂಶ

ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಿಕೆ ಅನಿವಾರ್ಯವಾಗಿದ್ದು, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಬಹುತೇಕ ನೌಕರರನ್ನು ಕೆಲಸದಿಂದ ತೆಗೆದು ಹಾಕುವ ಪರಿಸ್ಥಿತಿಯಿದೆ. ಹೀಗಾಗಿ ಕಾಮರ್ಸ್ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನ ತಿಳಿದುಕೊಂಡು ಬದಲಾವಣೆಯತ್ತ ಸಾಗಬೇಕು.

ಕನಕಗಿರಿ:

ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಓದಿನ ಜತೆಗೆ ಹೊಸ ತಂತ್ರಜ್ಞಾನದತ್ತ ಗಮನ ಹರಿಸುವ ಅಗತ್ಯವಿದೆ ಎಂದು ಪ್ರಾಂಶುಪಾಲ ಬಜರಂಗಬಲಿ ಹೇಳಿದರು.

ಇಲ್ಲಿನ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕಾಮರ್ಸ್ ಫೆಸ್ಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಿಕೆ ಅನಿವಾರ್ಯವಾಗಿದ್ದು, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಬಹುತೇಕ ನೌಕರರನ್ನು ಕೆಲಸದಿಂದ ತೆಗೆದು ಹಾಕುವ ಪರಿಸ್ಥಿತಿಯಿದೆ. ಹೀಗಾಗಿ ಕಾಮರ್ಸ್ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನ ತಿಳಿದುಕೊಂಡು ಬದಲಾವಣೆಯತ್ತ ಸಾಗಬೇಕು ಎಂದರು.

ವಿದ್ಯಾರ್ಥಿ ದಿಸೆಯಲ್ಲಿಯೇ ತಿಳಿದುಕೊಂಡ ಮಾಹಿತಿಗಳು ಉದ್ಯೋಗ ಸ್ಥಳದಲ್ಲಿ ನಿರುಪಯುಕ್ತವಾಗಬಾರದು. ಹೀಗಾಗಿ ಅವುಗಳ ಜತೆಗೆ ಹೊಸ ತಂತ್ರಜ್ಞಾನ ಅರಿತಾಗ ಮಾತ್ರ ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಉದ್ಯೋಗ ಸಿಕ್ಕ ಸಂದರ್ಭದಲ್ಲಿ ಹೆಚ್ಚು ಒತ್ತಡಕ್ಕೆ ಸಿಲುಕಿಕೊಂಡರೆ ತಮ್ಮ ಅಮೂಲ್ಯ ಜೀವನ ಕಳೆದುಕೊಳ್ಳಬೇಕಾಗುತ್ತದೆ. ಕಚೇರಿ ಕೆಲಸವನ್ನು ಕಚೇರಿಯಲ್ಲೆ ಹಾಗೂ ಮನೆ ಕೆಲಸವನ್ನು ಮನೆಯಲ್ಲೆ ಮಾಡಬೇಕು. ಎರಡು ಕೆಲಸವನ್ನು ಒಟ್ಟಾಗಿ ಮಾಡಲು ಮುಂದಾದರೆ ಕಷ್ಟಸಾಧ್ಯವಾಗಿದೆ. ಕಾಮರ್ಸ್ ವಿದ್ಯಾರ್ಥಿಗಳು ಹೊಸತನ್ನು ಹುಡುಕುವ ನಿಟ್ಟಿನಲ್ಲಿ ವಿದ್ಯಾಭ್ಯಾಸ ಮಾಡಬೇಕು. ಯಾವಾಗ ನಮ್ಮ ಉತ್ತೇಜನವನ್ನು ಕಳೆದುಕೊಳ್ಳುತ್ತೆವೆಯೋ ಆಗಲೇ ನಮ್ಮ ವ್ಯವಹಾರಗಳು ಸ್ಥಗಿತಗೊಳ್ಳುತ್ತದೆ. ಹೀಗಾಗಿ ಪ್ರತಿಯೊಬ್ಬರು ಕೆಲಸದ ವಿಚಾರದಲ್ಲಿ ಉತ್ಸುಕರಾಗಿ ಕರ್ತವ್ಯ ನಿರ್ವಹಿಸಲು ಮುಂದಾಗಬೇಕು. ಸ್ಪರ್ಧಾತ್ಮಕ ಪ್ರಪಂಚದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ಪರ್ಧೆ ಎದುರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಕಂಪನಿಯ ಲೋಗೋ ಡಿಸೈನಿಂಗ್, ಬುಸಿನೆಸ್ ಮಾಡೇಲ್, ಮ್ಯಾನೇಜ್‌ಮೆಂಟ್ ಗೇಮ್ಸ್, ಕ್ವೀಜ್, ಸಮಿನಾರ್ ಸೇರಿದಂತೆ ವಿವಿಧ ವಾಣಿಜ್ಯ ಚಟುವಟಿಕೆ ಪ್ರದರ್ಶಿಶಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಂತರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರಾಧ್ಯಾಪಕರಾದ ಮರ್ವಿನ್ ಡಿಸೋಜಾ, ರಕ್ಷಿತ್, ಡಾ. ಆಶಿಕಾ, ಲಲಿತಾ ಕಿನ್ನಾಳ, ವೀರೇಶ ಕೆಂಗಲ್, ಸರ್ವಮಂಗಳಮ್ಮ, ಉಪನ್ಯಾಸಕರಾದ ಮಾರುತೇಶ, ಶಾಂತಮ್ಮ, ದೇವೆಂದ್ರಪ್ಪ, ಸೋಮಶೇಖರಪ್ಪ, ಮಾದಿನಾಳಪ್ಪ, ರವಿಕುಮಾರ, ಬಸವರಾಜ, ಮಾಲತಿ, ನಿಂಗಪ್ಪ, ಎಸ್.ಕೆ. ಖಾದ್ರಿ ಸೇರಿದಂತೆ ವಿದ್ಯಾರ್ಥಿಗಳಿದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು