ಕನ್ನಡಪ್ರಭ ವಾರ್ತೆ ನಾಗಮಂಗಲ
ಹಿಂದಿನ ಅಧ್ಯಕ್ಷ ರಾಮಕೃಷ್ಣೇಗೌಡರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕುಳ್ಳೇಗೌಡ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಶೋಭ ಪ್ರಕಟಿಸಿದರು.
ಈ ವೇಳೆ ನೂತನ ಅಧ್ಯಕ್ಷ ಕುಳ್ಳೇಗೌಡ ಮಾತನಾಡಿ, ಹೈನುಗಾರಿಕೆಯಿಂದ ಹಳ್ಳಿಗಾಡಿನ ರೈತರಿಗೆ ಬಹಳಷ್ಟು ಅನುಕೂಲವಿದೆ. ಹಾಗಾಗಿ ಉತ್ಪಾದಕರು ಸಂಘಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡಿ ಹೆಚ್ಚು ಲಾಭದೊಂದಿಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಆಡಳಿತ ಮಂಡಳಿ ಎಲ್ಲಾ ನಿರ್ದೇಶಕ ಸಲಹೆ, ಮಾಗದರ್ಶನ ಪಡೆದು ಉತ್ಪಾದಕರ ಮತ್ತು ಸಂಘದ ಅಭಿವೃದ್ಧಿಗೆ ಪೂರಕವಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.ಈ ವೇಳೆ ಸಂಘದ ಉಪಾಧ್ಯಕ್ಷೆ ಲಕ್ಷ್ಮಮ್ಮ, ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ನಿರ್ದೇಶಕರಾದ ನರಸಿಂಹೇಗೌಡ, ಪುಟ್ಟಲಿಂಗಮ್ಮ, ಶಾರದ, ಸುಶೀಲಮ್ಮ, ಮೂಡಲಗಿರಿಗೌಡ, ಕಾರ್ಯದರ್ಶಿ ಸತೀಶ್ ಸೇರಿದಂತೆ ಹಲವರು ಹಾಜರಿದ್ದು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
ಶಾಸಕ ಮಧುಗೆ ನೂತನ ಡೇರಿ ನಿರ್ದೇಶಕರಿಂದ ಅಭಿನಂದನೆಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿಗುರುದೇವರಹಳ್ಳಿ ಕಾಲೋನಿ (ಜಿಮಾದೇಗೌಡ ನಗರ) ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ 11 ಸ್ಥಾನಗಳನ್ನು ಪಡೆದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರ ಬೆಂಬಲಿಗರು ಆಯ್ಕೆಗೊಂಡಿದ್ದಾರೆ.
ಚುನಾವಣೆಯಲ್ಲಿ ಆಯ್ಕೆಯಾದ 11 ಮಹಿಳಾ ನಿರ್ದೇಶಕರು ಶಾಸಕ ಮಧು ಜಿ.ಮಾದೇಗೌಡರನ್ನು ಕೆ.ಎಂ.ದೊಡ್ಡಿ ಭಾರತೀ ವಿದ್ಯಾಸಂಸ್ಥೆ ಆಡಳಿತ ಕಚೇರಿಯಲ್ಲಿ ಅಭಿನಂದಿಸಿದರು.ನಂತರ ಮಾತನಾಡಿದ ಮಧು, ಹೈನೋದ್ಯಮ ಮಹಿಳೆಯರನ್ನು ಆರ್ಥಿಕ ಸಬಲರನ್ನಾಗಿಸುತ್ತದೆ. ಕಾಂಗ್ರೆಸ್ ಸರ್ಕಾರ ಕೂಡ ಹಾಲಿನ ದರ ಏರಿಕೆ ಮಾಡುವ ಮೂಲಕ ಹಾಲು ಉತ್ಪಾದಕರ ನೆರವಿಗೆ ಧಾವಿಸಿದೆ. ಡೇರಿ ಅಭಿವೃದ್ಧಿಯಾಗಲು ಎಲ್ಲ ನಿರ್ದೇಶಕರು ಒಗ್ಗಟಾಗಿ ಕಾರ್ಯನಿರ್ವಹಿಸಬೇಕು. ಇದರಿಂದ ಷೇರಿದಾರರಿಗೆ ಹೆಚ್ಚಿನ ಲಾಭ ನೀಡಲು ಸಾಧ್ಯವಾಗುತ್ತದೆ ಎಂದರು. ಈ ವೇಳೆ ತಾಪಂ ಮಾಜಿ ಸದಸ್ಯ ಭರತೇಶ್, ಗ್ರಾಪಂ ಮಾಜಿ ಸದಸ್ಯ ಪುಟ್ಟೇಗೌಡ, ಮುಖಂಡರಾದ ಬೋರೇಗೌಡ, ಕೃಷ್ಣ, ಪಾಪಣ್ಣ, ರಾಜು, ಗಿರಿಸ್ವಾಮಿ, ಮಧು, ಮಾದೇಗೌಡ, ನಿಂಗೇಗೌಡ, ನಿರ್ದೇಶಕರಾದ ರಶ್ಮಿಮಧು, ನಂದಿನಿ, ಚಿಕ್ಕಬೋರಮ್ಮ, ಪವಿತ್ರ, ನಿಂಗಮ್ಮ ಸೇರಿದಂತೆ ಹಲವರಿದ್ದರು.