ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವಲ್ಲಿ ಗಮನಹರಿಸಿ: ಸಿಇಒ ಒರಡಿಯಾ

KannadaprabhaNewsNetwork |  
Published : Jan 18, 2025, 12:45 AM IST
ಯಾದಗಿರಿ ನಗರದ ವಿದ್ಯಾರಣ್ಯ ಶಾಲಾವರಣದಲ್ಲಿ ಕನ್ನಡ ಶಿಕ್ಷಕರ ಚಿತ್ತ ಹಾಗೂ ಅನುತ್ತೀರ್ಣ ರಹಿತ ಫಲಿತಾಂಶದತ್ತ ಕುರಿತು ಕಾರ್ಯಾಗಾರ ಜರುಗಿತು. | Kannada Prabha

ಸಾರಾಂಶ

Focus on providing good education to children: CEO Oradia

-ಕನ್ನಡ ಶಿಕ್ಷಕರ ಚಿತ್ತ, ಅನುತ್ತೀರ್ಣರಹಿತ ಫಲಿತಾಂಶದತ್ತ ಕುರಿತ ಕಾರ್ಯಾಗಾರ

----

ಕನ್ನಡಪ್ರಭ ವಾರ್ತೆ ಯಾದಗಿರಿ

ಶಿಕ್ಷಣದ ಕುರಿತಂತೆ ಮಕ್ಕಳಲ್ಲಿರುವ ನ್ಯೂನ್ಯತೆ ಪತ್ತೆ ಹಚ್ಚಿ ಅವರಿಗೆ ಶಿಕ್ಷಣ ಕೊಡುವ ಕಾರ್ಯವಾಗಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ ಸಲಹೆ ನೀಡಿದರು.

ನಗರದ ವಿದ್ಯಾರಣ್ಯ ಶಾಲಾವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕನ್ನಡ ಭಾಷಾ ಶಿಕ್ಷಕರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಶಿಕ್ಷಕರ ಚಿತ್ತ ಹಾಗೂ ಅನುತ್ತೀರ್ಣ ರಹಿತ ಫಲಿತಾಂಶದತ್ತ ಕುರಿತ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚನ್ನಬಸಪ್ಪ ಮುಧೋಳ್ ಮಾತನಾಡಿ, ಶಿಕ್ಷಕರು ನಮಗೆ ವಹಿಸಿದ ಕಾರ್ಯ ಪ್ರಜ್ಞಾಪೂರ್ವಕವಾಗಿ ಮಾಡಬೇಕು ಎನ್ನುವುದನ್ನು ಅರಿತು ಕೆಲಸ ಮಾಡುವಂತೆ ತಿಳಿಸಿದರು. ಗೋಷ್ಠಿಯಲ್ಲಿ ಉಪನ್ಯಾಸ ನೀಡಿದ ಮೈಸೂರಿನ ಸಂಪನ್ಮೂಲ ವ್ಯಕ್ತಿ ರವೀಶಕುಮಾರ, 21ನೇ ಶತಮಾನದ ಮಕ್ಕಳಿಗೆ 20ನೇ ಶತಮಾನದ ಶಿಕ್ಷಕರು 19ನೇ ಶತಮಾನದ ಪಾಠಬೋಧನೆ ಮಾಡುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಷಯ ಪರೀವೀಕ್ಷಕರಾದ ಬಸನಗೌಡ ಆಲ್ದಾಳ, ಶಿಕ್ಷಕ ಬಸನಗೌಡ ಪಾಟೀಲ್, ವೆಂಕಟರಡ್ಡಿ ಬೆಳ್ಳಿಕಟ್ಟಿ, ವಿದ್ಯಾರಣ್ಯ ಶಾಲೆಯ ರವೀಂದ್ರನಾಥ ಚೌದ್ರಿ, ಶ್ರೀನಿವಾಸರಾವ್ ಚೌದ್ರಿ, ನೋಡಲ್ ಅಧಿಕಾರಿ ಹಣಮಂತ, ಅಶೋಕ ಕುಮಾರ ಕೆಂಭಾವಿ, ವಿಶ್ವನಾಥ ಚಿಂತನಳ್ಳಿ, ಶ್ರೀನಿವಾಸ ಕರ್ಲಿ, ಅನ್ನಪೂರ್ಣ ಭಂಡಾರಕರ್, ಭಾಗ್ಯವತಿ ಕೆಂಭಾವಿ, ಸಿದ್ದಪ್ಪ ಆವಂಟಿ, ಶರಣಮ್ಮ ಸಾಲಿಮಠ, ಸರೋಜಾಬಾಯಿ, ಸೀಮಾ ಕರ್ಲಿ, ಶ್ರೀದೇವಿ ಅಲ್ಲಿಪೂರ ಸೇರಿದಂತೆ ಶಿಕ್ಷಕರು ಇದ್ದರು.

----

17ವೈಡಿಆರ್4

ಯಾದಗಿರಿ ನಗರದ ವಿದ್ಯಾರಣ್ಯ ಶಾಲಾವರಣದಲ್ಲಿ ಕನ್ನಡ ಶಿಕ್ಷಕರ ಚಿತ್ತ ಹಾಗೂ ಅನುತ್ತೀರ್ಣ ರಹಿತ ಫಲಿತಾಂಶದತ್ತ ಕುರಿತು ಕಾರ್ಯಾಗಾರ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!