ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ:
ಜಿಲ್ಲಾ ಪಂಚಾಯತಿ, ಉಪವಿಭಾಗ ಪಂಚಾಯತಿ ರಾಜ್ ಎಂಜನೀಯರಿಂಗ್ ಇಲಾಖೆಯ ೨೦೨೩-೨೪ನೇ ಸಾಲಿನ ಮಹಾತ್ವಾಕಾಂಕ್ಷಿ ಯೋಜನೆಯಡಿ ಕೈಗೊಳ್ಳಲಾದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಪ್ರೌಢಶಾಲೆ ಕಟ್ಟಡ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿಗೆ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭೂಮಿ ಪೂಜೆ ನೆರವೇರಿಸಿದರು.ಈ ವೇಳೆ ಮಾತನಾಡಿದ ಸಚಿವರು, ಕಾಲೇಜು, ಪ್ರೌಢಶಾಲೆಯ ಕಟ್ಟಡದ ನಿರ್ಮಾಣ ಕಾಮಗಾರಿ ಗುಣಮಟ್ಟದಿಂದ ಇರುವಂತೆ ಅಧಿಕಾರಿಗಳು ಗಮನ ಹರಿಸಬೇಕು. ಪಂಚಾಯತ್ ರಾಜ್ ಎಂಜನೀಯರಿಂಗ್ ಇಲಾಖೆಯಡಿ ಈಗಾಗಲೇ ಕಟ್ಟಡ ಕಾಮಗಾರಿ ನಡೆದಿರುವದನ್ನು ಪರಿಶೀಲಿಸಿ ಈಗಾಗಲೇ ನಿರ್ಮಿಸಲಾದ ಶೌಚಾಲಯ ಕಟ್ಟಡಕ್ಕೆ ವೆಂಟಿಲೇಟರ್ ಇಲ್ಲದನ್ನು ಗಮನಿಸಿದ ಸಚಿವರು ಅಧಿಕಾರಿಗಳಿಗೆ ಶೌಚಾಲಯಕ್ಕೆ ವೆಂಟಿಲೇಟರ್ ಯಾಕೆ ಅಳವಡಿಸಿಲ್ಲ. ವೆಂಟಿಲೇಟರ್ ಬಿಡಿಸಲು ಹೇಳಿದರು. ಕಟ್ಟಡಗಳ ನಿರ್ಮಾಣ ಹಾಗೂ ದುರಸ್ತಿ ಕಾರ್ಯ ಸಮರ್ಪಕವಾಗಿ ಆಗುವಂತೆ ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಗುಣಮಟ್ಟದಿಂದ ಕಾಮಗಾರಿ ಪೂರ್ಣಗೊಳಿಸುವಂತೆ ಜಿಪಂ ಎಇಇ ವಿಲಾಸ ರಾಠೋಡ, ಲೋಕೋಪಯೋಗಿ ಇಲಾಖೆಯ ಎಇಇ ಜಿ.ವ್ಹಿ.ಕಿರಸೂರ ಅವರಿಗೆ ಸೂಚಿಸಿದರು.ಜಿಪಂ ಎಇಇ ವಿಲಾಸ ರಾಠೋಡ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿಗೆ ₹ ೫೭.೬೬ ಲಕ್ಷ, ಸರ್ಕಾರಿ ಪ್ರೌಢಶಾಲೆ ಕಟ್ಟಡ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿಗೆ ₹ ೨೫.೨೬ಲಕ್ಷ ಅಂದಾಜು ಮೊತ್ತ ನಿಗದಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.ಈ ವೇಳೆ ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಕಾಲೇಜು ಸುಧಾರಣಾ ಸಮಿತಿ ಉಪಾಧ್ಯಕ್ಷ ಶೇಖರ ಗೊಳಸಂಗಿ, ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಮುಖಂಡರಾದ ಸುರೇಶಗೌಡ ಪಾಟೀಲ, ಜಟ್ಟಿಂಗರಾಯ ಮಾಲಗಾರ, ಬಸವರಾಜ ಕೋಟಿ, ಚಂದ್ರಶೇಖರಗೌಡ ಪಾಟೀಲ, ಬಸವರಾಜ ಗೊಳಸಂಗಿ, ಎಂ.ಜಿ.ಆದಿಗೊಂಡ, ರವಿ ರಾಠೋಡ, ಸಂಗಯ್ಯ ಕಾಳಹಸ್ತೇಶ್ವರಮಠ, ಪ್ರವೀಣ ಪೂಜಾರಿ, ಸದಾನಂದ ಬಶೆಟ್ಟಿ, ಸಂಗನಬಸು ಪೂಜಾರಿ, ಪರಶುರಾಮ ಜಮಖಂಡಿ, ಎಸ್.ಕೆ.ಸೋಮನಕಟ್ಟಿ, ಮಹಾಂತೇಶ ಸಾಸಾಬಾಳ, ಶರಣಪ್ಪ ಬೆಲ್ಲದ, ಎಂ.ಎಲ್.ನಾಯ್ಕೋಡಿ, ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಎಸ್.ಡಿ.ಪಾಟೀಲ, ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ರಮೇಶ ಪೂಜಾರಿ, ಪುರಸಭೆ ಮುಖ್ಯಾಧಿಕಾರಿ ಅಪ್ರೋಜ್ ಪಟೇಲ, ಬಿಇಒ ವಸಂತ ರಾಠೋಡ ಮುಂತಾದವರು ಹಾಜರಿದ್ದರು.