ಧಾರವಾಡ:
ಜಾನಪದ ನೃತ್ಯ ಕ್ಷೇತ್ರದಲ್ಲಿ ಅವರಿಗೆ ಈ ಪ್ರಶಸ್ತಿ ಲಭಿಸಿದ್ದು, ನಾಡಿನ ಪರಂಪರೆ ಸಾರುವ ಜನಪದ ಹಾಡುಗಳಿಗೆ ಜನಪದ ಹೆಜ್ಜೆಗಳ ಮೂಲಕ ನೃತ್ಯ ರೂಪಕ ರಚಿಸಿ, ಸಂಯೋಜಿಸಿ ಜನಪದ ಕಲೆಯನ್ನು ಪ್ರಸ್ತುತ ಪಡಿಸುವುದೇ ಇವರ ವಿಶೇಷ. ಮೈಸೂರು ದಸರಾ, ವಿಶ್ವಕನ್ನಡ ಸಮ್ಮೇಳನ, ತಮಿಳುನಾಡು ಸರ್ಕಾರ ಏರ್ಪಡಿಸಿದ್ದ ಬುಡಕಟ್ಟು ಉತ್ಸವ, ಮಹಾರಾಷ್ಟ್ರ, ಬಿಹಾರದಲ್ಲಿ ನಡೆದ ಹೊರನಾಡು ಕನ್ನಡಿಗರ ಸಮ್ಮೇಳನ, ಗೋವಾದಲ್ಲಿ ನಡೆದ ಕನ್ನಡ ಮಹಾಮೇಳ ಸೇರಿದಂತೆ ನಾಡಿನ ವಿವಿಧೆಡೆ ನಡೆಯುವ ಜಾತ್ರೆ, ಉತ್ಸವ, ಹಬ್ಬಗಳಲ್ಲಿ ಪ್ರಕಾಶ ಮಲ್ಲಿಗವಾಡ ಜಾನಪದ ನೃತ್ಯ ಪ್ರದರ್ಶನ ನೀಡಿದ್ದಾರೆ.
ರೈಜಿಂಗ್ ಸ್ಟಾರ್ಸ್ ಎಂದು ತಮ್ಮದೇ ಆದ ತಂಡ ಕಟ್ಟಿಕೊಟ್ಟು ಕಾರ್ಯಕ್ರಮ ನೀಡುತ್ತಿರುವ ಅವರು, ಕೋವಿಡ್ ಸಮಯದಲ್ಲಿ ಇವರ ಕಲಾ ತಂಡವು ಜಾಗತಿೃ ಮೂಡಿಸಿದೆ. ಜತೆಗೆ ಅಸಂಘಟಿತ ಕಲಾವಿದರಿಗೆ ಆಹಾರ ಸಾಮಗ್ರಿಗಳ ಪೂರೈಕೆ, ಆರ್ಥಿಕವಾಗಿ ದಾನದ ನೆರವು ಸಹ ನೀಡಿದೆ. ಬೀದಿ ನಾಟಕಗಳು, ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ, ಜಾನಪದ ಅರಿವು ಕಾರ್ಯಕ್ರಮ ಅಲ್ಲದೇ, ರಾಜ್ಯ, ರಾಷ್ಟ್ರಮಟ್ಟದ ಜಾನಪದ ಕಲಾ ಸ್ಪರ್ಧೆಗಳಲ್ಲಿ ನಿರ್ಣಾಯಕನಾಗಿ ಮಲ್ಲಿಗವಾಡ ಕಾರ್ಯ ನಿರ್ವಹಿಸಿದ್ದಾರೆ.ಇವರ ಜಾನಪದ ಸೇವೆಗಾಗಿ ಹಲವು ಸಂಘ-ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಪ್ರಕಾಶ ಮಲ್ಲಿಗವಾಡ ಅವರ ಕಾರ್ಯ ಗುರುತಿಸಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಧೀಮಂತ ಪ್ರಶಸ್ತಿ, ವಿವಿಧ ಸಂಸ್ಥೆಗಳು ನೀಡುವ ಜನಪದ ನಕ್ಷತ್ರ, ಕಲಾ ರತ್ನ, ಸಮಾಜ ಭೂಷಣ, ಜನಪದ ಸಿರಿ ಅಂತಹ ಪುರಸ್ಕಾರಗಳನ್ನು ಸಹ ಪಡೆದಿದ್ದಾರೆ.