ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದ ಬಿಜಿಎಸ್ ಸಭಾಭವನದಲ್ಲಿ ಗುರುವಾರ ಭೈರವೈಕ್ಯ ಡಾ. ಬಾಲಗಂಗಾಧರನಾಥಶ್ರೀಗಳ 52ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಹಾಗೂ ಶ್ರೀಗುರು ಸಂಸ್ಮರಣೋತ್ಸವದ ಅಂಗವಾಗಿ ನಡೆದ 46ನೇ ರಾಜ್ಯಮಟ್ಟದ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳದ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶ್ರೀಮಠದ ಭಕ್ತರು ಈ ಸಂಸ್ಥಾನದ ಬೇರುಗಳಿದ್ದಂತೆ. ಪ್ರತಿವರ್ಷ ಆದಿಚುಂಚನಗಿರಿಯಲ್ಲಿ ನಡೆಯುವ ಜಾನಪದ ಕಲಾ ಮೇಳಕ್ಕೆ ನಾಡಿನಾದ್ಯಂತ ಬರುವ ಸಾವಿರಾರು ಜನಪದರು ತಮ್ಮ ತವರು ಮನೆಗೆ ಬಂದಷ್ಟು ಪ್ರೀತಿಯಿಂದ ಶ್ರೀಕ್ಷೇತ್ರದಲ್ಲಿ ನಡೆಯುವ ಜಾನಪದ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಜನಪದರ ಮನಸ್ಸು ಬಹಳ ನಿರ್ಮಲವಾದದ್ದು. ಇಂತಹ ಕಲೆಯನ್ನು ಉಳಿಸಿ, ಬೆಳೆಸುವ ಜೊತೆಗೆ ಮುಂದಿನ ಯುವ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ಡಾ.ರಂಗನಾಥ್ ಅವರು ನಿಜವಾದ ಶಾಸನವನ್ನು ರೂಪಿಸುವ ಶಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾರ್ಕೋನಹಳ್ಳಿಯಿಂದ ಈ ಕ್ಷೇತ್ರದ ಮಾರ್ಗವಾಗಿ ಬಹುತೇಕ ಹಳ್ಳಿಗಳಿಗೆ ನೀರು ಒದಗಿಸುವ ಪ್ರಯತ್ನಕ್ಕೆ ಸರ್ಕಾರದ ಮಂಜೂರಾತಿ ಇದ್ದರೂ ಕೂಡ ಅನೇಕ ವಿರೋಧಗಳ ನಡುವೆಯೂ ಡಾ. ರಂಗನಾಥ್ ರವರ ಪ್ರಯತ್ನದಲ್ಲಿ ಈ ಭಾಗದ 150ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ಪೂರೈಕೆಯಾಗುತ್ತದೆ ಎಂದರು.
ಕುಣಿಗಲ್ ಶಾಸಕ ಡಾ. ಎಚ್.ಡಿ. ರಂಗನಾಥ್ ಮಾತನಾಡಿ, ವಿಜ್ಞಾನ ಕ್ಷೇತ್ರದ ವಿದ್ಯಾರ್ಥಿಯಾದ ನನಗೆ ಶ್ರೀಮಠದ ಒಡನಾಟ, ಒಲವು ಕಡಿಮೆ ಎಂದೇ ಹೇಳಬೇಕು. ಆದರೆ, ಗುರುಗಳ ಆಶೀರ್ವಾದದ ಸೆಳೆತ ನನ್ನನ್ನು ಸದಾ ಪರಮ ಭಕ್ತನಂತೆ ರೂಪಿಸಿದೆ. ಶ್ರೀಮಠದ ಸೇವೆಯಲ್ಲಿ ಒಬ್ಬ ಸೇನಾನಿಯಂತೆ ನಿಲ್ಲಲು ಸದಾ ಸಿದ್ಧನಿದ್ದೇನೆ. ಶ್ರೀ ಮಠದ ಸೇವೆ ಮತ್ತು ಪ್ರಾರ್ಥನೆಯಲ್ಲಿ ಸದಾಕಾಲ ನೀನಿರಬೇಕೆಂದು ನಮ್ಮ ತಾತ ಹೇಳಿದ್ದರು ಎಂದರು.
ಶ್ರೀಮಠವು ಭಕ್ತರಾದ ನಮ್ಮೆಲ್ಲರ ಆಸ್ತಿ. ನಮ್ಮ ಸ್ವಾಮೀಜಿಗಳ ಕೃಪೆಯ ಈ ಕ್ಷೇತ್ರ ಎಲ್ಲರಿಗೂ ಶ್ರೀರಕ್ಷೆಯಾಗಿದೆ. ನಾಡಿನ ಮೂಲೆ ಮೂಲೆಯಿಂದ ಬಂದ ಪ್ರತಿಯೊಬ್ಬ ಕಲಾವಿದರಿಗೂ ಅವಕಾಶ ನೀಡಿ ಕಲೆಯನ್ನು ಘೋಷಿಸುತ್ತಿರುವುದು ಶ್ರೀಮಠದ ಹೆಗ್ಗಳಿಕೆಯಾಗಿದೆ ಎಂದು ಹೇಳಿದರು.
ಖ್ಯಾತ ಗಾಯಕ ಹಾಗೂ ಕಿರುತೆರೆ ನಟ ಶಶಿಧರ ಕೋಟೆ ಮಾತನಾಡಿ, ಕ್ಷೇತ್ರಕ್ಕೆ ಆಗಮಿಸಿ ಸಾರ್ಥಕ ಕ್ಷಣಗಳನ್ನು ಅನುಭವಿಸಿದ್ದೇನೆ. ಗುರುಗಳ ಸಂಪರ್ಕ ಮತ್ತು ಆಶೀರ್ವಾದದಲ್ಲಿ ದಿವ್ಯವಾದ ವಾತಾವರಣ, ಭೈರವನ ಶ್ರೀಕ್ಷೇತ್ರದ ವಿರಾಟ ದರ್ಶನವಾಗಿದೆ. ಶ್ರೀಗಳು ನಮ್ಮೆಲ್ಲರನ್ನು ಆಶೀರ್ವದಿಸಿದ್ದಾರೆ. ನಮ್ಮ ಭಕ್ತಿ ಗೌರವದ ಪ್ರತೀಕವಾಗಿ ಅವರಿಗೆ ದೀರ್ಘ ದಂಡ ಪ್ರಣಾಮಗಳನ್ನು ಸಲ್ಲಿಸುತ್ತೇನೆ ಎಂದರು.
ಎಲ್ಲಾ ಕಲಾವಿದರಿಗೆ ಶ್ರೀಮಠದ ವತಿಯಿಂದ ವಸ್ತ್ರಗಳನ್ನು ವಿತರಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಕಲಾವಿದರು ತಮ್ಮ ಕಲಾ ಪ್ರದರ್ಶನ ನೀಡಿ, ಜನಪದ ಜಾತ್ರೆಯನ್ನೇ ಸೃಷ್ಟಿಸಿದರು.