- ಮನೆ ಮನೆ ಅಂಗಳ ಜನಪದ ಹಬ್ಬ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆನಮ್ಮ ಪೂರ್ವಿಕರು ಮಾತನಾಡುವ ಆಡು ಭಾಷೆಯಲ್ಲಿ ಜಾನಪದ ಸಾಹಿತ್ಯ ಹುಟ್ಟಿರುವುದು ಎಂದು ಶಾರದಾ ಕಲೋತ್ಸವ ಪ್ರಶಸ್ತಿ ಪುರಸ್ಕೃತೆ ರೋಹಿಣಿ ಮೂರ್ತಿ ಹೇಳಿದರು.
ತರೀಕೆರೆ ತಾಲೂಕು ಕನ್ನಡ ಜಾನಪದ ಪರಿಷತ್ತು ಮಹಿಳಾ ಘಟಕದಿಂದ ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷೆ ಲೀಲಾ ಸೋಮಶೇಖರಯ್ಯ ಅವರ ಮನೆಯ ಅಂಗಳದಲ್ಲಿ ನಡೆದ ಮನೆ ಮನೆ ಅಂಗಳ ಜನಪದ ಹಬ್ಬ ಉದ್ಘಾಟಿಸಿ ಮಾತನಾಡಿದರು.ಹಿಂದಿನ ಕಾಲದಲ್ಲಿ ಸ್ತ್ರೀಯರು ಹೊಲಗದ್ದೆಗಳಲ್ಲಿ, ಮದುವೆ ಸಂಭ್ರಮದಲ್ಲಿ ಹಾಗೂ ಬೀಸುಕಲ್ಲು ಬೀಸುವಾಗ ಹುಟ್ಟಿದ ಕಲೆಯೇ ಜನಪದ ಸಾಹಿತ್ಯ, ಜನಪದ ಸಂಪ್ರದಾಯಕ ಕಲೆ ಜಾನಪದ ಹಾಡುಗಳನ್ನು ಕಲಿತು ಜಾನಪದ ಸಾಹಿತ್ಯ ಉಳಿಸಬೇಕು. ಎಲ್ಲರಿಗೂ ಅವಕಾಶ ನೀಡಬೇಕು. ಒಂದು ಮನೆಯಲ್ಲಿ ಸಂಗೀತದ ವಾತಾವರಣವಿದೆ ಎಂದರೆ ಅವರಲ್ಲಿ ಒಳ್ಳೆಯ ಸಂಸ್ಕೃತಿ ಎನ್ನುವ ಅರ್ಥ, ಜನಪದ ಹಾಡಿನಲ್ಲಿ ಶಕ್ತಿ ಇದೆ. ಆಧ್ಯಾತ್ಮಿಕ ಶಕ್ತಿ ಇದೆ. ನಮ್ಮ ಶರೀರಕ್ಕೆ ಔಷಧಿ ನೀಡುವ ಶಕ್ತಿ ಜಾನಪದ ಸಾಹಿತ್ಯಕ್ಕೆ ಇದೆ ಎಂದು ಹೇಳಿದರು.ಕಜಾಪ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಲೀಲಾ ಸೋಮಶೇಖರಯ್ಯ ಮಾತನಾಡಿ ನಮ್ಮ ಪೂರ್ವಿಕರಿಂದ ತಲ ತಲಾಂತರದಿಂದ ಬಂದಿರುವ ಜಾನಪದ ಸಾಹಿತ್ಯ ತನ್ನದೇ ಆದ ಇತಿಹಾಸ, ಪರಂಪರೆ ಹೊಂದಿದೆ. ಪೀಳಿಗೆಯಿಂದ ಪೀಳಿಗೆಗೆ ಜಾನಪದ ಸಾಹಿತ್ಯ, ಸಂಸ್ಕೃತಿ, ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ ಎಂದು ಹೇಳಿದರು.ಜಾನಪದ, ಸಂಸ್ಕೃತಿ, ಕಲೆ, ಸಾಹಿತ್ಯ ಸಂಗೀತವನ್ನು ಹುಟ್ಟಿಹಾಕಿದ ಕೀರ್ತಿ ಅನಾದಿಕಾಲದ ಸ್ತ್ರೀಯರಿಗೆ ಸೇರಬೇಕಾಗಿದೆ. ಜಾನಪದ ಸಂಸ್ಕೃತಿ ಗೆ ಮಹಿಳೆಯರ ಕೊಡುಗೆ ಅಪಾರ, ಸಮಾಜ ನಿರ್ಮಾಣ ಶಕ್ತಿ ಜಾನಪದ ಸಾಹಿತ್ಯಕ್ಕಿದೆ. ವಚನ ಸಾಹಿತ್ಯ ದಾಸ ಸಾಹಿತ್ಯ ಮುಂತಾದ ಎಲ್ಲಾ ಸಾಹಿತ್ಯದ ಮೂಲ ಬೇರು ಜಾನಪದ ಸಾಹಿತ್ಯ. ಜಾನಪದ ಮಹತ್ವವನ್ನು ಮನೆ ಮನೆಯ ಅಂಗಳ ಹಾಗೂ ಶಾಲೆಗಳಲ್ಲಿ ಏರ್ಪಡಿಸಬೇಕೆಂದು ಹೇಳಿದರು.ಕನ್ನಡ ಜಾನಪದ ಪರಿಷತ್ತಿನಿಂದ ರೋಹಿಣಿಮೂರ್ತಿ ಅವರಿಗೆ ಶಾಲು ಹೊಂದಿಸಿ ಗೌರವಿಸಲಾಯಿತು. ಕಜಾಪ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
-10ಕೆಟಿಆರ್.ಕೆ.2ಃ
ತರೀಕೆರೆಯಲ್ಲಿ ತಾಲೂಕು ಕಜಾಪ ಮಹಿಳಾ ಘಟಕದಿಂದ ಅಧ್ಯಕ್ಷೆ ಲೀಲಾಸೋಮಶೇಖರಯ್ಯ ಅವರ ಮನೆಯ ಅಂಗಳದಲ್ಲಿ ಜಾನಪದ ಹಬ್ಬನಡೆಯಿತು. ಶಾರದಾ ಕಲೋತ್ಸವ ಪ್ರಶಸ್ತಿ ಪುರಸ್ಕೃತೆ ರೋಹಿಣಿ ಮೂರ್ತಿ ಮತ್ತಿತರರು ಭಾಗವಹಿಸಿದ್ದರು.