ಕನ್ನಡಪ್ರಭ ವಾರ್ತೆ ಮಂಡ್ಯ
ನಗರದಲ್ಲಿ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಪಿಇಎಸ್ ವಿಜ್ಞಾನ ಕಲಾ ಮತ್ತು ವಾಣಿಜ್ಯ ಕಾಲೇಜು ವತಿಯಿಂದ ಆಯೋಜಿಸಿದ್ದ 29ನೇ ವರ್ಷದ ಕೆ.ವಿ.ಶಂಕರಗೌಡ ಸ್ಮರಣಾರ್ಥ ರಾಜ್ಯ ಮಟ್ಟದ ಜನಪದ ಗೀತೆ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಸಮಾಜದ ಅಭಿವೃದ್ಧಿಗೆ ತಮ್ಮನ್ನೇ ತಾವೂ ಸಮರ್ಪಿಸಿಕೊಂಡು ಶಿಕ್ಷಣ, ರಾಜಕೀಯ, ಸಹಕಾರ, ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ನಿತ್ಯಸಚಿವ ಕೆ.ವಿ.ಶಂಕರಗೌಡ ಅವರ ಸಾಧನೆಗಳ ಕುರಿತು ಜಾನಪದ ಗೀತೆ-ಹಾಡುಗಳು ರಚನೆಯಾಗಲಿ ಎಂದು ನುಡಿದರು.ನಾವು ಕಂಡಂತೆ ಪ್ರಪಂಚದಲ್ಲಿಯೇ ಒಬ್ಬ ಸಚಿವರನ್ನು ನಿತ್ಯ ಸಚಿವರೆಂದು ಗುರುತಿಸಿ ಗೌರವಕ್ಕೆ ಪಾತ್ರರಾಗಿರುವ ಏಕೈಕ ಅಸಾಮಾನ್ಯ ವ್ಯಕ್ತಿ ಶಂಕರಗೌಡರೊಬ್ಬರೇ ಇರಬೇಕು. ಈಗಲು ಇವರೆ ಕುಟುಂಬ ಸಮಾನ್ಯ ಮನುಷ್ಯರಂತೆ ಬಾಡಿಗೆ ಮನೆಯಲ್ಲಿದ್ದಾರೆ. ಈ ವಿಷಯವನ್ನು ಹೇಳುತ್ತಿರುವುದಕ್ಕೆ ಕ್ಷಮೆ ಇರಲಿ ಎಂದರು.
ನಾಟಿ ಕೋಳಿಸಾರು, ರಾಗಿಮುದ್ದೆ, ಸಪ್ಪು ಉಪ್ಸಾರು ಮುದ್ದೆ ಊಟದ ಮುಂದೆ ಫೈಸ್ಟಾರ್ ಹೋಟೇಲ್ ಊಟವೂ ರುಚಿಸದು. ಜಾನಪದ ಉಡುಪು, ಕ್ರೀಡೆಗಳು, ಆಟಗಳು ವೈಜ್ಞಾನಿಕ ಸಂದೇಶ ಸಾರುತ್ತಾ ಒಗ್ಗಟ್ಟು ಹೆಚ್ಚಿಸುತ್ತವೆ ಎಂದು ಹೇಳಿದರು.
ಸ್ಪರ್ಧೆ ವಿಜೇತ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಥಮ 3 ಸಾವಿರ, ದ್ವಿತೀಯ 2 ಸಾವಿರ, ತೃತೀಯ 1 ಸಾವಿರ, 4 ಮಂದಿಗೆ ಸಮಾಧಾನಕರ ಬಹುಮಾನವಾಗಿ 500 ರು. ನೀಡಲಾಯಿತು. ಅತಿ ಹೆಚ್ಚು ಬಹುಮಾನ ಪಡೆದ ಕಾಲೇಜಿಗೆ ಪರ್ಯಾಯ ಪಾರಿತೋಷಕ ನೀಡಲಾಯಿತು. ಸಾರ್ವಜನಿಕರ ವಿಭಾಗದಲ್ಲಿ ಪ್ರಥಮ 2 ಸಾವಿರ, ದ್ವಿತೀಯ 1 ಸಾವಿರ, ತೃತೀಯ 750 ಹಾಗೂ ನಾಲ್ವರಿಗೆ ಸಮಾಧಾನಕರ ಬಹುಮಾನವಾಗಿ ತಲಾ 500 ರೂ.ಗಳನ್ನು ನೀಡಲಾಯಿತು.