ವಿಜಯಪುರ: ಜನಪದರು ಬೆಳಿಗ್ಗೆ ಎದ್ದ ಕೂಡಲೇ ಬಸವಾದಿ ಶರಣರನ್ನು ನೆನೆಯುತ್ತ ಕಾಯಕ ಪ್ರಾರಂಭಿಸುತ್ತಾರೆ. ಇದು ನಾವೆಲ್ಲ ಹೆಮ್ಮೆಪಡುವ ಸಂಗತಿ ಎಂದು ಪ್ರಾಧ್ಯಾಪಕ ಡಾ.ರಮೇಶ ತೇಲಿ ಅಭಿಪ್ರಾಯ ಪಟ್ಟರು.
ವಿಜಯಪುರ: ಜನಪದರು ಬೆಳಿಗ್ಗೆ ಎದ್ದ ಕೂಡಲೇ ಬಸವಾದಿ ಶರಣರನ್ನು ನೆನೆಯುತ್ತ ಕಾಯಕ ಪ್ರಾರಂಭಿಸುತ್ತಾರೆ. ಇದು ನಾವೆಲ್ಲ ಹೆಮ್ಮೆಪಡುವ ಸಂಗತಿ ಎಂದು ಪ್ರಾಧ್ಯಾಪಕ ಡಾ.ರಮೇಶ ತೇಲಿ ಅಭಿಪ್ರಾಯ ಪಟ್ಟರು.
ನಗರದ ಐಶ್ವರ್ಯ ಬಡಾವಣೆಯ ವರದಾಂಜನೇಯ ದೇವಸ್ಥಾನದಲ್ಲಿ ನಡೆದ 547ನೇ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಯಕ ಹಾಗೂ ದಾಸೋಹ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಜನಪದರು ಶರಣರನ್ನು ನೆನೆಸಿದ್ದಾರೆ. ಬಸವಣ್ಣ, ಸಿದ್ದರಾಮೇಶ್ವರ, ಅಲ್ಲಮಪ್ರಭು, ಹಿಪ್ಪರಗಿಯ ಮಾಚಯ್ಯ, ಉಪ್ಪರಿಗೆಯ ಸಂಗಯ್ಯ, ಹಾವಿನಾಳದ ಕಲ್ಲಯ್ಯ, ಮೇದಾರಕ ಕೇತಯ್ಯ, ಗೋಲಗೇರಿಯ ಗೊಲ್ಲಾಳ ಮುಂತಾದ ಶರಣರನ್ನು ಕುರಿತು ಮನ ತುಂಬಿ ಹಾಡಿ, ಅವರ ಬದುಕಿನ ಚಿಂತನೆಗಳನ್ನು ನಮಗೆಲ್ಲ ತಿಳಿಸಿದ್ದಾರೆ. ಜನಪದ ಸಾಹಿತ್ಯ ಶ್ರಮ ಸಂಸ್ಕೃತಿಯ ಪ್ರತೀಕವಾಗಿದ್ದು, ಕಾಯಕದ ನೆಲೆಯಲ್ಲಿ ಅರಳಿದ ಹೂವಾಗಿದೆ ಎಂದರು.
ಅಶೋಕ ದೇಶಟ್ಟಿ ಮಾತನಾಡಿ, ಶರಣರು ನಮಗೆಲ್ಲ ಆದರ್ಶಪ್ರಾಯರು. ಅವರ ಬದುಕಿನ ಚಿಂತನೆಗಳು ಇಂದಿಗೂ ನೂತನವಾಗಿವೆ. ಇವರ ಕುರಿತು ಜನಪದರು ಭಕ್ತಿಯಿಂದ ನೆನೆಸಿದ್ದಾರೆ ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.