ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ತನ್ನದೇ ಆದ ಜಾನಪದ ಶ್ರೀಮಂತಿಕೆ ಹೊಂದಿದ್ದು, ತನ್ನದೇ ಆದ ಹೆಸರು ಗಳಿಸಿದೆ. ಕರ್ನಾಟಕದ ಜಾನಪದ ಪರಂಪರೆಯನ್ನು ಕೋಲಾಟ, ಕಂಸಾಳೆ, ಯಕ್ಷಗಾನ, ಡೊಳ್ಳುಕುಣಿತ, ಸುಗ್ಗಿಕುಣಿತ ಮುಂತಾದ ಜಾನಪದ ಕಲ್ಲು, ರಾಗಿಕಲ್ಲು, ರಾಡೆ ಇವೆಲ್ಲ ಮಾಯವಾಗಿದೆ. ಅವುಗಳ ಸ್ಥಾನದಲ್ಲಿ ಆಧುನಿಕ ವಸ್ತುಗಳು ಸ್ಥಾನ ಪಡೆದುಕೊಂಡಿದೆ. ಜನಪದದಲ್ಲಿ ಮನುಷ್ಯ ಪ್ರೀತಿ, ಸಮಾಜದ ಮೇಲಿನ ಕಾಳಜಿಯನ್ನು ವಿಶೇಷವಾಗಿ ಕಾಣಬಹುದು ಎಂದರು.
ಮೌಖಿಕ ಪರಂಪರೆಯು ಮಾಯವಾಗಿ ಅಖಿತ ಪರಂಪರೆಯ ಈ ಹೊತ್ತಿನಲ್ಲಿ ಜನಪದವನ್ನು ಉಳಿಸಿ ಬೆಳೆಸಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೋರನ ಸರಸ್ವತಿ ಪ್ರಕಾಶ ಅವರು ಮಾತನಾಡಿ ಮೌಖಿಕ ಪರಂಪರೆಯು ಬಾಯಿಯಿಂದ ಬಾಯಿಗೆ ಹರಿದು ಬರುವಂಥದ್ದು, ಅದು ಗಾದೆ, ಒಗಟು, ಸೋಬಾನೆ ಹಾಡುಗಳು, ಕಥೆಗಳು, ಕುಣಿತಗಳು, ಆಟಗಳು, ಹೀಗೆ ಹಲವು ಪ್ರಕಾರಗಳಲ್ಲಿ ಒಳಗೊಂಡಿದೆ. ನಮ್ಮ ಜೀವನಾವರ್ತನದ ಮತ್ತು ವಾರ್ಷಿಕಾ ವರ್ತನದ ಎಲ್ಲಾ ಆಚರಣೆಗಳು ಜನಪದದೊಳಡಗಿದೆ. ಅದನ್ನು ಉಳಿಸಿ ಮುಂದಿನ ತಲೆಮಾರಿಗೆ ದಾಟಿಸುವ ಕಾರ್ಯವನ್ನು ನಾವು ಮಾಡಬೇಕಿದೆ ಎಂದರು.
ಗಾಯನ ಮತ್ತು ತಂಡದವರು ಪ್ರಾರ್ಥಿಸಿದರು. ಸ್ನೇಹಾ ನಿರೂಪಿಸಿದರು. ಪ್ರಿಯಾ ಸ್ವಾಗತಿಸಿ, ಸಿಂಚನ ವಂದಿಸಿದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಮಿತಿ ಸಂಚಾಲಕಿ ನಿರ್ಮಲ, ಕ್ರೀಡಾ ಸಂಚಾಲಕ ರಾಖಿಪೂವಣ್ಣ, ಸತೀಶ್, ನಮಿತ, ಮುದ್ದಣ್ಣ, ಈ.ರಾಜು ಹಾಜರಿದ್ದರು.