ಕನ್ನಡಪ್ರಭ ವಾರ್ತೆ ಉಡುಪಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಆಶಾ ಕುಮಾರಿ ಮಾತನಾಡಿ, ಜಾನಪದವು ವ್ಯಕ್ತಿಗಳಿಗೆ ಜೀವನ ಮೌಲ್ಯ ಮತ್ತು ಸಂಸ್ಕೃತಿಯನ್ನು ಕಲಿಸುವ ದೊಡ್ದ ಪ್ರಕಾರವಾಗಿದೆ. ಈ ಜಾನಪದ ರಂಗದಲ್ಲಿ ಪದಗಳು, ಕ್ರೀಡೆಗಳು, ಸಂಗೀತ, ಹಬ್ಬ ಹರಿದಿನಗಳು ಮತ್ತು ಸಾಹಿತ್ಯವು ಒಳಗೊಂಡಿದ್ದು, ಇದು ಸಮಾಜಕ್ಕೆ ಜೀವನ ಸಂದೇಶ ನೀಡುವ ಶ್ರೇಷ್ಠ ಪ್ರಕಾರವಾಗಿದೆ ಎಂದರು.ಕನ್ನಡ ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ ಗಣೇಶ ಗಂಗೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಜಾನಪದ ಪರಿಷತ್‌ನ ವಿಕಾಸಕ್ಕಾಗಿ ಜಾನಪದ ಪರಿಕಲ್ಪನೆ ಬಗ್ಗೆ ವಿವರಿಸಿ, ಜಾನಪದ ಕ್ಷೇತ್ರದಲ್ಲಿ ಇನ್ನಷ್ಟು ಅಧ್ಯಯನ ನಡೆದು ಅದನ್ನು ಮುಂದಿನ ಪೀಳಿಗೆಗೆ ನೀಡಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ವಿಯೆಟ್ನಾಂನಲ್ಲಿ ಯೋಗ ಗುರುಗಳಾಗಿ ಸಾಧನೆ ಮಾಡಿದ ದೇವರಾಜ್ ದೇವಾಡಿಗ ನೇರಳಕಟ್ಟೆ ಅವರನ್ನು ಗೌರವಿಸಲಾಯಿತು.ಉಡುಪಿ ತಾಲೂಕು ಅಧ್ಯಕ್ಷೆ ಮಾಯಾ ಕಾಮತ್, ತಾಲೂಕು ಪದಾಧಿಕಾರಿ ಪ್ರಭಾರಾವ್, ಉಪನ್ಯಾಸಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು. ಉಪನ್ಯಾಸಕ ರಾಘವೇಂದ್ರ ಜಿ.ಜಿ. ವಂದಿಸಿದರು.ಸಭಾ ಕಾರ್ಯಕ್ರಮದ ನಂತರ ಡಾ. ಗಣೇಶ್ ಗಂಗೊಳ್ಳಿ ಅವರಿಂದ ಜಾನಪದ ಸಂಗೀತ ಕಾರ್ಯಕ್ರಮ ಮೂಡಿಬಂತು.