ಕಿನ್ನಿಗೋಳಿಯಲ್ಲಿ ಜಾನಪದ ಅಂದು ಇಂದು ಮುಂದು ಚಿಂತನೆ ಕಾರ್ಯಕ್ರಮ

KannadaprabhaNewsNetwork |  
Published : Apr 14, 2025, 01:22 AM IST
ಕಿನ್ನಿಗೋಳಿಯಲ್ಲಿ  ಜಾನಪದ  ಅಂದು ಇಂದು ಮುಂದು ಚಿಂತನೆ ಕಾರ್ಯಕ್ರಮ   | Kannada Prabha

ಸಾರಾಂಶ

ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ದ. ಕ. ಜಿಲ್ಲಾ ತಾಲೂಕು ಘಟಕ ಮೂಡಬಿದಿರೆ ಹಾಗೂ ಯುಗಪುರುಷ ಕಿನ್ನಿಗೋಳಿ ಸಹಭಾಗಿತ್ವದಲ್ಲಿ ಜಾನಪದ ಅಂದು ಇಂದು ಮುಂದು ಚಿಂತನೆ ಮತ್ತು ವಾಯ್ಸ್ ಆಫ್ ಆರಾಧನ ಬಳಗದಿಂದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭವಾರ್ತೆ ಮೂಲ್ಕಿ

ಆಧುನಿಕತೆಯ ಕಾಲಘಟ್ಟದಲ್ಲಿ ನಮ್ಮ ಜಾನಪದ ಆಚರಣೆಗಳು, ಆಟಿ ಆಚರಣೆಗಳು ಹಾಗೂ ಹಬ್ಬದ ಸಂಪ್ರದಾಯಗಳು ತಿಂಡಿ ತಿನಿಸುಗಳು ಮರೆಯಾಗುತ್ತಿದ್ದು ಅದನ್ನು ಮುಂದಿನ ತಲೆಮಾರಿಗೆ ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕು ಎಂದು ತುಳುವರ್ಲ್ಡ್‌ನ ಡಾ| ರಾಜೇಶ್ ಆಳ್ವ ಬದಿಯಡ್ಕ ಹೇಳಿದರು.

ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ದ. ಕ. ಜಿಲ್ಲಾ ತಾಲೂಕು ಘಟಕ ಮೂಡಬಿದಿರೆ ಹಾಗೂ ಯುಗಪುರುಷ ಕಿನ್ನಿಗೋಳಿ ಸಹಭಾಗಿತ್ವದಲ್ಲಿ ನಡೆದ ಜಾನಪದ ಅಂದು ಇಂದು ಮುಂದು ಚಿಂತನೆ ಮತ್ತು ವಾಯ್ಸ್ ಆಫ್ ಆರಾಧನ ಬಳಗದಿಂದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಗೈದು ಮಾತನಾಡಿದರು.

ಕಿನ್ನಿಗೋಳಿಯ ಯುಗಪುರುಷದ ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಜಾನಪದ ಪರಿಷತ್ ಮೂಡಬಿದಿರೆ ಘಟಕದ ಅಧ್ಯಕ್ಷೆ ಪದ್ಮಶ್ರೀ ಭಟ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್, ಡಾ. ರಾಜೇಶ್ ಭಟ್ ಮಂದಾರ, ರಾಜೇಶ್ ಸ್ಕ್ಯೆಲಾರ್ಕ್, ಉಪಾಧ್ಯಕ್ಷ ಚಂದ್ರಹಾಸ ದೇವಾಡಿಗ, ಅಭಿಷೇಕ ಶೆಟ್ಟಿ ಐಕಳ, ಡಾ. ರಾಮಕೃಷ್ಣ ಶಿರೂರು, ಸದಾನಂದ ನಾರಾವಿ, ಬಸವರಾಜ ಮಂತ್ರಿ, ದೀನ್‌ರಾಜ್ ಕೆ ಮತ್ತಿತರರು ಉಪಸ್ಥಿತರಿದ್ದರು.

ಸಂಭ್ರಮ ಸ್ವಾಗತಿಸಿದರು. ಚೇತನಾ ರಾಜೇಂದ್ರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಾಯ್ಸ್ ಆಫ್ ಆರಾಧನ ಬಳಗದವರಿಂದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ