ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ತಾಲೂಕಿನ ದೊಡ್ಡಕಾಡನೂರು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಜೆಎಸ್‌ಎಸ್ ಅನಾಥಾಲಯದಲ್ಲಿ ಕ್ಲಸ್ಟರ್ ವ್ಯಾಪ್ತಿಯ ವಸತಿ ನಿಲಯಗಳ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಾನಪದ ಗೀತಾ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಸುಮಾರು ೧೯೮೬ ರಲ್ಲಿ ಹಳ್ಳಿ ಮೈಸೂರು ಹೋಬಳಿ ಭಾಗದಲ್ಲಿ ಭೀಕರ ಬರಗಾಲ ಸಂಭವಿಸಿತ್ತು. ಆಗ ಅಂದಿನ ಸುತ್ತೂರು ಶ್ರೀಮಠದ ಲಿಂಗೈಕ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿ ಗಂಜಿ ಕೇಂದ್ರವನ್ನು ತೆರೆಯುವ ಮೂಲಕ, ಆಹಾರ ಸಮಸ್ಯೆಯಲ್ಲಿ ಸಿಲುಕಿದ್ದ ಅನೇಕ ಜನರನ್ನು ರಕ್ಷಿಸಿದ್ದಾರೆ. ಆದ್ದರಿಂದ ಈ ಭಾಗದ ಜನರು ಪೂಜ್ಯರಿಗೆ ಋಣಿಗಳಾಗಿರಬೇಕು ಎಂದು ಸ್ಮರಿಸಿದರು.
ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಚೌಡಯ್ಯ ಕಟ್ನವಾಡಿ, ಜನಪದ ಗೀತೆಗಳನ್ನು ಜನರು ಸುಖ-ದುಃಖ ಮೊದಲಾದ ಸಂದರ್ಭದಲ್ಲಿ ಹಾಡುತ್ತಾರೆ. ಜನಪದ ಗೀತೆಗಳಿಗೆ ಜನರನ್ನು ಸಂತೋಷ ಪಡಿಸುವ ಹಾಗೂ ದುಃಖತರಿಸುವ ತಾಕತ್ತಿದೆ. ಜನಪದ ಗೀತೆಗಳನ್ನು ಯಾವರೀತಿ ಬೇಕಿದ್ದರೂ ಹಾಡಬಹುದು. ಸಾಹಿತ್ಯವು ಬಾಯಿಂದ ಬಾಯಿಗೆ ಬಂದಿರುವುದರಿಂದ ಸುಲಭವಾಗಿ ಅರ್ಥವಾಗುತ್ತದೆ ಮತ್ತು ಜನರಿಗೆ ತಲುಪುತ್ತದೆ ಎಂದು ತಿಳಿಸಿ, ಕೆಲವು ಜನಪದ ಗೀತೆಗಳನ್ನು ಹಾಡಿದರು.ಜೆಎಸ್‌ಎಸ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಸುರೇಶ್ ಪಿ, ಮಾತನಾಡಿದರು. ಜನಪದ ಗೀತಾ ಗಾಯನ ಸ್ಪರ್ಧೆಯಲ್ಲಿ ಎಸ್.ಅಂಕನಹಳ್ಳಿ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ಪಂಕಜ್ ಡಿ.ಎಸ್. ಮತ್ತು ಚಿರಾಗ್ ಪ್ರಥಮ ಸ್ಥಾನ, ದೇವರಮುದ್ದನಹಳ್ಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ದೇವರಾಜ ಅರಸು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿ ಸ್ವೀಕೃತ್ ಜಿ.ಎಂ. ದ್ವಿತೀಯ ಸ್ಥಾನ, ದೊಡ್ಡಕಾಡನೂರು ಜೆಎಸ್‌ಎಸ್ ಅನಾಥಾಲಯದ ಕುಮಾರ್ ಮತ್ತು ಪ್ರೀತಮ್ ನಾಯಕ ತೃತೀಯ ಸ್ಥಾನ ಗಳಿಸಿದರು ಹಾಗೂ ವಿಜೇತರಿಗೆ ನಗದು ಬಹುಮಾನ ನೀಡಲಾಯಿತು. ಕನ್ನಡ ಉಪನ್ಯಾಸಕಿ ರೇಣುಕ ಎಸ್ ತಿಗರೇರ, ಸಹ ಶಿಕ್ಷಕಿ ಮಮತಾ ತೀರ್ಪುಗಾರರಾಗಿದ್ದರು.೧೦ನೇ ತರಗತಿ ವಿದ್ಯಾರ್ಥಿ ಪ್ರೀತಂನಾಯಕ ಪ್ರಾರ್ಥಸಿದರು. ಕನ್ನಡ ಶಿಕ್ಷಕ ಲೋಕೇಶ್ ಎಂ. ಸ್ವಾಗತಿಸಿದರು. ಹಿಂದಿ ಶಿಕ್ಷಕ ಗಂಗಾನಾಯ್ಕ ಟಿ. ವಂದಿಸಿದರು.