ಬುದ್ಧನ ಸಂದೇಶ ಜೀವನದಲ್ಲಿ ಪಾಲಿಸಿ: ಶರ್ಮಿಳಾ

KannadaprabhaNewsNetwork |  
Published : Oct 20, 2024, 02:03 AM IST
ಸುರಪುರ ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಸೀಗಿ ಹುಣ್ಣಿಮೆ ನಿಮಿತ್ತ ಆಯೋಜಿಸಿದ್ದ ಧಮ್ಮ ವಂದನಾ ಕಾರ್ಯಕ್ರಮದಲ್ಲಿ ನ್ಯಾಯವಾದಿ ಶರ್ಮಿಳಾ ಎಂ. ಕರಡಕಲ್ ಅವರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

Follow Buddha's message in life: Sharmila

-ಸುರಪುರ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಸೀಗಿ ಹುಣ್ಣಿಮೆ ಧಮ್ಮ ವಂದನಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಸುರಪುರ

ನೆರೆ ದೇಶದ ಶ್ರೀಲಂಕಾದಲ್ಲಿನ ಬುದ್ಧ ವಿಹಾರಗಳು ಬೌದ್ಧ ಧರ್ಮಿಯರಿಗೆ ನೂತನ ಅರಿವನ್ನು ನೀಡುತ್ತಿದ್ದು, ಬುದ್ಧನ ಧಮ್ಮ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ನ್ಯಾಯವಾದಿ ಶರ್ಮಿಳಾ ಎಂ. ಕರಡಕಲ್ ಹೇಳಿದರು.

ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಸೀಗಿ ಹುಣ್ಣಿಮೆ ನಿಮಿತ್ತ ಆಯೋಜಿಸಿದ್ದ ಧಮ್ಮ ವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬುದ್ಧ ಧರ್ಮಿಯರಾದವರು ಒಮ್ಮೆಯಾದರು ಶ್ರೀಲಂಕಾ ಪ್ರವಾಸ ಮಾಡಬೇಕು. ಬೌದ್ಧ ವಿಹಾರಗಳ ದರ್ಶನ ಮಾಡಬೇಕು ಎಂದರು.

ಸಾನಿಧ್ಯ ವಹಿಸಿದ್ದ ವರಜ್ಯೋತಿ ಬಂತೇಜಿ ಮಾತನಾಡಿ, ಬುದ್ಧನ ಸಂದೇಶ ಡಾ. ಬಾಬಾ ಸಾಹೇಬರ ಧಮ್ಮ ಅನುಯಾಯಿಗಳಾದ ನಾವುಗಳು ಬಿಕ್ಕುಗಳನ್ನು ಗೌರವದಿಂದ ಸ್ವಾಗತಿಸಿ ಅವರಿಗೆ ಭೋಜನ ದಾನ ನೀಡುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಬುದ್ಧನ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ತ್ರಿಸರಣ ಪಂಚಶೀಲ ಪಠಣದೊಂದಿಗೆ ಧಮ್ಮ ವಂದನೆ ಸಲ್ಲಿಸಿದರು. ರಾಹುಲ್ ಹುಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.

........ ಬಾಕ್ಸ್ ...........

ಸನ್ಮಾನ

ಶ್ರೀಲಂಕಾ ಯಾತ್ರಾರ್ಥಿ ವಕೀಲೆ ಶರ್ಮಿಳಾ, ಪದವಿ ಪೂರ್ವ ವಿಭಾಗದಿಂದ ಜುಡೋದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ರಾಹುಲ್ ಎಂ. ಕಿರದಳ್ಳಿ, ದಸಂಸ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕರಾಗಿ ನೇಮಕಗೊಂಡ ರಾಮಣ್ಣ ಕಲ್ಲದೇವನಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸ್ಮನಿ, ಪದಾಧಿಕಾರಿಗಳಾದ ನಾಗಣ್ಣ ಕಲ್ಲದೇವನಹಳ್ಳಿ, ಭೀಮರಾಯ ಸಿಂದಗೇರಿ, ಮಾಳಪ್ಪ ಕಿರದಳ್ಳಿ, ಪರಶುರಾಮ ನಾಟೇಕಾರ್, ಮರೆಪ್ಪ ತೇಲ್ಕರ್, ಹಣಮಂತ ತೇಲ್ಕರ್, ಜಿ.ಆರ್. ಬನ್ನಾಳ, ಶರಣು ತಳವಾರಗೇರಾ, ಮಿಲಿಂದ್ ಮಲಿಕೆನವರ್, ಟ್ರಸ್ಟ್ ಮಹಿಳಾ ಘಟಕದ ಶಿಲ್ಪಾ ಆರ್.ಹುಲಿಮನಿ, ಸುನೀತಾ ಎಂ. ಕಿರದಳ್ಳಿ, ಭೀಮಬಾಯಿ ಎನ್. ಕಲ್ಲದೇವನಹಳ್ಳಿ, ಯಲ್ಲಮ್ಮ ಎಚ್. ತೇಲ್ಕರ್, ನೀಲಾ ಇದ್ದರು.

----

18ವೈಡಿಆರ್7: ಸುರಪುರ ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಸೀಗಿ ಹುಣ್ಣಿಮೆ ನಿಮಿತ್ತ ಆಯೋಜಿಸಿದ್ದ ಧಮ್ಮ ವಂದನಾ ಕಾರ್ಯಕ್ರಮದಲ್ಲಿ ನ್ಯಾ. ಶರ್ಮಿಳಾ ಎಂ. ಕರಡಕಲ್ ಅವರನ್ನು ಸನ್ಮಾನಿಸಲಾಯಿತು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು