ಕನ್ನಡಪ್ರಭ ವಾರ್ತೆ ಬೆಳಗಾವಿ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿಮ ಅಂಗವಾಗಿ ಭಾನುವಾರ ಸಾಂಬ್ರಾದಲ್ಲಿ ಆಯೋಜಿಸಿದ್ದ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಿ, ಅಪ್ಪಿಕೊಂಡಿರುವ ನಾಡಿನ ಜನರಿಂದ ಯಶಸ್ವಿಯಾಗಿ ಈ ಕಾರ್ಯ ನಡೆಸಲು ಯೋಜನೆ ರೂಪಿಸಲಾಗಿದೆ. ಮಾನವ ಸರಪಳಿ ಸಂವಿಧಾನದ ಮೂಲ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಸಂಕೇತವಾಗಿ ಇರಲಿದ್ದು, ಇದರಲ್ಲಿ ಭಾಗವಹಿಸುವ ಎಲ್ಲರೂ ಕೂಡ ಪ್ರಜಾಪ್ರಭುತ್ವ ಮೂಲ ಆಶಯಗಳ ಕುರಿತು ಸಾರ್ವಜನಿಕ ಸಂದೇಶ ನೀಡಲಿದ್ದಾರೆ ಎಂದು ಹೇಳಿದರು.
ಬೆಳಗಾವಿ ತಾಲೂಕಿನ ಕರಡಿಗುಡ್ಡಿ ಗ್ರಾಮದಿಂದ ಮೋದಗಾ ಗ್ರಾಮದವರೆಗೆ ನಾಗರಿಕರು, ವಿವಿಧ ಯುವ ಸಂಘಟನೆ, ನಿವೃತ್ತ ಸೈನಿಕರು, ಸ್ತ್ರೀ ಶಕ್ತಿ ಸಂಘ, ಅಂಗನವಾಡಿ ಆಶಾ ಕಾರ್ಯಕರ್ತೆಯರು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಬೃಹತ್ ಮಾನವ ಸರಪಳಿ ನಿರ್ಮಿಸಿದರು.ಎನ್‌ಸಿಸಿ, ಎನ್ನೆಸ್ಸೆಸ್ ಸೌಟ್ಸ್ ಗೌಡ್ಸ್ ವಿದ್ಯಾರ್ಥಿಗಳು ಭಾವಕ್ಯತೆ ಘೋಷಣೆ ಕೂಗಿದರು. ನಿವೃತ್ತ ಸೈನಿಕರು ಹಾಗೂ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ರಾಷ್ಟ್ರ ಪ್ರೇಮ ಮತ್ತು ಸ್ವಾತಂತ್ರ್ಯವೀರರ ಘೋಷಣೆಗಳ ಭಿತ್ತಿಪತ್ರ ಪ್ರದರ್ಶಿದರು.
ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಹೆಗಡೆ, ಸಹಾಯಕ ನಿರ್ದೇಶಕ ಬಿ.ಡಿ ಕಡೆಮನಿ, ಗ್ರಾಪಂ ಅಧ್ಯಕ್ಷೆ ರಚನಾ ಗಾವಡೆ, ಉಪಾಧ್ಯಕ್ಷ ಮಾರುತಿ ಜೋಗಾನಿ, ಮುಂಖಡರಾದ ರಾಜು ದೇಸಾಯಿ, ಲಕ್ಷ್ಮಣ ದಂಡಾಪುರ, ದಿಶಾ ಸಮಿತಿ ಸದಸ್ಯರಾದ ಸಿದ್ದಲಿಂಗ ಸರೂರ, ನಾಗೇಶ ದೇಸಾಯಿ, ರವಿಕಾಂತ ಸಿ. ಎಂ, ಪ್ರಶಾಂತ ಮುನ್ನವಳ್ಳಿ, ರೇವತಿ ಶಿಂಗೆ, ವಸಂತ ಕುಮಾರ, ರಾನವ್ವ ಮಾದರ, ಗೋಪಾಲ ಗುಡಸಿ, ರಾಜೇಂದ್ರ ಮೊರಬದ, ರಮೇಶ ಹೊಗಾರ, ಅಭಿನಂದನ ಹೊಸಗೌಡರ, ಬೆಳಗಾವಿ ತಾಲೂಕಿನ ನಾಗರಿಕರು, ವಿವಿಧ ಯುವ ಸಂಘಟಣೆ, ನಿವೃತ್ತ ಸೈನಿಕರು, ಸ್ತ್ರೀ ಶಕ್ತಿ, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಹಾಗೂ ಗ್ರಾಪಂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಸಾಂಬ್ರಾ ಗ್ರಾಮದಲ್ಲಿ ವಿನೂತನವಾಗಿ ಭಜನೆ, ಡೊಳ್ಳು ಕುಣಿತ, ಮೆರವಣಿಗೆಯಲ್ಲಿ ವೀರಗಾಸ, ಕರಡಿ ಮುಜಲಿ ವಾದ್ಯಗಳನ್ನು ನುಡಿಸುವ ತಂಡಗಳು ಸೇರಿದಂತೆ ವಿವಿಧ ಕಲಾ ತಂಡಗಳು ಕಾರ್ಯಕ್ರಮಕ್ಕೆ ಮೆರಗು ನೀಡಿದವು.