ಕ್ಯಾನ್ಸಿರಾಂ ತತ್ವಾದರ್ಶಗಳ ಆದರ್ಶಗಳ ಪಾಲಿಸಿ: ಅಂದಾನಪ್ಪ

KannadaprabhaNewsNetwork |  
Published : Oct 12, 2026, 01:45 AM IST
ಕೆ ಕೆ ಪಿ ಸುದ್ದಿ 02: ತಾಲ್ಲೂಕಿನ ಹೊಸಕೋಟೆ ಗ್ರಾಮದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ವತಿಯಿಂದ ಕ್ಯಾನ್ಸಿರಾಂ ಜಿ ಪರಿನಿಬ್ಬಾಣ ದಿನಾಚರಣೆ.  | Kannada Prabha

ಸಾರಾಂಶ

ಕನಕಪುರ: ಬಾಬಾ ಸಾಹೇಬರ ಆಶಯದಂತೆ ಬಹುಜನರ ಪಕ್ಷವನ್ನು ಸ್ಥಾಪಿಸಿ ಉತ್ತರ ಪ್ರದೇಶದಲ್ಲಿ ಅಧಿಕಾರ ನಿರ್ವಹಿಸುವ ಸರ್ವ ಜನರ ಅಭಿವೃದ್ಧಿಗೆ ಶ್ರಮಿಸಿದ ನಾಯಕ ಕ್ಯಾನ್ಸಿರಾಂ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಅಖಿಲ ಭಾರತ ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಅಂದಾನಪ್ಪ ತಿಳಿಸಿದರು

ಕನಕಪುರ: ಬಾಬಾ ಸಾಹೇಬರ ಆಶಯದಂತೆ ಬಹುಜನರ ಪಕ್ಷವನ್ನು ಸ್ಥಾಪಿಸಿ ಉತ್ತರ ಪ್ರದೇಶದಲ್ಲಿ ಅಧಿಕಾರ ನಿರ್ವಹಿಸುವ ಸರ್ವ ಜನರ ಅಭಿವೃದ್ಧಿಗೆ ಶ್ರಮಿಸಿದ ನಾಯಕ ಕ್ಯಾನ್ಸಿರಾಂ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಅಖಿಲ ಭಾರತ ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಅಂದಾನಪ್ಪ ತಿಳಿಸಿದರು.

ತಾಲೂಕಿನ ಕಸಬಾ ಹೋಬಳಿ ಹೊಸಕೋಟೆ ಗ್ರಾಮದಲ್ಲಿ ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಡಾ. ಕ್ಯಾನ್ಸಿರಾಂ ಅವರ 20ನೇ ಪರಿನಿಬ್ಬಾಣ ದಿನದ ಪ್ರಯುಕ್ತ ಆಯೋಜಿಸಿದ್ದ ಬಹುಜನ ಸಮಾಜದ ದೃಢ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ವರಿಗೂ ಸಮಬಾಳು ಸಮಪಾಲು ಎಂಬ ತತ್ವದಡಿ ದೇಶದಲ್ಲಿ ತುಳಿತಕ್ಕೆ ಒಳಗಾದವರ, ಶೋಷಿತರ ಪರವಾಗಿ ಕೆಲಸ ಮಾಡಬೇಕೆಂಬ ಹಂಬಲದಿಂದ 1992-94ರಲ್ಲಿ ಬಹುಜನ ಸಮಾಜ ಪಕ್ಷವನ್ನು ಸ್ಥಾಪಿಸಿ ದೆಹಲಿಯ ಕೆಂಪುಕೋಟೆ ಮೇಲೆ ಆನೆ ಚಿತ್ರವುಳ್ಳ ನೀಲಿ ಬಾವುಟ ಹಾರಿಸುವ ಮೂಲಕ ದೇಶದಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟು ಹಾಕಿದ ಕ್ಯಾನ್ಸಿರಾಂ ಆಶಯದಂತೆ ಬಯಕೆಯಂತೆ ನಾವೆಲ್ಲರೂ ಒಗ್ಗೂಡಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡಬೇಕು ಎಂದು ಹೇಳಿದರು.

ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ದೇಶದ ಸಂವಿಧಾನವನ್ನೇ ಬುಡಮೇಲು ಮಾಡಲು ಮನುವಾದಿಗಳು ಷಡ್ಯಂತ್ರ ರೂಪಿಸಿದ್ದು ದಲಿತ ಒಬಿಸಿ ಸೇರಿದಂತೆ ಕೆಳವರ್ಗದ ಜನರನ್ನು ತುಳಿಯುವ ಕೆಲಸಕ್ಕೆ ಈಗಾಗಲೇ ತಯಾರಿ ನಡೆಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಒಂದೊಂದೇ ಕಾಯ್ದೆಗಳನ್ನ ಸದ್ದಿಲ್ಲದೆ ಜಾರಿ ಮಾಡುತ್ತಿದ್ದು ಇದರ ಒಂದು ಭಾಗವಾಗಿ ಮತದಾರರ ಪರಿಷ್ಕರಣೆ ನೆಪದಲ್ಲಿ ಸುಮಾರು 13 ಕೋಟಿ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿರುವುದೇ ಸಾಕ್ಷಿಯಾಗಿದೆ. ಇದನ್ನು ವಿರೋಧಿಸುವ, ಪ್ರಶ್ನಿಸುವ ಕೆಲಸ ಬಹುಜನರು ಮಾಡದಿರುವುದು ಮುಂದಿನ ದಿನಗಳಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ನಾಗೇಶ್ ಮಾತನಾಡಿ, ಕಳೆದ ಎರಡು ತಿಂಗಳು ಹಿಂದೆ ದೆಹಲಿಯ ಜಂತರ್ ಮಂತರ್‌ನಲ್ಲಿ ಕೆಲ ದೇಶದ್ರೋಹಿ ಹಾಗೂ ಮೀಸಲಾತಿ ವಿರೋಧಿಗಳು ಮೀಸಲಾತಿ ಪದ್ಧತಿ ತೆಗೆದು ಹಾಕುವಂತೆ ದೊಡ್ಡ ಆಂದೋಲನ ನಡೆಸಿದ್ದನ್ನು ಖಂಡಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಕೆ ನೀಡಿದರೂ ಕ್ಯಾರೇ ಎನ್ನದ ಮೀಸಲಾತಿ ವಿರೋಧಿ ತಂಡ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

2000ದಲ್ಲಿ ದಿ. ಮಾಜಿ ಪ್ರಧಾನಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನ ಪರಾಮರ್ಶೆ ಮಾಡಲು ಹೊರಟ ಸಮಯದಲ್ಲಿ ಇಡೀ ದೇಶಾದ್ಯಂತ ದೊಡ್ಡ ಆಂದೋಲನ ನಡೆಸುವ ಮೂಲಕ ಅಂದಿನ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಬದಲಾಯಿಸಿದ್ದು ಇತಿಹಾಸವಾಗಿದೆ. ಅವರ ಹೋರಾಟ ಮನೋಭಾವನೆ, ದಮನಿತರ ಪರ ಕಾಳಜಿಯನ್ನು ನಾವು ಮುಂದುವರಿಸಿಕೊಂಡು ಹೋಗಬಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಟಿ.ಸಿ.ಉಮೇಶ್, ತಾ.ಮ.ಮಲ್ಲೇಶ್, ಗೌರಮ್ಮ ಶಿವಲಿಂಗೇಗೌಡ, ಜಿಲ್ಲಾ ಪ್ರ. ಕಾರ್ಯದರ್ಶಿ ಮುರುಗೇಶ್, ಜಿಲ್ಲಾ ಕಾರ್ಯದರ್ಶಿಟಿ.ಕೃಷ್ಣಮೂರ್ತಿ, ಮಾಗಡಿ ಜಿಲ್ಲಾ ಕಾರ್ಯದರ್ಶಿ ರಾಮಣ್ಣ, ಮಹಿಳಾ ಘಟಕದ ಉಪಾಧ್ಯಕ್ಷರಾದ ಶೋಭಾ ಮೆಳೆಕೋಟೆ, ತಾಲೂಕು ಉಪಾಧ್ಯಕ್ಷ ರಮೇಶ್, ಟೌನ್ ಅಧ್ಯಕ್ಷ ತಬರೇಷೇ ನಾರಾಯಣ, ಈಶ್ವರ ಇತರರು ಪಾಲ್ಗೊಂಡಿದ್ದರು.

ಕೆ ಕೆ ಪಿ ಸುದ್ದಿ 02:

ಕನಕಪುರ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷ ಆಯೋಜಿಸಿದ್ದಡಾ. ಕ್ಯಾನ್ಸಿರಾಂ ಅವರ 20ನೇ ಪರಿನಿಬ್ಬಾಣ ದಿನಾಚರಣೆ ಕಾರ್ಯಕ್ರಮಕ್ಕೆ ಬಿಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಅಂದಾನಪ್ಪ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಂದ್ರಶೇಖರ್ ನಿಸ್ವಾರ್ಥ ರಾಜಕಾರಣಿ,ಪಟೇಲರು ಶ್ರೇಷ್ಠರು: ಬಿಎಲ್‌ ಶಂಕರ್‌
ಪ್ರತ್ಯೇಕ ರಸ್ತೆ ಅಪಘಾತ ಕೇಸ್‌: ಇಬ್ಬರು ಚಾಲಕರಿಗೆ ಶಿಕ್ಷೆ ಪ್ರಕಟ