ಕನ್ನಡಪ್ರಭ ವಾರ್ತೆ ಮಧುಗಿರಿ
ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ (ಎಆರ್‌ಟಿಒ) ಮಧುಗಿರಿ, ನ್ಯಾಯಾಂಗ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಪೋಲಿಸ್ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಜನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾಗರಿಕತೆ ಭರದಲ್ಲಿ ವಾಹನಗಳನ್ನು ಓಡಿಸುವವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿಕೊಳ್ಳುವ ಜೊತೆಗೆ ರಸ್ತೆ ನಿಯಮಗಳನ್ನು ಅನುಸರಿಸುವ ಮೂಲಕ ಅಪಘಾತಗಳನ್ನು ತಪ್ಪಿಸಿ. ಅಪ್ರಾಪ್ತ ಮಕ್ಕಳ ಕೈಗೆ ವಾಹನಗಳನ್ನು ನೀಡದಿರಿ, ಅಮಲು ಪದಾರ್ಥಗಳನ್ನು ಸೇವಿಸಿ ಅತಿ ವೇಗವಾಗಿ ವಾಹನ ಚಲಾಯಿಸಬೇಡಿ. ಪ್ರತಿ ವರ್ಷ ಅಪಘಾತದಿಂದಲೇ 1.5ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಈ ಪೈಕಿ ಎಚ್ಚು ಯುವಕರು ಬಲಿಯಾಗುತ್ತಿದ್ದಾರೆ. ವಾಹನ ಚಲಿಸುವಾಗ ಮೊಬೈಲ್ ಪೋನ್ ಬಳಸ ಬೇಡಿ, ಜೀವ ಅಮೂಲ್ಯವಾದುದು. ಒಬ್ಬರನ್ನೂ ನಂಬಿ ಹತ್ತಾರು ಜನ ಬದುಕು ನಡೆಸುವರು. ಆದ್ದರಿಂದ ನಿಮ್ಮ ಸುರಕ್ಷತೆ ಇತರರ ಸುರಕ್ಷತೆಯೇ ಅವಕಾಶವಾಗಲಿ. ಪ್ರತಿಯೊಬ್ಬರು ಎಡ ಬದಿಯಲ್ಲೇ ಚಲಿಸುವ ಮೂಲಕ ಮತ್ತು ಶಾಲಾ - ಕಾಲೇಜುಗಳ ಬಳಿ ನಿಧಾನವಾಗಿ ಚಲಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸಂರಕ್ಷಿಸುವ ಹೊಣೆಗಾರಿಕೆ ವಾಹನ ಚಾಲಕರ ಮೇಲಿದೆ ಎಂದರು.ಹೆಲ್ಮೆಟ್ , ಸೀಟ್ ಬೆಲ್ಟ್ ತಪ್ಪದೇ ಧರಿಸಿ ನಂತರ ಚಲಿಸಿ, ಅಪಘಾತ ಸಂಭವಿಸಿದಾಗ ಜೀವರಕ್ಷಣೆಗೆ ಗಮನ ಹರಿಸಿ ವಾಹನ ಚಾಲನೆಯಲ್ಲಿ ಅಂತರವಿರಲಿ, ಅವಸರ ಅಪಾಯ ತಂದೊಡ್ಡುತ್ತದೆ. ರಸ್ತೆ ಉಬ್ಬುಗಳನ್ನು ಗಮನಿಸಿ ನಿಧಾನವಾಗಿ ಚಲಿಸಿ, ಪ್ರಜ್ವಲಿಸುವ ಹೆಡ್ ಲೈಟ್ ಬಳಸಬೇಡಿ ಎಂದು ಕರೆಯಿತ್ತರು.
ಜಾಥಾದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅಮರನಾಥ್, ಎಆರ್‌ಟಿಒ ವೀರಣ್ಣ, ಇನ್ಸಪೆಕ್ಟರ್ ರಂಗನಾಥ್, ಬಸ್ ಮಾಲೀಕರಾದ ಮಂಜುನಾಥ್, ಸಂಘದ ಅಧ್ಯಕ್ಷ ರಂಗನಾಥ್, ಗೌತಮ ಬುದ್ಧ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಶ್ರೀನಿವಾಸ್, ವೇದಮೂರ್ತಿ, ಮಲ್ಲಿಕಾರ್ಜುನ್, ರವೀಶ್, ರಾಜ್ ಕುಮಾರ್ ಹಾಗೂ ಶಾಲಾ -ಕಾಲೇಜು ಮಕ್ಕಳು ಜಾಥಾದಲ್ಲಿ ಭಾಗವಹಿಸಿದ್ದರು.