ಸ್ವಾತಂತ್ರ‍್ಯ ಹೋರಾಟಗಾರರ ಮೌಲ್ಯಗಳನ್ನು ಅನುಸರಿಸಿ-ಡಾ. ನರೇಂದ್ರ

KannadaprabhaNewsNetwork |  
Published : Nov 17, 2025, 01:30 AM IST
ಮ | Kannada Prabha

ಸಾರಾಂಶ

ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಮೌಲ್ಯ ಹಾಗೂ ತತ್ವಗಳನ್ನು ದೈನಂದಿನ ಜೀವನದಲ್ಲಿ ಅನುಸರಿಸುವುದು ಎಂದರೆ ಅವರ ಜೀವನ, ಅಳವಡಿಸಿಕೊಂಡಂತೆ ಅವರ ಅನ್ವಯಿಸುವುದು ದೇಶದ ಪ್ರಾಯೋಗಿಕ ಮಾರ್ಗಗಳಲ್ಲಿ ಒಂದಾಗಿದೆ ಎಂದು ಕರ್ನಾಟಕ ಲೋಕ ಸೇವಾ ಸದಸ್ಯರಾದ ಡಾ. ನರೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಮೌಲ್ಯ ಹಾಗೂ ತತ್ವಗಳನ್ನು ದೈನಂದಿನ ಜೀವನದಲ್ಲಿ ಅನುಸರಿಸುವುದು ಎಂದರೆ ಅವರ ಜೀವನ, ಅಳವಡಿಸಿಕೊಂಡಂತೆ ಅವರ ಅನ್ವಯಿಸುವುದು ದೇಶದ ಪ್ರಾಯೋಗಿಕ ಮಾರ್ಗಗಳಲ್ಲಿ ಒಂದಾಗಿದೆ ಎಂದು ಕರ್ನಾಟಕ ಲೋಕ ಸೇವಾ ಸದಸ್ಯರಾದ ಡಾ. ನರೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು. ಭಾನುವಾರ ಪಟ್ಟಣದ ಶಿವಪುರ ಬಡಾವಣೆಯಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಪ್ರಕಾಶ ಮನ್ನಂಗಿ ರಚಿಸಿದ ನಮ್ಮೂರ ರತ್ನಗಳು ಹಾಗೂ ಗುಬ್ಬಿಚಟ್ಟು ಕಥಾ ಸಂಕಲನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಮಹಾತ್ಮ ಗಾಂಧಿ ಅವರಿಂದ ಸತ್ಯದ ಪ್ರಯೋಗ, ನ್ಯಾಯ, ಸಮಾನತೆ, ತಾರ್ಕಿಕ ಚಿಂತನೆಯಲ್ಲಿ ಭಗತ್ ಸಿಂಗ್, ಶಿಸ್ತು ಮತ್ತು ಧೈರ‍್ಯಕ್ಕೆ ಸುಭಾಸ್ ಚಂದ್ರಬೋಸ್, ಏಕತೆ ಮತ್ತು ರಾಷ್ಟ್ರ ನಿರ‍್ಮಾಣ ಸರ್ದಾರ್ ಪಟೇಲ್ ಇನ್ನಿತರರು ತಮ್ಮದೇ ಸಿದ್ಧಾಂತಗಳನ್ನು ದೇಶದ ಜನರಿಗೆ ನೀಡಿದ್ದು ಇಂತಹ ಬದ್ಧತೆಯನ್ನು ಇಟ್ಟುಕೊಂಡು ಬದುಕಿದ ಉದಾಹರಣೆಗಳು ನಮಗೆ ಸಿಗಲಿವೆ, ಅಂತೆಯೇ ಮಹದೇವ ಮೈಲಾರರ ತ್ಯಾಗ ಬಲಿದಾನವನ್ನು ಕೂಡ ಪ್ರತಿಯೊಬ್ಬ ಭಾರತೀಯರೂ ಸ್ಮರಿಸಬೇಕು ಎಂದರು.

ನಮ್ಮೂರ ರತ್ನಗಳು ಕೃತಿ ಕುರಿತು ಮಾತನಾಡಿದ ಮಾಲತೇಶ ಚಳಗೇರಿ, ಮೈಲಾರ ಮಹದೇವಪ್ಪನವರು ಹಾಗೂ ಮೈಲಾರ ಸಿದ್ದಮ್ಮನವರ ತ್ಯಾಗ, ಸ್ತ್ರೀ ಸಬಲೀಕರಣ ಕುರಿತು, ಮಹದೇವ ಬಣಕಾರರ ಸಾಧನೆ ಕುರಿತು ಕ್ಷಕಿರಣ ಬೀರಿದರು. ಲಿಂಗರಾಜ ಸೊಟ್ಟಪ್ಪನವರ ಕತಾ ಸಂಕಲನದ ಶೈಲಿ, ಸರಳತೆಯನ್ನು ಉದಾಹರಣೆಗಳೊಂದಿಗೆ ವಿವರಿಸಿದರಲ್ಲದೇ ಇದೊಂದು ಶಿಕ್ಷಕರು ಹಾಗೂ ಮಕ್ಕಳು ಓದಲೇಬೇಕಾದ ಕೃತಿ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಅಧ್ಯಕ್ಷ ಬಸವರಾಜ ಜಗಾಪೂರ ಮಾತನಾಡಿ, ಶಿಕ್ಷಕರು ಸಾಹಿತ್ಯದ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ನಮ್ಮೂರ ರತ್ನಗಳು ಕೃತಿ ಪ್ರಕಟಿಸಿದ ದಾನಿಗಳಾದ ಶಿವಾನಂದ ಬೆನ್ನೂರ ಪತ್ನಿ ಪೂರ್ಣಿಮಾ ಇದ್ದರು. ವೇದಿಕೆಯಲ್ಲಿ ಕೃತಿಕಾರರಾದ ಪ್ರಕಾಶ ಮನ್ನಂಗಿ ಚಿತ್ರ ಬಿಡಿಸಿದ ಪರಮೇಶ್ವರಪ್ಪ ಹುಲ್ಮನಿ, ಲಿಂಗರಾಜ, ಆಕಾಶ ಮತ್ತು ಗುತ್ತಿಗೆದಾರರಾದ ಬಸವರಾಜ ವರೂರ ಇವರನ್ನು ಸನ್ಮಾನಿಸಲಾಯಿತು. ಜಮೀರ ರಿತ್ತಿ ಸ್ವಾಗತಿಸಿದರು. ಮಹದೇವ ಕರಿಯಣ್ಣನವರ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ