ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಬಾಗೂರು ಹೋಬಳಿಯ ಅಣತಿ ಪಂಚಾಯತಿ ಮುದ್ಲಾಪುರ ಗ್ರಾಮದಲ್ಲಿ ಜೆಡಿಎಸ್ ನ ಹಲವು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು.ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದ ಜೆಡಿಎಸ್ ನಾಯಕರಾದ ಶೇಖರ್, ಬಸವರಾಜು, ಕಲ್ಲೇಗೌಡ, ಮಲ್ಲೇಶ್, ನಂಜಪ್ಪ, ನಿಂಗರಾಜು ಸೇರಿದಂತೆ ಅನೇಕ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಧೋರಣೆ ಮತ್ತು ಜನಸೇವೆಯ ನಂಬಿಕೆಯೊಂದಿಗೆ ಪಕ್ಷ ಸೇರ್ಪಡೆಯಾಗಿದ್ದಾರೆ.ಮಾಜಿ ಶಾಸಕ ಎಂ. ಎ. ಗೋಪಾಲಸ್ವಾಮಿ ಮಾತನಾಡಿ, ಮುದ್ಲಾಪುರ ಗ್ರಾಮದ ಜನತೆಗೂ, ಬಾಗೂರು ಹೋಬಳಿಯ ಸಾರ್ವಜನಿಕರಿಗೂ ಈ ಸೇರ್ಪಡೆ ಹೊಸ ಉತ್ಸಾಹವನ್ನು ತಂದಿದ್ದು, ಸಂಘಟನಾ ಬಲ ಹೆಚ್ಚುವ ದಿಸೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಜನಕೇಂದ್ರೀಕೃತ ಸೇವೆ, ಅಭಿವೃದ್ಧಿ ಮತ್ತು ಸಮಾನತೆಯ ಹಾದಿಯಲ್ಲಿ ಪಕ್ಷದ ಬಲ ಮತ್ತಷ್ಟು ವಿಸ್ತರಿಸುವ ಕಾರ್ಯಕ್ಕೆ ಇದು ಪ್ರೇರಣೆ ನೀಡಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು, ಜನರ ಸೇವೆಯನ್ನು ನೋಡಿ ಇಂದು ಪಕ್ಷ ಸೇರ್ಪಡೆಯಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಾರೆ, ತಾಲೂಕಿನಲ್ಲಿ ಜೆಡಿಎಸ್ ಪಕ್ಷದವರ ಕಿರುಕುಳದಿಂದ ಕಾರ್ಯಕರ್ತರು ನೊಂದು ಪಕ್ಷದ ತೊರೆಯುತ್ತಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಮಾಜಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಣತಿ ಆನಂದ್, ಶೇಖರ್, ಬಸವರಾಜು, ಕಲ್ಲೇಗೌಡ, ಮಲ್ಲೇಶ್, ನಂಜಪ್ಪ, ನಿಂಗರಾಜು ಮತ್ತಿತರಿದ್ದರು.
ಕಾಂಗ್ರೆಸ್ ಸೇರಿದ ಜೆಡಿಎಸ್ ಕಾರ್ಯಕರ್ತರು
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಬಾಗೂರು ಹೋಬಳಿಯ ಅಣತಿ ಪಂಚಾಯತಿ ಮುದ್ಲಾಪುರ ಗ್ರಾಮದಲ್ಲಿ ಜೆಡಿಎಸ್ ನ ಹಲವು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದ ಜೆಡಿಎಸ್ ನಾಯಕರಾದ ಶೇಖರ್, ಬಸವರಾಜು, ಕಲ್ಲೇಗೌಡ, ಮಲ್ಲೇಶ್, ನಂಜಪ್ಪ, ನಿಂಗರಾಜು ಸೇರಿದಂತೆ ಅನೇಕ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಧೋರಣೆ ಮತ್ತು ಜನಸೇವೆಯ ನಂಬಿಕೆಯೊಂದಿಗೆ ಪಕ್ಷ ಸೇರ್ಪಡೆಯಾಗಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.