ಹಿರಿಯೂರು: ಶಾಂತಿ ಹಾಗೂ ಸತ್ಯದ ಮಾರ್ಗದಿಂದ ಗಾಂಧೀಜಿಯವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಗಾಂಧೀಜಿಯವರ ಬದುಕೇ ಒಂದು ಸಂದೇಶವಿದ್ದಂತೆ. ಅವರು ಹಾಕಿಕೊಟ್ಟ ಮಾರ್ಗದಿಂದ ದೇಶದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆ. ದೇಶದಲ್ಲಿ ಹಸಿರು ಕ್ರಾಂತಿಯ ಬಗ್ಗೆ ಜಾಗೃತಿ ಮೂಡಿಸಿ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಮುನ್ನುಡಿ ಬರೆದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಆದರ್ಶಗಳ ಪಾಲನೆಯಾಗಬೇಕು. ಈ ಇಬ್ಬರು ಮಹನೀಯರ ಆದರ್ಶ ಪಾಲನೆ ಮಾಡುವ ಜೊತೆಗೆ ಶಾಂತಿ ಮತ್ತು ಸತ್ಯದ ಮಾರ್ಗದಲ್ಲಿ ಎಲ್ಲರೂ ನಡೆಯುವ ಪ್ರತಿಜ್ಞೆ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಖಾದಿ ರಮೇಶ್, ಈರಲಿಂಗೇಗೌಡ, ನಗರಸಭೆ ಅಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಮತಾ, ಎಂ.ಡಿ.ಸಣ್ಣಪ್ಪ, ಸದಸ್ಯರಾದ ವಿಠ್ಠಲ್ ಪಾಂಡುರಂಗ, ಬಿ.ಎನ್.ಪ್ರಕಾಶ್, ಜಗದೀಶ್ ಅಂಬಿಕಾ ಆರಾಧ್ಯ, ಮುಖಂಡರಾದ ಪಿಟ್ಲಾಲಿ ರವಿ, ಶಿವಣ್ಣ, ಚಂದ್ರನಾಯ್ಕ, ಜ್ಞಾನೇಶ್, ಕಬಡ್ಡಿ ರವಿ ಮುಂತಾದವರು ಹಾಜರಿದ್ದರು.