ಕನ್ನಡಪ್ರಭ ವಾರ್ತೆ ಹಾಸನ
ಕಾರ್ಯಕ್ರಮದ ಅಂಗವಾಗಿ ನೂರಾರು ಜನರಿಗೆ ಅನ್ನದಾಸೋಹ ಹಾಗೂ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಇದೇ ವೇಳೆ ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿಗಳು ಮಾತನಾಡಿ, ಅನ್ನದಾಸೋಹ, ಜ್ಞಾನದಾಸೋಹ ಮತ್ತು ಭಕ್ತಿ ದಾಸೋಹ ಎಂಬ ತ್ರಿವಿಧ ದಾಸೋಹದ ತತ್ವಗಳು ಸಾಮಾಜಿಕ ಸಮಾನತೆ, ಕಾಯಕದ ಮಹತ್ವ ಮತ್ತು ನಿಸ್ವಾರ್ಥ ಸೇವೆಯನ್ನು ಸಾರುತ್ತವೆ ಎಂದರು. “ಕಾಯಕವೇ ಕೈಲಾಸ, ದಾಸೋಹವೇ ಮುಕ್ತಿಯ ದಾರಿ” ಎಂಬ ಶರಣರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಇಂತಹ ಪುಣ್ಯಸ್ಮರಣೆಗಳು ಸಾರ್ಥಕವಾಗುತ್ತವೆ ಎಂದರು.
ಈ ದಿನವನ್ನು ಸ್ವಾಮೀಜಿಯವರ ಸೇವೆಯನ್ನು ಸ್ಮರಿಸಲು ಆಚರಿಸಲಾಗುತ್ತದೆ ಮತ್ತು ಕಾಯಕದೊಂದಿಗೆ ದಾಸೋಹದ ಪವಿತ್ರ ತತ್ವವನ್ನು ಜನತೆಗೆ ತಿಳಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದರು. ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ದಿನವನ್ನು ಸ್ವಾಮೀಜಿಯವರ ಅಪೂರ್ವ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಸೇವೆಯನ್ನು ಸ್ಮರಿಸುವ ದಿನವಾಗಿದೆ.ತ್ರಿವಿಧ ದಾಸೋಹ ಎಂದರೆ, ತನು, ಮನ, ಧನಗಳನ್ನು ಗುರು-ಲಿಂಗ-ಜಂಗಮಕ್ಕೆ ಅರ್ಪಿಸುವುದೇ ತ್ರಿವಿಧ ದಾಸೋಹ. ಬಡವರಿಗೆ, ಅನಾಥರಿಗೆ, ವಿದ್ಯಾರ್ಥಿಗಳಿಗೆ ನಿರಂತರ ಅನ್ನದಾನ ಮಾಡುವುದು. ಜ್ಞಾನ ದಾಸೋಹ: ಜ್ಞಾನದಾಸೋಹದ ಮೂಲಕ ಅರಿವನ್ನು ಹರಡುವುದು.
ವೀರಶೈವ ಲಿಂಗಾಯತ ಮಹಾಸಭಾ ಮುಖಂಡ ಪ್ರಶಾಂತ್ ಕಲ್ಲೂರು ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ದಾಸೋಹ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಮಠದ ಸ್ವಾಮೀಜಿಗಳಾದ ವಿಜಯಕುಮಾರ ಸ್ವಾಮೀಜಿ, ಕಲ್ಯಾಣ ಸ್ವಾಮೀಜಿ, ಶ್ರೀ ಸಂಗಮೇಶ್ವರ ಸ್ವಾಮೀಜಿ, ಮಹಂತ ಸ್ವಾಮೀಜಿ, ಬಸವರಾಜೇಂದ್ರ ಸ್ವಾಮೀಜಿ, ಜಯದೇವ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಜಯದೇವಿ ತಾಯಿ, ಚಿನ್ಮಯಿ ಮಾತಾಜಿ, ಆಲೂರು-ಸಕಲೇಶಪುರ ತಾಲೂಕು ಅಧ್ಯಕ್ಷ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಕಟ್ಟಾಯ ಶಿವಕುಮಾರ್, ಕಂಚಮಾರನಹಳ್ಳಿ ಕಾಂತರಾಜ್, ಎಸ್.ಎಸ್. ಪ್ರಸನ್ನ ಧರ್ಮ, ರೇವಣ್ಣ, ತಮ್ಮಯ್ಯ, ಯು.ಎಸ್. ಬಸವರಾಜು, ವಿಜಯಣ್ಣ, ತೇಜುಮೂರ್ತಿ, ಆರ್.ಬಿ. ಸುರೇಶ್, ಎಂ.ಎಸ್. ಮಹೇಶ್, ಪಂಚಾಕ್ಷರಿ, ಎಂ.ಎನ್. ಕುಮಾರಸ್ವಾಮಿ, ಅವಿನಾಶ್, ದೇವರಾಜು, ಅಜಿತ್, ಕಟ್ಟೆ ಗದ್ದೆ ನಾಗರಾಜ್, ದೇವರಾಜ್, ಅಪ್ಪಣ್ಣ ಗೌಡ, ಎಂ.ಬಿ. ವಿಶ್ವನಾಥ್, ಪುಷ್ಪ ಕೆಂಚಪ್ಪ, ಮಹಂತೇಶ್, ಸಂಪತ್, ಯೋಗನಂದ್, ತಿರ್ಥೇಶ್, ಹರೀಶ್, ಶಿವಕುಮಾರ್ ಇತರರು ಉಪಸ್ಥಿತರಿದ್ದರು.