ನೋಡುಗರ ಬಾಯಲ್ಲಿ ನೀರು ತರಿಸಿದ ಫುಡ್ ಫೆಸ್ಟ್

KannadaprabhaNewsNetwork |  
Published : Dec 30, 2025, 02:15 AM IST
29ಡಿಡಬ್ಲೂಡಿ6 | Kannada Prabha

ಸಾರಾಂಶ

ಧಾರವಾಡ ತಪೋವನ ಬಳಿ ಇರುವ ಕ್ಲಾಸಿಕ್ ಇಂಟರ್‌ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ಫುಡ್‌ ಫೆಸ್ಟ್‌ನಲ್ಲಿ ಕಂಡು ಬಂದ ದೃಶ್ಯ. ಎರಡು ದಿನಗಳಿಂದ ವಿವಿಧ ಕಾರ್ಯಕ್ರಮ ಆಯೋಜಿಸಿತ್ತು. ಮೊದಲ ದಿನ ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನ ನಡೆಸಿದರೆ, ಎರಡನೇ ದಿನ ಫುಡ್‌ ಫೆಸ್ಟ್ ನಡೆಸುವ ಮೂಲಕ ಮಕ್ಕಳಲ್ಲಿ ಹಣಕಾಸಿನ ಜ್ಞಾನದ ಜತೆಗೆ ಆಹಾರದ ಮಹತ್ವವನ್ನೂ ತಿಳಿಸುವ ಪ್ರಯತ್ನ ಮಾಡಿತು.

ಧಾರವಾಡ:

ಎತ್ತ ನೋಡಿದರತ್ತ ಬಾಯಲ್ಲಿ ನೀರೊರೆಸುವ ಖಾದ್ಯಗಳು, ಚೈನೀಸ್, ಪಂಜಾಬಿ, ರಾಜಸ್ಥಾನಿ ಶೈಲಿ ಭಕ್ಷ್ಯಗಳ ಜತೆಗೆ ಭಾರತೀಯ ಸಂಸ್ಕೃತಿಯ ರೊಟ್ಟಿ, ಚಪಾತಿ, ಪಲಾವು ಸೇರಿದಂತೆ ವಿವಿಧ ತರಹದ ಪಲ್ಯ ನೋಡುಗರ ಬಾಯಲ್ಲಿ ನೀರು ತರಿಸಿದವು.

ಇದು ತಪೋವನ ಬಳಿ ಇರುವ ಕ್ಲಾಸಿಕ್ ಇಂಟರ್‌ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ಫುಡ್‌ ಫೆಸ್ಟ್‌ನಲ್ಲಿ ಕಂಡು ಬಂದ ದೃಶ್ಯ. ಎರಡು ದಿನಗಳಿಂದ ವಿವಿಧ ಕಾರ್ಯಕ್ರಮ ಆಯೋಜಿಸಿತ್ತು. ಮೊದಲ ದಿನ ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನ ನಡೆಸಿದರೆ, ಎರಡನೇ ದಿನ ಫುಡ್‌ ಫೆಸ್ಟ್ ನಡೆಸುವ ಮೂಲಕ ಮಕ್ಕಳಲ್ಲಿ ಹಣಕಾಸಿನ ಜ್ಞಾನದ ಜತೆಗೆ ಆಹಾರದ ಮಹತ್ವವನ್ನೂ ತಿಳಿಸುವ ಪ್ರಯತ್ನ ಮಾಡಿತು. ಫುಡ್‌ ಫೆಸ್ಟ್‌ನಲ್ಲಿ ಮಕ್ಕಳು ಬಗೆ ಬಗೆಯ ಖಾದ್ಯ ಸಿದ್ಧಪಡಿಸಿಕೊಂಡು ಬಂದಿದ್ದರು. ಮಕ್ಕಳಿಗೆ ಅವರ ತಾಯಂದಿರು ಕೂಡ ನೆರವಾಗಿದ್ದರು. ಗೋಬಿ ಮಂಚೂರಿ, ಪಾನಿಪುರಿ, ಇಟಾಲಿಯನ್ ಫುಡ್, ಸಿಹಿ ಖಾದ್ಯ ಸೇರಿದಂತೆ ಇತರ ಆಹಾರದ ಜತೆಗೆ ನಮ್ಮ ಉತ್ತರ ಕರ್ನಾಟಕದ ಖಡಕ್ ಜೋಳದ ರೊಟ್ಟಿ, ಎಣಗಾಯಿ ಪಲ್ಯ, ಮಸಾಲಾ ರೈಸ್, ಪಲಾವು ಸೇರಿದಂತೆ ಇತ್ಯಾದಿ ಖಾದ್ಯಗಳು ಬಾಯಿ ಚಪ್ಪರಿಸಿ ತಿನ್ನುವಂತೆ ಮಾಡಿದವು.ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಪಾಟೀಲ ಸೇರಿದಂತೆ ಇತರ ಗಣ್ಯರು ಫುಡ್ ಫೆಸ್ಟ್ ಉದ್ಘಾಟಿಸಿ, ಬಗೆ ಬಗೆಯ ಖಾದ್ಯಗಳ ರುಚಿ ಸವಿದರು. ಶಾಲೆಯ ಪ್ರಾಚಾರ್ಯ ಮನೋಹರ ಕೆಂಚರಾವುತ, ರೇಣುಕಾ ಉಪ್ಪಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಭೂಮಿ ಒತ್ತುವರಿಗೆ ಅವಕಾಶ ನೀಡಲ್ಲ: ಡಿಸಿಎಂ
ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ