ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ ಪ್ರಭಾತನಗರ ಬಡಾವಣೆ ಜೈನಮಂದಿರದ ಸಭಾಭವನದಲ್ಲಿ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಮಂಡಳ ಹಮ್ಮಿಕೊಂಡಿದ್ದ ಫುಡ್ ಫೆಸ್ಟಿವಲ್ ನಲ್ಲಿ 25 ಗೃಹಿಣಿಯರು 26 ವಿವಿಧ ರೀತಿಯ ತಿನಿಸುಗಳನ್ನು ತಯಾರಿಸಿಕೊಂಡು ಭಾಗಿಯಾಗಿದ್ದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ ಪ್ರಭಾತನಗರ ಬಡಾವಣೆ ಜೈನಮಂದಿರದ ಸಭಾಭವನದಲ್ಲಿ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಮಂಡಳ ಹಮ್ಮಿಕೊಂಡಿದ್ದ ಫುಡ್ ಫೆಸ್ಟಿವಲ್ ನಲ್ಲಿ 25 ಗೃಹಿಣಿಯರು 26 ವಿವಿಧ ರೀತಿಯ ತಿನಿಸುಗಳನ್ನು ತಯಾರಿಸಿಕೊಂಡು ಭಾಗಿಯಾಗಿದ್ದರು. ಬದನೆಕಾಯಿ ಬಜ್ಜಿ, ಪಾನಿಪೂರಿ, ಶೇವಪೂರಿ, ತಾಲಿಪಟ್ಟಿ, ಸಮೋಸಾ, ಪಿಜ್ಜಾ, ಬರ್ಗರ್, ಗರಿವಡೆ, ಗಾರಿಗೆ, ಮತ್ತು ಸ್ಯಾಂಡ್ ವೀಚ್, ಮಂಗಳೂರು ಬನ್ಸ್, ಜಾಮೂನು, ದಹಿಪುರಿ, ಮೈಸೂರು ಬಜ್ಜಿ, ಗಿರ್ಮಿಟ್, ಕಚೋರಿ ಚಾಟ್, ಬೇಲ್, ಹಲ್ವಾ, ಫ್ರೂಟ್ಸ್ ಸಲಾಡ್, ಮೊಸರು ಅವಲಕ್ಕಿ, ಜೋಳದ ವಡೆ, ಸಜ್ಜಿ ಹೋಳಗಿ, ಸಾಬು ವಡಾ, ಚಿಗಳಿ, ದಾಬೇಲಿ, ದಹಿಪೂರಿ, ಡೋಕುಳಾ, ಮೊಮೋಸ್, ಹರಾಬರ ಕಬಾಬ್, ಪಾಲಕ್ ಪತ್ತಿ ಚಾಟ್, ಸೋಡಾ, ಬಟಾಣಿ ಪರೋಟಾ, ಮಸಾಲೆ ಪಾಪಡ, ಕಟೋರಿ ಚಾಟ್ ಸಹಿತ ಮಾಮುಸ್, ಕಾಯಿಪಲ್ಯ, ಫಿಂಗರ್ ಚಿಪ್ಸ್, ಚಹಾ, ಹಾಲು, ಜ್ಯೂಸ್ ಸಹಿತ ಮಹಾರಾಷ್ಟ್ರದ ವಿಶೇಷ ಪಾಪಡಿ ಚಾಟ್ ಗಮನ ಸೆಳೆಯಿತು. ಮಂಡಳಿಯುಲ್ಲಿ 46 ಸದಸ್ಯರಿದ್ದು, ಸತತ ಎರಡು ವರ್ಷದಿಂದ ಸಾಮಾಜಿಕ ಸೇವೆ, ಮನರಂಜನಾ ಕಾರ್ಯಕ್ರಮ ನೀಡುತ್ತಿದೆ. ಈ ವರ್ಷ ಆಹಾರ ಮೇಳ ಹಮ್ಮಿಕೊಂಡಿದ್ದೇವೆ. ಯಾವುದೇ ವ್ಯವಹಾರಿಕ ದೃಷ್ಟಿಯಿಂದ ಮಾಡಿಲ್ಲ. ನಗರದ ಜನತೆಗೆ ಹೊಸದನ್ನು ಕೊಡಬೇಕೆಂಬ ಉದ್ದೇಶದಿಂದ 25 ಬಗೆಯ ಖಾರದ ತನಿಸು, 4 ಬಗೆಯ ಸಿಹಿ ತಿಂಡಿ ಮನೆಯಿಂದ ಮಾಡಿಕೊಂಡು ಬಂದು ಎಲ್ಲರಿಗೂ ರುಚಿ ತೋರಿಸಿದ್ದೇವೆ. ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು ನಮಗೆ ಆತ್ಮಸ್ಥೆರ್ಯ ಹೆಚ್ಚಾಗಿದೆ.
-ಜ್ಯೋತಿ ಪಾಟೀಲ, ಅಧ್ಯಕ್ಷೆ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಮಂಡಳ, ಜಮಖಂಡಿ.ಸ್ಪೇಷಲ್ ಫುಡ್ ಫೆಸ್ಟಿವಲ್ ನಲ್ಲಿ ವಿವಿಧ ರೀತಿ ತಿಂಡಿ-ತಿನಸುಗಳನ್ನು ಮಹಿಳೆಯರು ತಯಾರಿಸಿಕೊಂಡು ಮೇಳದಲ್ಲಿ ಮಾರಾಟ ಮಾಡುವ ಮೂಲಕ ಆರ್ಥಿಕ ಶಿಸ್ತು ಪಾಲನೆ ಮಾಡಿದ್ದಾರೆ. ಮೇಳದಲ್ಲಿ ಮಂಡಳದ ಎಲ್ಲ ಸದಸ್ಯರು ತಯಾರಿಸಿಕೊಂಡು ಬಂದಿದ್ದ ರುಚಿಯಾದ ತಿನಿಸುಗಳನ್ನು 400ಕ್ಕೂ ಅಧಿಕ ಮಹಿಳೆಯರು ಸವಿದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.