ಐದಾರು ಮಂದಿಯಿಂದ 2 ಕೋಟಿಗೂ ಅಧಿಕ ಹಣ ಪಡೆದು ಬಳಿಕ ಮತ್ತೊಬ್ಬರಿಗೆ ಮನೆ ಮಾರಾಟ ಮಾಡಿ ನಾಪತ್ತೆಯಾಗಿದ್ದ. ಈ ಸಂಬಂಧ ಈತನ ವಿರುದ್ಧ ಪಟ್ಟಣ ಮತ್ತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಹಲವು ಮಂದಿಯಿಂದ ಮನೆ ಮಾರುವುದಾಗಿ ಅಗ್ರಿಮೆಂಟ್ ಹಾಕಿಸಿಕೊಂಡು ಎರಡು ಕೋಟಿಗೂ ಹೆಚ್ಚು ಹಣವನ್ನು ಪಡೆದು ಕಳೆದ ಐದಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಬಂಧಿಸುವಲ್ಲಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.ಶರವಣ್ ಎಂಬಾತ ಬಂಧಿತ ಆರೋಪಿ. ಈತ ಕೊಳ್ಳೇಗಾಲದ ದಕ್ಷಿಣ ಬಡಾವಣೆಯಲ್ಲಿದ್ದ ಮನೆಯೊಂದನ್ನು ನಿಮಗೆ ಮಾರಾಟ ಮಾಡುತ್ತೇನೆ ಎಂದು ಮಾಂಬಳ್ಳಿ ನಾಗರಾಜು, ನಿವೃತ್ತ ಯೋಧ ವಿಶ್ವನಾಥ್, ಮಾರುಕಟ್ಟೆ ಕೆ.ಕೆ.ಮೂರ್ತಿ, ಶಿವಕುಮಾರ್ ಸೇರಿದಂತೆ ಹಲವರಿಂದ ಅಗ್ರಿಮೆಂಟ್ ಹಾಕಿಕೊಂಡು ಐದಾರು ಮಂದಿಯಿಂದ 2 ಕೋಟಿಗೂ ಅಧಿಕ ಹಣ ಪಡೆದು ಬಳಿಕ ಮತ್ತೊಬ್ಬರಿಗೆ ಮನೆ ಮಾರಾಟ ಮಾಡಿ ನಾಪತ್ತೆಯಾಗಿದ್ದ. ಈ ಸಂಬಂಧ ಈತನ ವಿರುದ್ಧ ಪಟ್ಟಣ ಮತ್ತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆದರೆ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆ ಪೊಲೀಸರಿಗೆ ಸವಾಲಾಗಿತ್ತು. ಬೆಂಗಳೂರಿನ ಜೆಪಿ ನಗರದಲ್ಲಿ ಮಳಿಗೆಯೊಂದನ್ನ ಮಾಡಿಗೆ ಪಡೆದು ವ್ಯಾಪಾರ ಮಾಡುತ್ತಿದ್ದನ್ನ ಗಮನಿಸಿದ ಮಾಜಿ ಸೈನಿಕರೊಬ್ಬರು ನೀಡಿದ ಸುಳಿವಿನ ಮೇರೆಗೆ ಗ್ರಾಮಾಂಟರ ಪೊಲೀಸರು ಬೆಂಗಳೂರಿನಲ್ಲಿ ಆರೋಪಿ ಬಂಧಿಸಿ ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.--- 19ಕೆಜಿಎಲ್88ಬಂಧಿತ ಆರೋಪಿ ಶರವಣ