ಡಿಗ್ರೂಪ್‌ ನೌಕರರಿಗೆ ಹೆಲ್ಪ್ ಸೊಸೈಟಿಯಿಂದ ದಿನಸಿ ಕಿಟ್ ವಿತರಣೆ

KannadaprabhaNewsNetwork |  
Published : Oct 20, 2023, 01:00 AM IST
ಫೋಟೋ 19ಪಿವಿಡಿ3ಪಾವಗಡ,ದಸರಾ ಹಬ್ಬದ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯ ಡಿ.ದರ್ಜೆಯ ನೌಕರರಿಗೆ ದಿನಸಿ ಕಿಟ್‌ ವಿತರಿಸಿ ಶುಭ ಹಾರೈಸಿದ ಹೆಲ್ಪ್‌ ಸೊಸೈಟಿಯ ಅಧ್ಯಕ್ಷ ಮಾನಂ ಶಶಿಕಿರಣ್‌   | Kannada Prabha

ಸಾರಾಂಶ

ದಸರಾ ಹಬ್ಬದ ಪ್ರಯುಕ್ತ ಪಾವಗಡದ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಡಿ ದರ್ಜೆ ನೌಕರರಿಗೆ ಅಧ್ಯಕ್ಷ ಮಾನಂ ಶಶಿಕಿರಣ್‌ ನೇತೃತ್ವದಲ್ಲಿ ಹೆಲ್ಪ್ ಸೊಸೈಟಿ ವತಿಯಿಂದ ದಿನಸಿ ಕಿಟ್ ವಿತರಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ ದಸರಾ ಹಬ್ಬದ ಪ್ರಯುಕ್ತ ಪಾವಗಡದ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಡಿ ದರ್ಜೆ ನೌಕರರಿಗೆ ಅಧ್ಯಕ್ಷ ಮಾನಂ ಶಶಿಕಿರಣ್‌ ನೇತೃತ್ವದಲ್ಲಿ ಹೆಲ್ಪ್ ಸೊಸೈಟಿ ವತಿಯಿಂದ ದಿನಸಿ ಕಿಟ್ ವಿತರಿಸಿದರು. ಬಳಿಕ ಹೆಲ್ಪ್‌ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್‌ ಮಾತನಾಡಿ, ಆಸ್ಪತ್ರೆ ಸ್ವಚ್ಚತೆ ಹಾಗೂ ಶುಚಿತ್ವ ಕಾಪಾಡುವಲ್ಲಿ ಆಸ್ಪತ್ರೆಯ ಸಿಬ್ಬಂದಿ ಪಾತ್ರ ಅತ್ಯಂತ ಪ್ರಮುಖವಾಗಿದೆ. ಆಸ್ಪತ್ರೆಯ ಪರಿಸರ ಹಾಗೂ ಗಿಡಮರಗಳ ಸಂರಕ್ಷಣೆಯಲ್ಲಿ ಹೆಚ್ಚು ಆಸಕ್ತಿವಹಿಸಿರುವುದು ಶ್ಲಾಘನೀಯ. ಈ ಹಿನ್ನಲೆಯಲ್ಲಿ ದಸರಾ ಹಬ್ಬದ ಶುಭಾಶಯ ಕೋರಿ, ದಿನಸಿ ಕಿಟ್‌ ವಿತರಿಸಲಾಗಿದೆ ಎಂದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾ. ಶಾಖೆಯ ಅಧ್ಯಕ್ಷ ಹಾಗೂ ಆಸ್ಪತ್ರೆಯ ನಿರ್ವಹಣಾಧಿಕಾರಿ ಡಾ. ಕಿರಣ್ ಮಾತನಾಡಿ, ಜನಪರ ಕಾಳಜಿ ಹಾಗೂ ಸಂಕಷ್ಟದಲ್ಲಿದ್ದವರ ನೆರವಿಗೆ ದಾವಿಸುವ ಮಾನಂ ಶಶಿಕಿರಣ್‌ ನೇತೃತ್ವದ ಹೆಲ್ಪ್‌ ಸೊಸೈಟಿ ಕಾರ್ಯ ಶ್ಲಾಘನೀಯ ಎಂದು ಅಭಿನಂದಿಸಿದರು. ಇದೇ ವೇಳೆ ರೋಟರಿ ಕ್ಲಬ್ ಅಧ್ಯಕ್ಷ ಸತ್ಯ ಲೋಕೇಶ್ ಮಾತನಾಡಿ, ಅಗತ್ಯವಿರುವವರಿಗೆ ಸಹಾಯ ಮಾಡುವಲ್ಲಿ ಹೆಲ್ಫ್ ಸೊಸೈಟಿ ಸದಾ ಮುಂಚೂಣಿಯಲಿದ್ದು, ನಿರಂತರವಾಗಿ ಹೀಗೆ ಮುಂದುವರಿಯಲಿ ಎಂದು ಹಾರೈಸಿದರು. ಸರ್ಕಾರಿ ಆಸ್ಪತ್ರೆಯ ಕೃಷ್ಣಪ್ಪ, ಹೆಲ್ಪ್‌ ಸೊಸೈಟಿಯ ಪದಾಧಿಕಾರಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಇದ್ದರು. ಫೋಟೋ 19ಪಿವಿಡಿ3 ಪಾವಗಡ ದಸರಾ ಹಬ್ಬದ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯ ಡಿ.ದರ್ಜೆಯ ನೌಕರರಿಗೆ ದಿನಸಿ ಕಿಟ್‌ ವಿತರಿಸಿ ಶುಭ ಹಾರೈಸಿದ ಹೆಲ್ಪ್‌ ಸೊಸೈಟಿಯ ಅಧ್ಯಕ್ಷ ಮಾನಂ ಶಶಿಕಿರಣ್‌

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’