ರಾಯಚೂರು: ಬೀದಿ ಬದಿ ವ್ಯಾಪಾರಿಗಳು, ಹೋಟೆಲ್, ರೆಸ್ಟೋರೆಂಟ್ ಮತ್ತು ಬೇಕರಿ ಸೇರಿದಂತೆ ಇತರೆಡೆ ತಪಾಸಣೆ ನಡೆಸಿದ ಅಧಿಕಾರಿಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿರ್ವಹಣೆ ಮಾಡದ 37 ಜನರಿಗೆ ನೋಟಿಸ್ ನೀಡಿ, 9 ಸಾವಿರ ರು. ದಂಡ ವಸೂಲಿ ಮಾಡಿದ್ದಾರೆ.
ನಂತರ ನ್ಯೂ ಅಮೃತ್ ಆಸ್ಪತ್ರೆ ಹತ್ತಿರ, ಸಿಯಾತಲಾಬ್ ಸೇರಿದಂತೆ ಇತರೆ ರೆಸ್ಟೋರೆಂಟ್, ಹೋಟೇಲ್, ಬೀದಿಬದಿ ಆಹಾರ ಮಾರಾಟಗಾರರು, ಬೇಕರಿ, ನೀರಿನ ಘಟಕಗಳು ಕ್ಯಾಟರಿಂಗ್ ಹಾಗೂ ಇತರೆ ಕಡೆ ತಪಾಸಣೆ ನಡೆಸಿ ಒಟ್ಟು 37 ನೋಟಿಸ್‌ಗಳನ್ನು ನೀಡುವ ಮೂಲಕ 9000 ರು.ದಂಡ ವಿಧಿಸಲಾಯಿತು.
ಇದೇ ವೇಳೆ ಸ್ಥಳೀಯ ಶ್ರೀ ಮಾ ಆಶಾಪುರಿ ಕನ್ವೆನ್ಷನ್ ಹಾಲ್‌ನಲ್ಲಿ ಆಹಾರ ಮಾರಾಟಗಾರರಿಗೆ ಆಹಾರ ಸುರಕ್ಷತೆ, ಸ್ವಚ್ಛತೆ, ಆಹಾರ ಕಲಬೆರಕೆ ಹಾಗೂ ಆಹಾರ ತಯಾರಿಕೆಯ ಬಗ್ಗೆ ಆಹಾರ ಉದ್ದಿಮೆದಾರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸಹ ನಡೆಸಲಾಯಿತು.ಈ ಸಂದರ್ಭದಲ್ಲಿ ಆಹಾರ ಸುರಕ್ಷತೆ ಅಧಿಕಾರಿ ಅಮೃತ ದುಬೆ, ವಿವಿಧ ವ್ಯಾಪಾರಿ ಸಂಘಟನೆಗಳ ಮರಡಿ ನರಸಯ್ಯ, ವಿಟ್ಟೋಬಣ್ಣ, ಜಗನ್ನಾಥ್ ರೆಡ್ಡಿ, ಮಹಮ್ಮದ್ ಆರಿಫ್ ಸೇರಿ ಸುಮಾರು 59 ಜನ ಆಹಾರ ವರ್ತಕರು ಇದ್ದರು.