ಕನ್ನಡಪ್ರಭ ವಾರ್ತೆ ಮೈಸೂರು
ತಮ್ಮ ಕಚೇರಿ ಸಭಾಂಗಣದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಆಹಾರ ಸುರಕ್ಷತಾ ಅಧಿಕಾರಿಗಳು ಮೈಸೂರು ನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಆರೋಗ್ಯ ಅಧಿಕಾರಿಗಳೊಂದಿಗೆ ತಪಾಸಣೆ ಸಂದರ್ಭದಲ್ಲಿ ಭಾಗಿಯಾಗಬೇಕು ಎಂದರು.
ಆಹಾರ ಸುರಕ್ಷತೆ ಕ್ರಮಗಳನ್ನು ಅನುಸರಿಸದಿದ್ದಲ್ಲಿ ಕೂಡಲೇ ನೋಟೀಸ್ ಜಾರಿಗೊಳಿಸಿ, ದಂಡ ವಿಧಿಸಿ ಸ್ಥಳೀಯ ಸಂಸ್ಥೆಗಳು ನೀಡುವ ಟ್ರೇಡ್ ಲೈಸೆನ್ಸ್ ಗಳನ್ನು ರದ್ದು ಮಾಡಲು ಶಿಫಾರಸ್ಸು ಮಾಡಿ. ಬೀದಿ ಬದಿ ಆಹಾರ ವ್ಯಾಪಾರ ಮಾಡುವವರು ಸೇರಿದಂತೆ ಸ್ಟಾರ್ ಹೋಟೆಲ್ ಗಳಲ್ಲಿ ಅನುಮಾನ ಬರುವ ಎಲ್ಲಾ ಕಡೆಗಳಲ್ಲೂ ತಪಾಸಣೆ ನಡೆಸಿ ಎಂದರು.ಪರವಾನಗಿ ಪಡೆದ ವೇಳೆ ಸರ್ಕಾರ ಸೂಚಿಸುವ ಎಲ್ಲಾ ನಿಯಮ ಪಾಲಿಸಬೇಕು. ಅನಾಹುತ ನಡೆದ ನಂತರ ಕ್ರಮಗಳ ಬಗ್ಗೆ ಚಿಂತಿಸುವ ಬದಲು ಮೊದಲೇ ಕಾರ್ಯಪ್ರವೃತ್ತರಾಗಿ, ವಿವಿಧ ಕಡೆ ಪರಿಶೀಲನೆ ನಡೆಸಿ ಪ್ರತಿ ದಿನ ಜಿಲ್ಲಾಡಳಿತಕ್ಕೆ ವರದಿ ನೀಡಿ ಎಂದರು.
ಸಭೆಯಲ್ಲಿ ಜಿಪಂ ಸಿಇಒ ಯುಕೇಶ್ ಕುಮಾರ್, ನಗರ ಪಾಲಿಕೆ ಉಪ ಆಯುಕ್ತ ಸೋಮಶೇಖರ್, ಆಹಾರ ಸುರಕ್ಷತಾ ಅಧಿಕಾರಿ ಡಾ. ರವೀಂದ್ರ, ಕಾಂತರಾಜು ಮೊದಲಾದವರು ಇದ್ದರು.ಇಂದು ವಿದ್ಯುತ್ ವ್ಯತ್ಯಯಮೈಸೂರು: ಸೆಸ್ಕ್ ವಿ.ವಿ. ಮೊಹಲ್ಲಾ ವಿಭಾಗ ವ್ಯಾಪ್ತಿಯ 66/11 ಕೆ.ವಿ ಸೌಥ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ 1ನೇ ತ್ರೈ ಮಾಸಿಕ ನಿರ್ವಹಣಾ ಕೆಲಸದ ನಿಮಿತ್ತ ಜೂ.20ರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಶ್ರೀರಾಂಪುರ 2ನೇ ಹಂತ, ರಮಾಬಾಯಿನಗರ, ಮಹದೇವಪುರ, ಜಯನಗರ 1 ರಿಂದ 20ನೇ ಕ್ರಾಸ್, ಪರಸಯ್ಯನಹುಂಡಿ, ಶಿವಪುರ, ಕುವೆಂಪುನಗರ ಕೆ ಬ್ಲಾಕ್, ಅಪೋಲೊ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶಗಳು, ಚಿಕ್ಕಹರದನಹಳ್ಳಿ, ಗೊರೂರು ಗ್ರಾಮ, ಕಳಲವಾಡಿ, ಕೋಟೆಹುಂಡಿ, ಯಡಹಳ್ಳಿ, ರಾಯನಕೆರೆ, ಸರಸ್ವತಿಪುರಂ 1ನೇ ಮುಖ್ಯರಸ್ತೆಯಿಂದ 6ನೇ ಮುಖ್ಯರಸ್ತೆ, ಭಾಗಶಃ ಕೆ.ಜಿ. ಕೊಪ್ಪಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳು.