ಸಿಹಿ ತಯಾರಿಕಾ 16 ಘಟಕಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ

KannadaprabhaNewsNetwork |  
Published : Sep 01, 2026, 04:30 AM ISTUpdated : Sep 01, 2026, 06:40 AM IST
sweet

ಸಾರಾಂಶ

ರಾಜ್ಯದ ವಿವಿಧೆಡೆಯ ಪ್ರಮುಖ ಸಿಹಿ ತಿನಿಸುಗಳ 16 ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿರುವ ಆಹಾರ ಸುರಕ್ಷತಾ ಅಧಿಕಾರಿಗಳು ಅನೈರ್ಮಲ್ಯ, ಅವಧಿ ಮೀರಿದ ಆಹಾರ ಪದಾರ್ಥ ಸಂಗ್ರಹ, ನಿಷೇಧಿತ ಕೃತಕ ಬಣ್ಣಗಳ ಬಳಕೆ ಸೇರಿದಂತೆ ವಿವಿಧ ಉಲ್ಲಂಘನೆಗಳ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ.

 ಬೆಂಗಳೂರು : ರಾಜ್ಯದ ವಿವಿಧೆಡೆಯ ಪ್ರಮುಖ ಸಿಹಿ ತಿನಿಸುಗಳ 16 ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿರುವ ಆಹಾರ ಸುರಕ್ಷತಾ ಅಧಿಕಾರಿಗಳು ಅನೈರ್ಮಲ್ಯ, ಅವಧಿ ಮೀರಿದ ಆಹಾರ ಪದಾರ್ಥ ಸಂಗ್ರಹ, ನಿಷೇಧಿತ ಕೃತಕ ಬಣ್ಣಗಳ ಬಳಕೆ ಸೇರಿದಂತೆ ವಿವಿಧ ಉಲ್ಲಂಘನೆಗಳ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ.

ಸಿಹಿತಿಂಡಿ ತಯಾರಿಕಾ ಘಟಕಗಳಲ್ಲಿ ತಪಾಸಣೆ

ಮಾಗಡಿ ರಸ್ತೆಯ ಬಿಕನೇರ್‌ ಸ್ವೀಟ್ಸ್‌ನಲ್ಲಿ ಅನೈರ್ಮಲ್ಯ, ಲೇಬಲಿಂಗ್‌ ಸಂಬಂಧಿತ ಗಂಭೀರ ಲೋಪಗಳ ಹಿನ್ನೆಲೆ ತಯಾರಿಕಾ ಘಟಕವನ್ನು ತಾತ್ಕಾಲಿಕವಾಗಿ ಮುಚ್ಚಿಸಲಾಗಿದೆ. ಸೋಮವಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಮೈಸೂರು ನಗರ ಪಾಲಿಕೆ, ದಕ್ಷಿಣ ಕನ್ನಡ, ಬೆಳಗಾವಿ, ಕಲಬುರಗಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಸಿಹಿತಿಂಡಿ ತಯಾರಿಕಾ ಘಟಕಗಳಲ್ಲಿ ತಪಾಸಣೆ ನಡೆಸಲಾಯಿತು.

ಈ ವೇಳೆ ಒಟ್ಟಾರೆ ಅನುಮಾಸ್ಪದವಾಗಿ ಕಂಡು ಬಂದ 5.99 ಲಕ್ಷ ರು. ಮೌಲ್ಯದ ಆಹಾರ ತಯಾರಿಕಾ ಉತ್ಪನ್ನ ಹಾಗೂ ಸಿಹಿ ಉತ್ಪನ್ನಗಳನ್ನು ವಶಕ್ಕೆ ಪಡೆಯಲಾಗಿದೆ. ಮಾದರಿಗಳನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಅನೈರ್ಮಲ್ಯ, ನಿಷೇಧಿತ ಬಣ್ಣಗಳ ಬಳಕೆ:

ಯಶವಂತಪುರದ ಆಶಾ ಸ್ವೀಟ್ಸ್‌, ಲಾಲ್‌ ಸ್ವೀಟ್ಸ್‌ಪ್ರೈ. ಲಿಮಿಟೆಡ್‌, ಕಲಬುರಗಿ ಮಹಾರಾಜ ಸ್ವೀಟ್ಸ್‌, ಮಂಗಳೂರು ಸ್ವಾಗತ್‌ ಸ್ವೀಟ್ಸ್‌, ಬೆಂಗಳೂರು ಮಿಠಾಯಿ ಫ್ಯಾಕ್ಟರಿ, ಹುಬ್ಬಳ್ಳಿಯ ತ್ರಿವೇಣಿ ಬೇಕರಿ, ಹುಬ್ಬಳ್ಳಿಯ ಮಿಟಾ ಭಾರತ್‌, ಬೆಳಗಾವಿಯ ಎ-1 ಪುರೋಹಿತ್‌, ಎ-1 ಕುಂದಾ, ಮೈಸೂರಿನ ವರ್ಲ್ಡ್‌ ಆಫ್‌ ಮೈಸೂರ್‌ ಪಾಕ್‌, ಬೆಂಗಳೂರಿನ ಇಂಡಿಯಾ ಸ್ವೀಟ್ಸ್, ವೆಂಕಟೇಶ್ವರ ಸ್ವೀಟ್ಸ್‌ ವಿವಿಧ ತಯಾರಿಕಾ ಘಟಕಗಳ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ ಲೇಬಲಿಂಗ್‌, ಎಫ್‌ಎಸ್‌ಎಸ್‌ಎಐ ನೋಂದಣಿ ಸಂಖ್ಯೆ, ಅಂತಿಮ ದಿನಾಂಕ ಇಲ್ಲದಂತಹ ಅಡುಗೆ ಎಣ್ಣೆ, ತಾಜಾ ಎಣ್ಣೆ, ಮೊಸರು, ಬೇಳೆಕಾಳುಗಳು, ಕಡಲೆ, ಜಿಲೇಬಿ, ಖೋವಾ, ಟೀ ಪೌಡರ್ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಲಾಗಿದೆ.

ದಾಳಿ ವೇಳೆ 5 ಲೀಟರ್ ಅವಧಿ ಮೀರಿದ ನಂದಿನಿ ಮೊಸರನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ, ಸರಿಯಾದ ಲೇಬಲಿಂಗ್ ಇಲ್ಲದ ಕಾರಣ 13 ದೊಡ್ಡ ಪ್ಯಾಕೆಟ್‌ಗಳು ಮತ್ತು 6 ಸಣ್ಣ ಪ್ಯಾಕೆಟ್‌ಗಳ ಚಾಕೊಲೇಟ್ ಡೆಕೊರೇಷನ್ ಉತ್ಪನ್ನ, 10 ಕೆ.ಜಿ. ಚಾಕೊಲೇಟ್ ಫ್ಲೇವರ್ ಹಾಗೂ 5 ಕೆ.ಜಿ. ರಸಗುಲ್ಲಾ ವಶಪಡಿಸಿಕೊಳ್ಳಲಾಗಿದೆ. ಬಾಳೆಹಣ್ಣು ಚಿಪ್ಸ್ ಹಾಗೂ ಚಕ್ಕುಲಿ ಮಸಾಲೆ ಸೇರಿದಂತೆ ಸುಮಾರು 60 ಕೆ.ಜಿ. ವಿವಿಧ ಆಹಾರ ಉತ್ಪನ್ನಗಳು ತಪ್ಪು ಬ್ರ್ಯಾಂಡಿಂಗ್ ಹೊಂದಿರುವುದು ಕಂಡುಬಂದಿದೆ.

ಈ ಉತ್ಪನ್ನಗಳ ಮೇಲೆ ತಯಾರಕರ ಹೆಸರು ಮತ್ತು ವಿಳಾಸ ಹಾಗೂ ಎಫ್‌ಎಸ್‌ಎಸ್‌ಎಐ ಪರವಾನಗಿ ಸಂಖ್ಯೆ ಸೇರಿದಂತೆ ಕಡ್ಡಾಯವಾಗಿ ನಮೂದಿಸಬೇಕಾದ ಮಾಹಿತಿ ನೀಡಿರಲಿಲ್ಲ. ಇದಲ್ಲದೆ, ತಪಾಸಣೆ ವೇಳೆ ಅಧಿಕಾರಿಗಳು ಈ ಕೆಳಗಿನ ಆಹಾರ ಪದಾರ್ಥಗಳನ್ನು ಸಹ ವಶಪಡಿಸಿಕೊಂಡಿದ್ದಾರೆ:

500ಕ್ಕೂ ಹೆಚ್ಚು ಕೆಜಿ ತಿನಿಸು ವಶ:

367 ಕೆ.ಜಿ. ತಿನ್ನಲು ಸಿದ್ಧವಾದ ಖಾರ ಪದಾರ್ಥಗಳು, 4 ಕೆ.ಜಿ. ಕೋಕೋ ಪೌಡರ್,

4.5 ಕೆ.ಜಿ. ಒಡೆದ ಕೋಕೋ ಬೀಜಗಳು, 6 ಕೆ.ಜಿ. ಖೋವಾ

196 ಕೆ.ಜಿ. ಸೋಂಪಿನ ಪುಡಿಸೇರಿದಂತೆ 5.99 ಲಕ್ಷ ರು.ಮೌಲ್ಯದ ಆಹಾರ ಪದಾರ್ಥ ವಶಕ್ಕೆ ಪಡೆಯಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಾಹುಲ್‌ ಗಾಂಧಿ ವಿರುದ್ಧ ಎಫ್‌ಐಆರ್‌; ಕಾಂಗ್ರೆಸ್‌ ಪ್ರತಿಭಟನೆ
ಇಳಕಲ್ಲ ಪೊಲೀಸ್ ಠಾಣೆಗೆ ಐಜಿಪಿ ಸಂದೀಪ್ ಪಾಟೀಲ್ ಭೇಟಿ