ನೆಲಮಂಗಲ: ರಾಜ್ಯದಲ್ಲಿ 50 ವರ್ಷ ಪೀಠಾಧ್ಯಕ್ಷರಾಗಿ ಸೇವೆ ಸಲ್ಲಿಸಿದ 57 ಶ್ರೀಗಳಿಗೆ ಗುರುವಂದನೆ ಸಲ್ಲಿಸುತ್ತಿರುವುದು 55 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಇದೇ ಮೊದಲು. ವಿಶ್ವ ದಾಖಲೆ ಸೇರಲಿರುವ ಮಠದ ಕಾರ್ಯಕ್ರಮಕ್ಕೆ ನಾವೆಲ್ಲಾ ಸಾಕ್ಷಿಯಾಗುತ್ತೇವೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ನನಗೆ ರಾಜಕೀಯ ಮುಳ್ಳಿನ ಹಾದಿಯಾದಾಗ ಸಿದ್ದಗಂಗಾ ಶ್ರೀಗಳು, ಆದಿಚುಂಚನಗಿರಿ ಮಠದ ಶ್ರೀಗಳು ಧೈರ್ಯ ತುಂಬಿದ್ದಾರೆ. ಮಠ ಮಾನ್ಯಗಳ ಸ್ವತ್ತನ್ನು ತಿಂದವರು ಯಾರೂ ಉದ್ದಾರ ಆಗುವುದಿಲ್ಲ. ಸಣ್ಣ ಮಠಗಳು ದೊಡ್ಡಮಠಗಳಾಗಿವೆ. ಪ್ರಧಾನ ಮಂತ್ರಿ ಮೋದಿಯವರು ಏಕರೂಪ ಶಿಕ್ಷಣ ಜಾರಿಗೆ ತಂದಿದ್ದಾರೆ. ಎಲ್ಲರೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಆಗುವುದಿಲ್ಲ. ನಾಡಿನ ಪೂಜ್ಯರು ಶಿಕ್ಷಣಕ್ಕೆ ಎಷ್ಟು ಪ್ರಚಾರ ನೀಡುತ್ತಾರೋ ಅಷ್ಟೇ ಧರ್ಮವನ್ನು ಉಳಿಸುವ ಕೆಲಸಕ್ಕೆ ಮಾಡಬೇಕು ಎಂದರು.
ಶ್ರೀಮಠಕ್ಕೆ ಮೆಡಿಕಲ್ ಕಾಲೇಜ:ನೆಲಮಂಗಲದಲ್ಲಿ ಮೆಡಿಕಲ್ ಕಾಲೇಜು ಆಗುವುದರಿಂದ ತುಮಕೂರು ಹಾಗೂ ನೆಲಮಂಗಲಕ್ಕೆ ಅನುಕೂಲವಾಗಲಿದೆ ಬಸವಣ್ಣದೇವರ ಮಠದಲ್ಲಿ ಮೆಡಿಕಲ್ ಕಾಲೇಜು ಮಾಡಲು ಸಂಸದರು ಹಾಗೂ ನಾನು ಚರ್ಚೆ ಮಾಡುತ್ತೇವೆ ಎಂದರು.
ಸುತ್ತೂರು ಶ್ರೀಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, 12ನೇ ಶತಮಾನದ ಬಸವಣ್ಣನವರ ಆಸೆಯಂತೆ ಶ್ರೀಮಠದಲ್ಲಿ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ. ಬಸವ ಜಯಂತಿ ಸಂದರ್ಭದಲ್ಲಿ ಒಂದು ಸಾವಿರ ವಚನ ಹೇಳಿದರೆ ಒಂದು ಲಕ್ಷ ರು. ಬಹುಮಾನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಶ್ರೀಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
57 ಶ್ರೀಗಳಿಗೆ ಪಾದಪೂಜೆ:
ಕಾರ್ಯಕ್ರಮದಲ್ಲಿ ವಿವಿಧ ಮಠಗಳಲ್ಲಿ ಪೀಠಾಧ್ಯಕ್ಷರಾಗಿ 50 ವರ್ಷ ಪೂರೈಸಿದ ರಾಜ್ಯದ 57 ಮಠಗಳ ಹಿರಿಯ ಪೀಠಾಧ್ಯಕ್ಷ ಶ್ರೀಗಳಿಗೆ ಪಾದಪೂಜೆ ಮಾಡಿ ಗುರುವಂದನೆ ಸಲ್ಲಿಸಲಾಯಿತು, 57 ಕುಟುಂಬಗಳು ಪಾದಪೂಜೆ ಮಾಡಿದ್ದು ಪ್ರತಿ ಶ್ರೀಗಳಿಗೆ 50 ಸಾವಿರ ಗುರು ಕಾಣಿಕೆ, 50 ಕೆ.ಜಿಯ 2 ಮೂಟೆ ರುದ್ರಾಕ್ಷಿ, 50 ಕೆಜಿ ವಿಭೂತಿ, ಪುಸ್ತಕಗಳು ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ಎಲ್ಲಾ ಶ್ರೀಗಳಿಗೂ ಬಸವಣ್ಣ ದೇವರಮಠದ ಶ್ರೀಗಳು ನೀಡಿದರು.30 ಶಿಕ್ಷಕರಿಗೆ ಸದಾಶಿವ ಗುರುಶ್ರೀ ಪ್ರಶಸ್ತಿ:
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ವಿ.ನಾಗರಾಜು, ನಗರಸಭೆ ಅಧ್ಯಕ್ಷ ಎನ್.ಗಣೇಶ್, ಉಪಾಧ್ಯಕ್ಷ ಆನಂದ್, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ನಿರ್ದೇಶಕ ಸಿ.ಪಾಲಯ್ಯ, ಗೊಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಮಲ್ಲಯ್ಯ, ಬೆಂಗಳೂರು ಜಿಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ, ಹೊಂಬಯ್ಯ ಇತರರಿದ್ದರು.
ಪೋಟೋ 5 :ಬಸವಣ್ಣ ದೇವರಮಠದಲ್ಲಿ ರಾಜ್ಯದ 57 ಮಠಾಧೀಶರಿಗೆ ಪಾದಪೂಜೆ.
ಕಾರ್ಯಕ್ರಮವನ್ನು ಸಿದ್ದಗಂಗಾ ಮಠ ಹಾಗೂ ಸುತ್ತೂರು ಮಠದ ಶ್ರೀಗಳು, ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು.