ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕಲಾ ಮಂದಿರದಲ್ಲಿ ಜಿಲ್ಲಾ ಗಾಯಕರ ಟ್ರಸ್ಟ್ ಆಯೋಜಿಸಿದ್ದ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನ ಮತ್ತು ಸಂಗೀತ ರಸಮಂಜರಿ ಸಮಾರಂಭದಲ್ಲಿ ಮಾತನಾಡಿ, ಸಾಂಸ್ಕೃತಿಕ ಕಲಾವಿದರ ನಡೆ, ನುಡಿ, ಮಾನವೀಯತೆ, ಗುಣ, ಭಾಷಾ ಸೊಗಡು ಎಲ್ಲವನ್ನೂ ತಿಂಬಿಕೊಂಡಿರುವ ನಾಟಕ ರಚನಕಾರರಾಗಿರುತ್ತಾರೆ. ಜೊತೆಗೆ ಉತ್ತಮ ಗಾಯಕರಿಂದ ಸಾಹಿತ್ಯ ಜೀವಂತವಾಗಿರುತ್ತದೆ ಎಂದರು.
ಸಂಗೀತ-ಸಾಹಿತ್ಯ, ಸಾಂಸ್ಕೃತಿಕ ಸೊಗಡಿನಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಇಂತಹ ವೇದಿಕೆ ಬೇಕಾಗಿವೆ. ಕಮರ್ಷಿಯಲ್ ಸಭೆ-ಸಮಾರಂಭ ಮಾಡಿದರೂ ಜನ ಸೇರಲ್ಲ. ಸಂಗೀತ, ಕಲಾ ಕಾರ್ಯಕ್ರಮಗಳಲ್ಲಿ ಕಲಾಮಂದಿರಕ್ಕೆ ತುಂಬಿರುವ ಜನರನ್ನು ನೋಡಿದರೆ ಇವರಲ್ಲಿರುವ ಸಂಗೀತದ ಪ್ರೀತಿ, ಗೌರವ ಎಷ್ಟಿದೆ ಎಂಬುದನ್ನು ಮರೆಯಲು ಸಾಧ್ಯವಿಲ್ಲ ಎಂದರು.ಜಿಪಂ ಸಿಇಒ ಕೆ.ಆರ್.ನಂದಿನಿ, ಮಂಡ್ಯ ನೆಲ ಕಲೆ, ಸಾಹಿತ್ಯ ಸಂಗೀತಕ್ಕೆ ಅಪಾರವಾದ ಕೊಡಗೆ ನೀಡಿದೆ. ಇಲ್ಲಿ ಕೇವಲ ಕಾವೇರಿ ನದಿ ಮಾತ್ರ ಹರಿಯಲ್ಲ. ಮಂಡ್ಯ ಮಣ್ಣಿನಲ್ಲಿಯೂ ಸಕ್ಕರೆ ಇದೆ. ಎಲ್ಲರ ಬಾಯಲ್ಲೂ ಸಂಗೀತ-ಸಾಹಿತ್ಯವಿದೆ ಎಂದರು.
ಮುಂದಿನ ತಲೆಮಾರಿಗೆ ಸಂಗೀತ ಸಾಹಿತ್ಯ ಬೆಳೆಯಬೇಕಿದೆ. ಇಂದಿನ ತಂತ್ರಜ್ಞಾನದಿಂದಾಗಿ ಮನೆಯಲ್ಲಿಯೇ ಕುಳಿತು ಯಾವ ಸಂಗೀತ ಬೇಕು ಆ ಸಂಗೀತವನ್ನು ಕೇಳುವ ಕಲಿಯುವ ವ್ಯವಸ್ಥೆ ರೂಪುಗೊಂಡಿದೆ. ಟಿ.ವಿ, ಸಾಮಾಜಿಕ ಜಾಲತಾಣ, ಆಟಿಫಿಷಿಯಲ್ ಇಂಟಲಿಜೆನ್ಸ್ ಮೂಲಕ ಲಗ್ಗೆ ಇಡುತ್ತಿವೆ. ಸಂಗೀತ ಮತ್ತು ಸಾಹಿತ್ಯಕ್ಕೆ ಹಿಂದಿನ ದಶಕಗಳಲ್ಲಿ ಎನಿತ್ತು ಎನ್ನುವುದನ್ನು ತೆರೆದಿಡುತ್ತಿದೆ ಎಂದರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಗಾಯಕರಾದ ರಮೇಶ್‌ಚಂದ್ರ, ಶಶಿಕಲಾ ಸುನೀಲ್, ಡಾ.ಮಾದೇಶ್ ಮಂಜುನಾಥ್, ಯರಹಳ್ಳಿ ಪುಟ್ಟಸ್ವಾಮಿ, ಮೋಹನ್, ಮಹೇಶ್, ನೇತ್ರಾವತಿ, ಸರ್ವಮಂಗಳ ಇವರು ಜನಪ್ರಿಯ ಗೀತೆಗಳನ್ನು ಹಾಡಿ ರಂಜಿಸಿದರು.
ಸಮಾರಂಭದಲ್ಲಿ ಜಿಲ್ಲಾ ಗಾಯಕರ ಟ್ರಸ್ಟ್ ಅಧ್ಯಕ್ಷ ಡಾ.ಮಾದೇಶ್, ಎಎಎಸ್ಪಿ ತಿಮ್ಮಯ್ಯ, ಡಾ.ಕಿರಣ್‌ಕುಮಾರ್, ಗಾಯಕ ರಮೇಶ್ ಚಂದ್ರ, ಪೈಲ್ಸ್ ಶಸ್ತ್ರ ಚಿಕಿತ್ಸಕ ಡಾ.ಸಿ.ಎಂ.ಪರಮೇಶ್ವರ್, ಜಾನಪದ ಗಾಯಕ ಡಾ.ಮಳವಳ್ಳಿ ಮಹದೇವಸ್ವಾಮಿ, ಡಾ.ಮೈಸೂರು ಗುರುರಾಜ್, ರೋಗಶಾಸ್ತ್ರಜ್ಞ ಡಾ.ಚಂದ್ರಶೇಖರ್, ವೈದ್ಯರಾದ ಡಾ.ವೆಂಟಕರಮಣ, ಲೇಖಕಿ ಭವಾನಿ ಮತ್ತಿತರರಿದ್ದರು.