- ಜಿಲ್ಲಾಡಳಿತಕ್ಕೆ ರೈತ ಒಕ್ಕೂಟ ಮುಖಂಡರ ನಿಯೋಗ ಮನವಿ - - -
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಬತ್ತ ಖರೀದಿ ಕೇಂದ್ರ ಸ್ಥಾಪಿಸಿ, ಪ್ರೋತ್ಸಾಹಧನ ಸೇರಿಸಿ, ಪ್ರತಿ ಕ್ವಿಂಟಲ್‌ಗೆ ₹2920 ದರದಂತೆ ಬತ್ತ ಖರೀದಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ರೈತ ಒಕ್ಕೂಟ ಮುಖಂಡರ ನಿಯೋಗ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಒಕ್ಕೂಟದ ಮುಖಂಡರಾದ ಬಿ.ಎಂ.ಸತೀಶ ಕೊಳೇನಹಳ್ಳಿ, ಬೆಳವನೂರು ಬಿ.ನಾಗೇಶ್ವರ ರಾವ್, ಮಾಜಿ ಮೇಯರ್ ಎಚ್.ಎನ್. ಗುರುನಾಥ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಜಿ. ಗಣೇಶಪ್ಪ ಕುಂದುವಾಡ, ಪಾಲಿಕೆ ಮಾಜಿ ಸದಸ್ಯ ಎಚ್.ಎನ್. ಶಿವಕುಮಾರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.ಬಿ.ಎಂ.ಸತೀಶ ಮಾತನಾಡಿ, ಜಿಲ್ಲೆಯಲ್ಲಿ 4.5 ಲಕ್ಷ ಮೆಟ್ರಿಕ್ ಟನ್ ಬತ್ತ ಉತ್ಪಾದನೆ ನಿರೀಕ್ಷೆ ಇದೆ. ಕ್ವಿಂ.ಗೆ ₹2500ರಿಂದ ₹2650 ವರೆಗೆ ಬತ್ತ ಧಾರಣೆ ಇದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ರೈತರಿಂದ ಬತ್ತ ಖರೀದಿಸಬೇಕು. ಜಿಲ್ಲೆಯಲ್ಲಿ ತಕ್ಷಣ ಬತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಕನಿಷ್ಠ ಬೆಂಬಲ ಬೆಲೆಯಡಿ ಕ್ವಿಂ.ಗೆ 2320 ದರ ನಿಗದಿಯಾಗಿದೆ. ಇದು ರೈತನ ಶ್ರಮಕ್ಕೆ ತಕ್ಕುದಾಗಿಲ್ಲ. ಬಿಜೆಪಿ ಸರ್ಕಾರದಂತೆ ಕಾಂಗ್ರೆಸ್ ಸರ್ಕಾರವೂ ಕ್ವಿಂ.ಗೆ ₹600 ಪ್ರೋತ್ಸಾಹಧನ ಘೋಷಿಸಿ, ಬತ್ತ ಖರೀದಿಸಲಿ ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗೆ ಮನವಿ ಅರ್ಪಿಸುವ ಸಂದರ್ಭ ರೈತ ಮುಖಂಡರಾದ ವಿಜಯಕುಮಾರ, ಕಬ್ಬೂರು ಶಿವಕುಮಾರ, ಕುಂದುವಾಡ ಪುನೀತ್, ಮಹೇಶಪ್ಪ, ಜಿಮ್ಮಿ ಹನುಮಂತಪ್ಪ ಇತರರು ಇದ್ದರು.
* ಬತ್ತ ಖರೀದಿಗೆ ಟಾಸ್ಕ್ ಫೋರ್ಸ್ ಸಭೆ
- - - -15ಕೆಡಿವಿಜಿ4, 5: