ಸ್ವರಕ್ಷಣೆಗಾಗಿ ಮನೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಿ: ಎಸ್‌ಪಿ ಉಮಾ

KannadaprabhaNewsNetwork |  
Published : Jan 30, 2025, 12:31 AM IST
ಕ್ಯಾಪ್ಷನ29ಕೆಡಿವಿಜಿ31 ದಾವಣಗೆರೆಯ ಎಸ್‌ಎಸ್ ಬಡಾವಣೆಯ ಸ್ನೇಹಿತರ ಬಳಗದ ಸಂಘದಿಂದ ನಡೆದ ಹಾಸ್ಯ ಸಂಜೆ ಕಾರ್ಯಕ್ರಮವನ್ನು ಎಸ್‌ಪಿ ಉಮಾ ಪ್ರಶಾಂತ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಬಡಾವಣೆಗಳಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ಮನೆಗಳನ್ನು ಕಟ್ಟಿಸಿದ್ದೀರಿ. ಆದರೆ ಮನೆಗಳ ರಕ್ಷಣೆಗೆ ಹೆಚ್ಚಿನ ಮಹತ್ವ ಕೊಡುತ್ತಿಲ್ಲ. ಇದರಿಂದಾಗಿಯೇ ಕಳ್ಳಕಾಕರಿಗೆ ಅನುಕೂಲವಾಗುತ್ತಿದೆ. ಇದರಿಂದಾಗಿ ಸ್ನೇಹಮಯಿ ಪೋಲಿಸ್ ಇಲಾಖೆ ಮೇಲೆ ಸಹಜವಾಗಿ ಹೆಚ್ಚಿನ ಒತ್ತಡ ಬೀಳುತ್ತಿದೆ. ಅಪರಾಧಗಳ ತಡೆಗೆ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಎಸ್.ಎಸ್.ಬಡಾವಣೆ ಸ್ನೇಹಿತರ ಬಳಗ ಕಾರ್ಯಕ್ರಮ- - - ಕನ್ನಡಪ್ರಭ ವಾರ್ತೆ ದಾವಣಗೆರೆ ಬಡಾವಣೆಗಳಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ಮನೆಗಳನ್ನು ಕಟ್ಟಿಸಿದ್ದೀರಿ. ಆದರೆ ಮನೆಗಳ ರಕ್ಷಣೆಗೆ ಹೆಚ್ಚಿನ ಮಹತ್ವ ಕೊಡುತ್ತಿಲ್ಲ. ಇದರಿಂದಾಗಿಯೇ ಕಳ್ಳಕಾಕರಿಗೆ ಅನುಕೂಲವಾಗುತ್ತಿದೆ. ಇದರಿಂದಾಗಿ ಸ್ನೇಹಮಯಿ ಪೋಲಿಸ್ ಇಲಾಖೆ ಮೇಲೆ ಸಹಜವಾಗಿ ಹೆಚ್ಚಿನ ಒತ್ತಡ ಬೀಳುತ್ತಿದೆ. ಅಪರಾಧಗಳ ತಡೆಗೆ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.

ನಗರದ ಎಸ್.ಎಸ್. ಬಡಾವಣೆಯ ಎ ಬ್ಲಾಕಿನಲ್ಲಿ ಗಣರಾಜ್ಯೋತ್ಸವದಂದು ಎಸ್.ಎಸ್.ಬಡಾವಣೆ ಸ್ನೇಹಿತರ ಬಳಗದ ಸಂಘ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮ ಮನೆಗಳಿಗೆ ಸಿ.ಸಿ. ಟಿವಿಗಳನ್ನು ಅಳವಡಿಸಿಕೊಂಡಲ್ಲಿ ನಮ್ಮ ಇಲಾಖೆಗೆ ಸಹಕಾರಿಯಾಗುತ್ತದೆ. ಸಾರ್ವಜನಿಕರು ತೊಂದರೆಗೆ ಸಿಲುಕಿದಾಗ 112ಕ್ಕೆ ಕರೆ ಮಾಡಬೇಕು. ನಮ್ಮಗಳ ಬಗ್ಗೆ ನಾವು ಎಚ್ಚರ ವಹಿಸುವುದು ಅವಶ್ಯಕ. ಪ್ರಸ್ತುತ ಸೈಬರ್ ಕ್ರೈಂಗಳು ಹೆಚ್ಚಾಗುತ್ತಿವೆ. ಜನರು ವಂಚನೆಗೆ ಒಳಗಾಗಿ ಲಕ್ಷಗಟ್ಟಲೇ ಹಣ ಕಳೆದುಕೊಳ್ಳುತ್ತಿದ್ದಾರೆ. ಡಿಜಿಟಲ್ ಅರೆಸ್ಟ್ ಕರೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ವೈಯಕ್ತಿಕ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಒದಗಿಸಬಾರದು ಎಂದರು.

ದಾವಣಗೆರೆ ತಾಲೂಕು ತಹಸೀಲ್ದಾರ್ ಡಾ. ಎಂ.ಬಿ. ಅಶ್ವಥ್ ಮಾತನಾಡಿ, ದಾವಣಗೆರೆಯ ವಿವಿಧ ಬಡಾವಣೆ ಸೇರಿದಂತೆ ವಿದ್ಯಾನಗರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚಿನ ಕಳವು ಪ್ರಕರಣ, ಸುಲಿಗೆ ಹೆಚ್ಚಾಗಿದೆ. ಪೋಲೀಸ್ ಇಲಾಖೆಯ ಸೂಚನೆಗಳನ್ನು ಪ್ರತಿಯೊಬ್ಬರೂ ಪಾಲಿಸಲು ಮನವಿ ಮಾಡಿದರು.

ಸಂಘದ ಅಧ್ಯಕ್ಷ ಎಂ.ಆಂಜನೇಯುಲು ಮಾತನಾಡಿ, ಸಂಘದ ಪದಾಧಿಕಾರಿಗಳು, ಬಡಾವಣೆ ಸ್ನೇಹಿತ ಬಂಧುಗಳು ತನು, ಮನ, ಧನ ನೀಡಿ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕಾರಿಯಾಗಿದ್ದಾರೆ. ಇದೇ ರೀತಿ ಎಲ್ಲರೂ ಸಹಕಾರ ನೀಡಿದರೆ ನಾವು ದೊಡ್ಡ ಸಾಧನೆ ಮಾಡಬಹುದು ಎಂದರು.

ಸಂಘದ ಕಾರ್ಯದರ್ಶಿ ಎಂ.ಎಸ್.ದೇವರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘವು ನಾಗರೀಕರಿಗೆ ಸ್ವಚ್ವತೆ, ಪರಿಸರ ರಕ್ಷಣೆ, ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಕಾರ್ಯಕ್ರಮ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಸ್ಥಳೀಯರ ಸಹಕಾರದಿಂದ ನಡೆಸಲಾಗುವುದು ಸಂಘದ ಸದುದ್ದೇಶ ಹೊಂದಿದೆ. ಬಡಾವಣೆ ಯ ಎಲ್ಲಾ ಸ್ನೇಹಿತರು ಸಂಘದ ಸದಸ್ಯರಾಗಲು ಕೋರಿಕೊಂಡರು.

ಈ ಸಂದರ್ಭ ಸಾಧಕರಾದ ಪರಿಸರಪ್ರೇಮಿ ಪ್ರಸೂತಿ, ಸ್ತ್ರೀರೋಗ ತಜ್ಞೆ ಡಾ.ಶಾಂತಾ ಭಟ್, ದಾವಣಗೆರೆ ಜಿಲ್ಲೆ ಕ್ಯಾನ್ಸರ್ ಅಭಿಯಾನದ ರಾಯಭಾರಿ ಆರ್.ಟಿ. ಅರುಣಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯ ಶಿವನಳ್ಳಿ ರಮೇಶ, ಸಂಘಟನಾ ಕಾರ್ಯದರ್ಶಿ ಟಿ.ನಾಗರಾಜ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯರು, ಇತರರು ಭಾಗವಹಿಸಿದ್ದರು.

ಅನಂತರದಲ್ಲಿ ಹಾಸ್ಯ ಭಾಷಣಕಾರರಾದ ಗಂಗಾವತಿ ಪ್ರಾಣೇಶ್, ನರಸಿಂಹ ಜೋಶಿ, ಬಸವರಾಜ ಮಹಾಮನಿ ಹಾಸ್ಯ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.

- - - -29ಕೆಡಿವಿಜಿ31.ಜೆಪಿಜಿ:

ದಾವಣಗೆರೆಯ ಎಸ್‌ಎಸ್ ಬಡಾವಣೆಯ ಸ್ನೇಹಿತರ ಬಳಗದ ಸಂಘದಿಂದ ನಡೆದ ಹಾಸ್ಯ ಸಂಜೆ ಕಾರ್ಯಕ್ರಮವನ್ನು ಎಸ್‌ಪಿ ಉಮಾ ಪ್ರಶಾಂತ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ