ಕನ್ನಡಪ್ರಭ ವಾರ್ತೆ ಮಂಡ್ಯ
ನಗರದಲ್ಲಿರುವ ಪ್ರವಾಸಿ ಮಂದಿರದಲ್ಲಿ ಸಮಾನ ಮನಸ್ಕರು ಮತ್ತು ವಿವಿಧ ಸಂಘ-ಸಂಸ್ಥೆಗಳ ಮುಖಂಡರು-ವಿವಿಧ ಇಲಾಖೆಗಳ ನಿವೃತ್ತ ಅಧಿಕಾರಿಗಳ ಸಮ್ಮುಖದಲ್ಲಿ ಆಧುನಿಕ ಮಹಿಳೆಯರಿಂದ ಪುರುಷರ ಮೇಲಿನ ದೌರ್ಜನ್ಯ ಮತ್ತು ದಬ್ಬಾಳಿಕೆ ನಿಯಂತ್ರಣ ಮತ್ತು ಹೋರಾಟ ರೂಪಿಸುವ ಸಮಿತಿ ರಚನೆಯ ಪೂರ್ವಭಾವಿ ಸಭೆ ನಡೆದು ಹಲವು ನಿರ್ಣಯಗಳ ಕುರಿತು ಚರ್ಚಿಸಿದ ಬಳಿಕ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪುರುಷ ಮೇಲಿನ ದೌರ್ಜನ್ಯಗಳನ್ನು ಗಂಬೀರವಾಗಿ ಯಾರೂ ಪರಿಣಿಸುತ್ತಿಲ್ಲ. ಈ ಕುರಿತು ಆಲೋಚನೆ ಮಾಡಬೇಕಿದೆ. ಸಫಲತೆ ಪಡೆಯಬೇಕಿದೆ, ಸಂಘಟನೆ ರಚನೆಗೊಳ್ಳಬೇಕಿದೆ ಎನ್ನುವ ಸುದೀರ್ಘ ಚರ್ಚೆ ನಡೆದಿದೆ. ಸಾಕಷ್ಟು ಮಂದಿ ಉತ್ತಮ ಸಲಹೆ ಅಭಿಪ್ರಾಯ-ಮಾರ್ಗಸೂಚನೆಗಳನ್ನು ನೀಡಿದ್ದೀರಿ ಎಂದು ನುಡಿದರು.ಸ್ವಾತಂತ್ರ್ಯ ಬಂದ ನಂತರದಲ್ಲಿ ಹೆಣ್ಣುಮಕ್ಕಳಿಗೆ ಎಲ್ಲಾ ಕಾನೂನು ರಕ್ಷಣೆಗಳು ಹೆಚ್ಚಾಗಿವೆ. ಹಿಂದೆ ಪುರುಷರ ದೌರ್ಜನ್ಯ ಇತ್ತು, ಆ ನಂತರದ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳು ಕಾನೂನಾತ್ಮಕವಾಗಿ ಬಂದವು. ಇದೀಗ ಕೆಲವು ಮಹಿಳೆಯರಿಂದ ತನ್ನ ಕೌಟುಂಬಿಕ ಜೀವನದಲ್ಲಿ ಪುರುಷರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದು ಎಚ್ಚರಿಸಿದರು.
ಬಳಿಕ ಮಾತನಾಡಿದ ಧ್ವನಿ ಲಯನ್ಸ್ ಸಂಸ್ಥೆ ಅಧ್ಯಕ್ಷೆ ಮತ್ತು ಕೌಟುಂಬಿಕ ಸಮಸ್ಯೆಗಳ ಸಮಾಲೋಚಕಿ ರಜನಿರಾಜ್, ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಸಮಸ್ಯೆಗಳ ಸಾಲಿನಲ್ಲಿ ಪುರುಷರಿಗೆ ಆಗುತ್ತಿರುವ ದೌರ್ಜನ್ಯಗಳ ಪ್ರಕರಣ ಹೆಚ್ಚಾಗುತ್ತಿವೆ, ಮಹಿಳಾ ಆಯೋಗ ಇರುವಂತೆಯೇ ಪುರುಷ ಆಯೋಗ ರಚನೆಯಾಗಬೇಕಿದೆ ಎಂದು ಸಲಹೆ ನೀಡಿದರು.
ಪೊಲೀಸ್ ಇಲಾಖೆಯಲ್ಲಿ ಮಹಿಳಾ ಕುಂದುಕೊರತೆ ವಿಭಾಗ, ಮಹಿಳಾ ಠಾಣೆ ಇದೆ. ಎಲ್ಲಾ ಮಹಿಳಾ ಸಂಘಟನೆಗಳು ಮುಂಚೂಣಿಯಲ್ಲಿವೆ, ಪುರುಷರಿಗೆ ಯಾಕೆ ಇಷ್ಟು ರಕ್ಷಣಾತ್ಮಕ ಕಾನೂನು ಇಲ್ಲ, ಪುರುಷರ ಮೇಲೆ ಆಗುವ ದೌರ್ಜನ್ಯಗಳ ನಿಯಂತ್ರಣ ಮಾಡುವವರು?, ದೌರ್ಜನ್ಯಕ್ಕೊಳಗಾದ ಒಬ್ಬಟ್ಟಿ ಪುರುಷರ ರಕ್ಷಣೆ ಹೇಗೆ ನಡೆಯುತ್ತದೆ ಎನ್ನುವು ಪ್ರಶ್ನೆಗಳು ಸಮಾಜದಲ್ಲಿ ಎದ್ದಿವೆ ಎಂದರು.
ಸಭೆಯಲ್ಲಿ ವಿವಿಧ ಸಂಘನೆಗಳ ಮುಖಂಡರಾದ ಎನ್.ವೈ.ಕೆ ನಿವೃತ್ತ ಅಧಿಕಾರಿ ಎಂ.ಎನ್.ನಟರಾಜು, ನಿವೃತ್ತ ಅಧಿಕಾರಿ ಎಚ್.ಎಂ.ಬಸವರಾಜು, ಪ್ರೊ.ಜಿ.ಟಿ.ವೀರಪ್ಪ, ಮಾಜಿ ಪೊಲೀಸ್ ಅಧಿಕಾರಿ ಸತೀಶ್, ಹಿರಿಯ ವಕೀಲ ಮಲ್ಲಿಕಾರ್ಜುನಯ್ಯ, ಎಂ.ಗುರುಪ್ರಸಾದ್, ಪತ್ರಕರ್ತ ಎಂ.ಶಿವಕುಮಾರ್, ಬೆಟ್ಟಹಳ್ಳಿ ಮಂಜುನಾಥ್, ಶಂಕುಂತಲಾ, ನಿಚಿತಾಗೌಡ, ಅರಸು ಮತ್ತಿತರರಿದ್ದರು.