ಇವಿಎಂ ಟ್ಯಾಪ್‌ ಮಾಡಿದವ್ರಿಗೆ ಫೋನ್‌ ದೊಡ್ಡದಲ್ಲ

KannadaprabhaNewsNetwork |  
Published : Nov 15, 2026, 02:45 AM IST
ಜಯವಂತ ಹಮ್ಮಣ್ಣವರ | Kannada Prabha

ಸಾರಾಂಶ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಯವರಿಗೆ ಫೋನ್‌ ಟ್ಯಾಪಿಂಗ್‌ ಅನುಭವ ಆಗಿರಬೇಕು, ಇವಿಎಂ ಟ್ಯಾಪ್‌ ಮಾಡಿದವರಿಗೆ ಫೋನ್ ಟ್ಯಾಪ್ ಮಾಡೋದು ದೊಡ್ಡ ವಿಷಯವಲ್ಲ. ಇಡಿ, ಸಿಬಿಐ, ಐಟಿ ಬಿಜೆಪಿ ಅಂಡರ್‌ ಕಂಪನಿಗಳಾಗಿವೆ. ಹೀಗಾಗಿ ಟ್ಯಾಪಿಂಗ್ ಮಾಡಿರೋದು ಅಚ್ಚರಿ ಏನಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಯವರಿಗೆ ಫೋನ್‌ ಟ್ಯಾಪಿಂಗ್‌ ಅನುಭವ ಆಗಿರಬೇಕು, ಇವಿಎಂ ಟ್ಯಾಪ್‌ ಮಾಡಿದವರಿಗೆ ಫೋನ್ ಟ್ಯಾಪ್ ಮಾಡೋದು ದೊಡ್ಡ ವಿಷಯವಲ್ಲ. ಇಡಿ, ಸಿಬಿಐ, ಐಟಿ ಬಿಜೆಪಿ ಅಂಡರ್‌ ಕಂಪನಿಗಳಾಗಿವೆ. ಹೀಗಾಗಿ ಟ್ಯಾಪಿಂಗ್ ಮಾಡಿರೋದು ಅಚ್ಚರಿ ಏನಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದರು.

ಪ್ರಧಾನಿಯಿಂದ ರಾಹುಲ್‌ ಗಾಂಧಿ ಫೋನ್ ಟ್ಯಾಪಿಂಗ್ ವಿಚಾರವಾಗಿ ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ಯಾರೊಬ್ಬರ ಪ್ರೈವೇಸಿಗೆ ಧಕ್ಕೆ ಆಗಬಾರದು. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಈಗಾಗಲೇ ಜನರು ಹತಾಶಗೊಂಡಿದ್ದಾರೆ. ಮೋದಿ ಡೌನ್ ಫಾಲ್ ಶುರುವಾಗಿದೆ. ಹೀಗಾಗಿ, ಇಂತಹ ಕೆಲಸ ಶುರು ಮಾಡಿದ್ದಾರೆ. ಇದು ತನಿಖೆ ಆಗಬೇಕು ಎಂದು ಒತ್ತಾಯಿಸಿದರು.ಮೆಟ್ರೋ ಉದ್ಘಾಟನೆ ಕುರಿತು ಲೇವಡಿ ಮಾಡಿದ ಎಂ.ಬಿ.ಪಾಟೀಲ, ಬರೀ 7 ಕಿ.ಮೀ ಮೆಟ್ರೋ ಉದ್ಘಾಟನೆಗೆ ಪ್ರಧಾನ ಮಂತ್ರಿಗಳು ಬರುವ ಅವಶ್ಯಕತೆ ಇತ್ತಾ? ನಮ್ಮ ಸಿಎಂ ಡಿ.ಕೆ.ಶಿವಕುಮಾರ ಅವರು ಮೋದಿ ಮುಂದೆಯೇ ಎಲ್ಲವನ್ನು ತೆರೆದಿಟ್ಟಿದ್ದಾರೆ. ಬರ ಪರಿಹಾರ ಕೊಡಿ, ಕಬ್ಬು ರೈತರ ಎಂಎಸ್‌ಪಿ ಬಗ್ಗೆ, ಮೆಟ್ರೋದಲ್ಲಿ ರಾಜ್ಯದ ಕೊಡುಗೆ ಏನು, ರೈತರಿಗೆ ಬರ ಪರಿಹಾರವಾಗಿ ₹22 ಸಾವಿರ ಕೋಟಿ ಬಿಡುಗಡೆ ಮಾಡಿ ಎಂದಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಬೇಡಿ. ಕರ್ನಾಟಕಕ್ಕೆ ನ್ಯಾಯ ಕೊಡಿ ಎಂದಿದ್ದಾರೆ. ನಮ್ಮ ರಾಜ್ಯಕ್ಕೆ ಇಂಡಸ್ಟ್ರಿ ಬಂದಾಗ ಬೇರೆ ರಾಜ್ಯಗಳಿಗೆ ಡೈವರ್ಟ್ ಮಾಡಿದ್ದಾರೆ, ಇದು ಸರಿಯಲ್ಲ, ಎಲ್ಲ ರಾಜ್ಯಗಳನ್ನು ಒಂದಾಗಿ ನೋಡಬೇಕು. ಯಾವ ರಾಜ್ಯಗಳ ಮೆರಿಟ್ ಇರುತ್ತೋ, ಆಸಕ್ತಿ ತೋರಿಸಿರುತ್ತಾರೋ ಅಲ್ಲಿ ಇಂಡಸ್ಟ್ರಿ ಹೋಗಬೇಕು. ಪಕ್ಷದ ಆಧಾರದ ಮೇಲೆ ಅಭಿವೃದ್ಧಿ ಮಾಡುತ್ತಿದ್ದಾರೆ, ಇದೆಲ್ಲವನ್ನು ಸಿಎಂ ಮಾತನಾಡಿದ್ದಾರೆ ಎಂದು ತಿಳಿಸಿದರು.ಕೇಂದ್ರ ಸಹಕಾರ ಕೊಟ್ಟ ಮೇಲೆ 100 ಕಿಮೀ‌ ಮೆಟ್ರೋ ಆಗಿದೆ ಎಂದು ಮೋದಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಇದರಲ್ಲಿ ರಾಜ್ಯದ ಪಾಲೂ ಇರುತ್ತದೆ. ಕೇಂದ್ರದ ಪಾಲು ಇರುತ್ತದೆ. ಒಂದು ಮೂರನೇ ಪಾಲು ಲೋನ್ ಪಾರ್ಟ್ ಇರುತ್ತೆ. ಲೋನ್ ಪಾರ್ಟ್ ಕೇಂದ್ರ ಸರ್ಕಾರದ್ದಲ್ಲ. ಲೋನ್ ಪಾರ್ಟ್‌ ಅನ್ನು ಸ್ವತಃ ನಿಗಮ ತೀರಿಸುತ್ತೆ. ಈಗಾಗಲೇ ಕೃಷ್ಣ ಬೈರೇಗೌಡರು ಎಲ್ಲವನ್ನು ಹೇಳಿದ್ದಾರೆ. ಅವರು ಕೊಟ್ಟಿದ್ದಲ್ಲ ಅದು, ಸಾಲ ಅದು. ನಮ್ಮ ಸಾಲ ನಾವು ತೀರಿಸುತ್ತೇವೆ. ಅವರ ಸಾಲ ಅವರು ತೀರಿಸ್ತಾರೆ ಎಂದರು.ಹೇಳಿಕೊಳ್ಳೋದೆ ಇದ್ರೆ, ₹ 22 ಸಾವಿರ ಕೋಟಿ ಪರಿಹಾರ ನೀಡಲಿ, ರೈತರ ಕಬ್ಬಿನ ಎಂಎಸ್‌ಪಿ ನೀಡಲಿ. ಸೆಮಿ ಇಂಡಸ್ಟ್ರಿಗಳಿಗೆ ಹಣ ನೀಡಲಿ ಎಂದು ಸವಾಲು ಹಾಕಿದರು. ಅಪರ್‌ ಭದ್ರಾ ಯೋಜನೆಗೆ ₹5 ಸಾವಿರ ಕೋಟಿ ಘೋಷಣೆ ಮಾಡಿ ಇನ್ನೂ ಕೊಟ್ಟಿಲ್ಲ. ಕ್ಯಾಬಿನೆಟ್‌ನಲ್ಲಿ ಹೇಳಿಕೆ ಸಹ ಕೊಟ್ಟಿಲ್ಲ, ಇನ್ನೂ ಏನು ಉದಾಹರಣೆ ಬೇಕು ಎಂದು ಸಚಿವ ಎಂ.ಬಿ.ಪಾಟೀಲ ಟೀಕಿಸಿದರು.ವೈಯಕ್ತಿಕ ಯಾರೊಬ್ಬರದು ಪ್ರೈವೇಸಿಗೆ ಧಕ್ಕೆ ಆಗಬಾರದು. ಮೋದಿ ಬಗ್ಗೆ ಜನರು ಹತಾಶಗೊಂಡಿದ್ದಾರೆ, ಮೋದಿ ಡೌನ್ ಫಾಲ್ ಶುರುವಾಗಿದೆ. ಹೀಗಾಗಿ, ಇಂತಹ ಕೆಲಸ ಮಾಡುವ ಮೂಲಕ ಷಡ್ಯಂತ್ರ ಮಾಡುತ್ತಿದ್ದಾರೆ. ಈಗ ಮೋದಿ ಜನಪ್ರಿಯತೆ ಕಳೆದುಕೊಂಡಿದ್ದಾರೆ, ರಾಹುಲ್‌ ಗಾಂಧಿ ಉದ್ಯೋಗಕ್ಕಾಗಿ, ಶಿಕ್ಷಣಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಇದರಿಂದ ಮೋದಿ ಹತಾಶೆಗೊಂಡು ರಾಹುಲ್‌ ಗಾಂಧಿ ಪೋನ್‌ ಟ್ಯಾಪ್ ಮಾಡಲಾಗಿದೆ.

- ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫಿಲ್ಟರ್‌ ಮಾಡದೇ ಕಲುಷಿತ ನೀರು ಪೂರೈಕೆ ?
ಚಳಿಗಾಲದ ಅಧಿವೇಶನಕ್ಕೆ ಹೆಸ್ಕಾಂ ಸಕಲ ಸಿದ್ಧತೆ